ಅನಾರೋಗ್ಯ

ಒಂದೇ ದಿನ ತಾಯಿ, ಮಗಳು ಸಾವು

ತಾಯಿ ಪುಟ್ಟಲಿಂಗಮ್ಮ (75) ಸೋಮವಾರ ಬೆಳಿಗ್ಗೆ ಮೃತಪಟ್ಟರು. ಅವರು ಹಲವಾರು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದರು. ಇದೇ ರೀತಿ ಅವರ ಮಗಳು ಪದ್ಮಮ್ಮ (55) ಅನಾರೋಗ್ಯದಿಂದ ನಿಧನರಾದರು.

ಪದ್ಮಮ್ಮ ಹಾಗೂ ಪುಟ್ಟಲಿಂಗಮ್ಮ

ಚನ್ನಪಟ್ಟಣ: ತಾಲ್ಲೂಕಿನ ತಗಚಗೆರೆ ಗ್ರಾಮದವರಾದ ತಾಯಿ ಹಾಗೂ ಮಗಳು ಇಬ್ಬರು ಒಂದೇ ದಿನ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದಾರೆ.

ತಾಯಿ ಪುಟ್ಟಲಿಂಗಮ್ಮ (75) ಸೋಮವಾರ ಬೆಳಿಗ್ಗೆ ಮೃತಪಟ್ಟರು. ಅವರು ಹಲವಾರು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿದ್ದರು. ಇದೇ ರೀತಿ ಅವರ ಮಗಳು ಪದ್ಮಮ್ಮ (55) ಅನಾರೋಗ್ಯದಿಂದ ನಿಧನರಾದರು.

ಪದ್ಮಮ್ಮ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪುಟ್ಟಲಿಂಗಮ್ಮ ಮೃತಪಟ್ಟಿರುವ ವಿಚಾರ ತಿಳಿಯುವ ಮೊದಲೇ ಪದ್ಮಮ್ಮ ಮೃತಪಟ್ಟಿದ್ದಾರೆ. ಪದ್ಮಮ್ಮ ಅವರನ್ನು ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಅವರು ಚನ್ನಪಟ್ಟಣದಲ್ಲಿ ವಾಸವಿದ್ದರು.

ಒಂದೇ ದಿನ ತಾಯಿ ಮಗಳು ಇಬ್ಬರು ಸಾವನ್ನಪ್ಪಿರುವುದರಿಂದ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಪುಟ್ಟಲಿಂಗಮ್ಮ ಮೃತದೇಹದ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಿತು. ಪದ್ಮಮ್ಮ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018