ಪಿಎಫ್‌ಐ ಸತ್ಯಾಸತ್ಯತೆ ವರದಿ

ಸರ್ಕಾರ ಹಿಂಪಡೆದಿದ್ದು ಮೂರು ಪ್ರಕರಣ ಮಾತ್ರ

‌2009ರ ಜುಲೈ2ರಂದು ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದ 40 ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಇವುಗಳ ಪೈಕಿ ಮೂರು ಮಾತ್ರ ಪಿಎಫ್‌ಐ ಮೇಲೆ ದಾಖಲಾಗಿದ್ದವು.

ಬೆಂಗಳೂರು: ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ವಿರುದ್ಧದ 175 ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಎಂಬುದು ಸುಳ್ಳು ಮಾಹಿತಿ ಎಂದು ಪಿಎಫ್‌ಐ ಸ್ಪಷ್ಟಪಡಿಸಿದೆ.

‌2009ರ ಜುಲೈ2ರಂದು ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದ 40 ಪ್ರಕರಣಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಇವುಗಳ ಪೈಕಿ ಮೂರು ಮಾತ್ರ ಪಿಎಫ್‌ಐ ಮೇಲೆ ದಾಖಲಾಗಿದ್ದವು. ಉಳಿದವು ಶ್ರೀರಾಮಸೇನೆ, ಬಜರಂಗದಳ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ಪ್ರಕರಣಗಳು ಎಂದು ಪಿಎಫ್‌ಐ ಸಿದ್ಧಪಡಿಸಿರುವ ಸತ್ಯಾಸತ್ಯತೆ ವರದಿಯಲ್ಲಿ ತಿಳಿಸಿದೆ.

2010ರ ಫೆ.2 ರಂದು ಹಾಸನ ಮತ್ತು ಶಿವಮೊಗ್ಗದಲ್ಲಿ ನಡೆದ ಗಲಭೆಯಲ್ಲಿ 135 ಪ್ರಕರಣ ದಾಖಲಾಗಿದ್ದು, ಅವುಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಆದರೆ, ಈ ಪ್ರಕರಣಗಳಲ್ಲಿ ಪಿಎಫ್‌ಐ ಕಾರ್ಯಕರ್ತರ ಹೆಸರಿರಲಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಆದರೂ ಹಿಂದೂ ವಿರೋಧಿ ಸರ್ಕಾರವೆಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹೊರಟಿದೆ. ಸಂವಿಧಾನಕ್ಕೆ ಬದ್ಧವಾಗಿ ನ್ಯಾಯ ಮತ್ತು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಪಿಎಫ್‌ಐ ಎಂದೂ ಈ ವರದಿಯಲ್ಲಿ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018