₹3.60 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ

‘ರಾಮ್‌ಜೀ ಗ್ಯಾಂಗ್‌’ನ ಐವರ ಬಂಧನ

ಸತ್ಯನಾರಾಯಣ (44), ಮುರಳಿ (30), ರವಿಕುಮಾರ್ (40), ಶಿವ ವೆಂಕಟೇಶ್ (45) ಹಾಗೂ ವೆಂಕಟೇಶ್‌ (48) ಬಂಧಿತರು. ಅವರಿಂದ ₹3.60 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಬೆಂಗಳೂರು: ₹10 ನೋಟನ್ನು ರಸ್ತೆಯಲ್ಲಿ ಎಸೆದು ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ‘ರಾಮ್‌ಜೀಗ್ಯಾಂಗ್‌’ನ ಐವರು ಸದಸ್ಯರನ್ನು ಜಯನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸತ್ಯನಾರಾಯಣ (44), ಮುರಳಿ (30), ರವಿಕುಮಾರ್ (40), ಶಿವ ವೆಂಕಟೇಶ್ (45) ಹಾಗೂ ವೆಂಕಟೇಶ್‌ (48) ಬಂಧಿತರು. ಅವರಿಂದ ₹3.60 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಗಮನ ಬೇರೆಡೆ ಸೆಳೆದು ನಗದು ಹಾಗೂ ಚಿನ್ನಾಭರಣ ಕದ್ದ ಬಗ್ಗೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅವುಗಳನ್ನು ಭೇದಿಸಲು ರಚಿಸಲಾ
ಗಿದ್ದ ವಿಶೇಷ ತಂಡವು ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

ಜನಸಂದಣಿ ಹೆಚ್ಚಿರುತ್ತಿದ್ದ ಮಾಲ್‌, ಕಾರು ಪಾರ್ಕಿಂಗ್‌ ಸ್ಥಳ, ಬ್ಯಾಂಕ್‌ ಆವರಣದಲ್ಲಿ ಆರೋಪಿಗಳು ಸುತ್ತಾಡುತ್ತಿದ್ದರು. ಒಬ್ಬಾತ, ₹10 ನೋಟಗಳನ್ನು ರಸ್ತೆ
ಯಲ್ಲಿ ಬಿಸಾಡಿ ಹೋಗುತ್ತಿದ್ದ. ಆತನ ಹಿಂದೆಯೇ ಬರುತ್ತಿದ್ದ ಮತ್ತೊಬ್ಬ, ಹಣ ಬಿದ್ದಿರುವುದಾಗಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯುತ್ತಿದ್ದ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯವು ಆರೋಪಿಗಳ ಸುಳಿವು ನೀಡಿತ್ತು. ಬನಶಂಕರಿ, ಜಯನಗರ, ಬಸವನಗುಡಿ ಹಾಗೂ ಜೆ.ಪಿ. ನಗರ ಠಾಣೆಗಳ ವ್ಯಾಪ್ತಿಯಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018