ಕನಕಪುರ

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ದಿವಂಗತ ದೇಶಿಲಿಂಗೇಗೌಡರ ಮಗ ಸೋಮಶೇಖರ್‌ (36), ಸೊಸೆ ಸುಧಾ (27), ಈ ದಂಪತಿಯ ಒಂದೂವರೆ ವರ್ಷದ ಮಗು ಪ್ರೀತಮ್‌ ಮೃತರು.

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕನಕಪುರ: ಕಸಬಾ ಹೋಬಳಿ ಜವನಮ್ಮನದೊಡ್ಡಿ ಪಕ್ಕದ ಲಕ್ಷ್ಮೀಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸೋಮವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿವಂಗತ ದೇಶಿಲಿಂಗೇಗೌಡರ ಮಗ ಸೋಮಶೇಖರ್‌ (36), ಸೊಸೆ ಸುಧಾ (27), ಈ ದಂಪತಿಯ ಒಂದೂವರೆ ವರ್ಷದ ಮಗು ಪ್ರೀತಮ್‌ ಮೃತರು.

ದಂಪತಿಗೆ ಪ್ರೇರಣಾ ಎಂಬ ಮಗಳಿದ್ದಾಳೆ. ಮೂರನೇ ತರಗತಿಯಲ್ಲಿ ಓದುತ್ತಿರುವ ಆಕೆ ಸೇಂಟ್‌ ರೀಟಾ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಪ್ರೇರಣಾ, ಕಿಟಕಿಯಿಂದ ನೋಡಿದಾಗ ತಾಯಿ ಮತ್ತು ತಮ್ಮ ನೇತಾಡುತ್ತಿರುವುದನ್ನು ಗಮನಿಸಿ ಸಮೀಪ
ದಲ್ಲೇ ಇನ್ನೊಂದು ಮನೆಯಲ್ಲಿ ವಾಸವಿದ್ದ ಅಜ್ಜಿಗೆ ತಿಳಿಸಿದ್ದಾಳೆ. ನಂತರ ಅಕ್ಕಪಕ್ಕದವರು ಬಂದು ಬಾಗಿಲು ಒಡೆದು ಒಳಹೋಗಿ ನೋಡಿದಾಗ ತಾಯಿ ಮಗು ಮನೆಯ ಹಾಲ್‌ನಲ್ಲಿ, ಸೋಮಶೇಖರ್‌ ಸ್ನಾನಗೃಹದಲ್ಲಿ ನೇಣು ಹಾಕಿಕೊಂಡಿದ್ದರು.

ಸೋಮಶೇಖರ್‌ ರೇಷ್ಮೆ ಗೂಡಿನ ವ್ಯಾಪಾರ ಮಾಡುತ್ತಿದ್ದು ಗೂಡಿನ ಬಾಬ್ತು ರೈತರಿಗೆ ಹಣವನ್ನು ಕೊಡಬೇಕಾಗಿತ್ತು. ರೈತರು ಮನೆ ಮುಂದೆ ಬಂದು ಹಣ ನೀಡುವಂತೆ ಒತ್ತಾಯಿಸಿದಾಗ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ದರು. ಮಗುವಿನ ಜತೆ ಸುಧಾ ಆತ್ಮಹತ್ಯೆ ಮಾಡಿಕೊಂಡಿರಬಹುದು. ನಂತರ ಸೋಮಶೇಖರ್‌ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018