ಪಾಲಿಕೆ ಸದಸ್ಯೆ ರೇಖಾ ಅವರ ಪತಿ ಎಸ್. ಕದಿರೇಶ್‌ ಕೊಲೆ ಪ್ರಕರಣ

ಇಬ್ಬರು ಆರೋಪಿಗಳು ಶರಣು

ಆಂಜನಪ್ಪ ಗಾರ್ಡನ್‌ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ಫೆ. 7ರಂದು ಕದಿರೇಶ್‌ ಕೊಲೆ ನಡೆದಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರು, ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡಿದ್ದರು. ಅಲ್ಲಿಂದಲೇ ನಗರಕ್ಕೆ ಬಂದಿದ್ದ ಅವರು ವಕೀಲರ ಜತೆಗೆ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರಾದರು.

ಕದಿರೇಶ್

ಬೆಂಗಳೂರು: ಪಾಲಿಕೆಯ ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಎಸ್‌. ಕದಿರೇಶ್‌ ಕೊಲೆ ಪ್ರಕರಣದ ಆರೋಪಿಗಳಾದ ನವೀನ್‌ ಹಾಗೂ ಆತನ ತಮ್ಮ ವಿನಯ್‌ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.

ಆಂಜನಪ್ಪ ಗಾರ್ಡನ್‌ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ಫೆ. 7ರಂದು ಕದಿರೇಶ್‌ ಕೊಲೆ ನಡೆದಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರು, ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡಿದ್ದರು. ಅಲ್ಲಿಂದಲೇ ನಗರಕ್ಕೆ ಬಂದಿದ್ದ ಅವರು ವಕೀಲರ ಜತೆಗೆ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರಾದರು.

‘ತನಿಖೆಗೆ ಸಹಕರಿಸಲು ನಾವು ಸಿದ್ಧ. ನ್ಯಾಯಾಂಗ ಬಂಧನಕ್ಕೆ ನೀಡಬೇಕು’ ಎಂದು ಕೋರಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಟನ್‌ಪೇಟೆ ಪೊಲೀಸರು, ‘ಆರೋಪಿಗಳ ವಿರುದ್ಧ ಗಂಭೀರ ಆರೋಪ ಇದೆ. ಕೊಲೆ ನಡೆದ ದಿನದಿಂದಲೇ ಆರೋಪಿಗಳಿಗಾಗಿ ನಾಲ್ಕು ತಂಡಗಳು ನಿರಂತರವಾಗಿ ಶೋಧ ನಡೆಸುತ್ತಿವೆ. ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಆರೋಪಿಗಳು, ಅಮಾಯಕ ವ್ಯಕ್ತಿಯ ಬೈಕ್‌ ಕಸಿದುಕೊಂಡು ಹೋಗಿದ್ದಾರೆ. ಅವರಿಗೂ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ವಿಚಾರಣೆಗಾಗಿ ಅವರಿಬ್ಬರನ್ನು ಕಸ್ಟಡಿಗೆ ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳನ್ನು 10 ದಿನಗಳವರೆಗೆ ಪೊಲೀಸರ ಕಸ್ಟಡಿಗೆ ನೀಡಿದೆ.

ಮೂವರಿಗಾಗಿ ಶೋಧ: ಪ‍್ರಕರಣದಲ್ಲಿಇನ್ನೂ ಮೂವರು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅವರಿಗಾಗಿ ಶೋಧ ಮುಂದುವರಿಸಿದ್ದಾರೆ.

‘ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದೇವೆ. ಕೊಲೆಯಲ್ಲಿ ಅವರ ಪಾತ್ರವೇನು ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ’ ಎಂದು ಡಿಸಿಪಿ ಅನುಚೇತ್‌ ತಿಳಿಸಿದರು.

ಸೂಟ್‌ ಧರಿಸಿ ಬಂದರು...

‘ಪೊಲೀಸರು ಗುಂಡು ಹಾರಿಸಿ ತಮ್ಮನ್ನು ಬಂಧಿಸಬಹುದು ಎಂದು ಆರೋಪಿಗಳು ಭಾವಿಸಿದ್ದರು. ಅದೇ ಕಾರಣಕ್ಕೆ, ವಕೀಲರ ರೀತಿಯಲ್ಲೇ ಸೂಟ್‌ ಧರಿಸಿ ನ್ಯಾಯಾಲಯ ಪ್ರವೇಶಿಸಿದ್ದರು’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಅವರ‍್ಯಾರು ಎಂಬುದು ಆರಂಭದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವರ ಪರ ವಕೀಲರು ನ್ಯಾಯಾಲಯದೊಳಗೆ ಹೋದ ನಂತರವೇ ಕೈ ಮುಗಿದು
ಕೊಂಡು ಆರೋಪಿಗಳು ಒಳಗೆ ಬಂದರು. ಪೊಲೀಸರ ಭಯವಿರುವುದರಿಂದ ಈ ವೇಷದಲ್ಲಿ ಬಂದಿರುವುದಾಗಿ ಅವರು ನ್ಯಾಯಾಲಯಕ್ಕೆ ಹೇಳಿದರು’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
‘ತಂತಿರಹಿತ ತಂತ್ರಜ್ಞಾನ ಸಂಶೋಧನೆಗೆ ಮುಂದಾಗಿ’

ರಾಷ್ಟ್ರೀಯ ಸಮ್ಮೇಳನ
‘ತಂತಿರಹಿತ ತಂತ್ರಜ್ಞಾನ ಸಂಶೋಧನೆಗೆ ಮುಂದಾಗಿ’

27 May, 2018
ನಗರದಲ್ಲಿ ಬೆಳಗಿದ ‘ಜ್ಞಾನದೇಗುಲ’ದ ದೀಪ

ಗೊಂದಲಗಳಿಗೆ ಪರಿಹಾರ
ನಗರದಲ್ಲಿ ಬೆಳಗಿದ ‘ಜ್ಞಾನದೇಗುಲ’ದ ದೀಪ

27 May, 2018

ವಾಚ್‌ ಕಳವು ಪ್ರಕರಣ
ಸುಳ್ಳು ಹೇಳಿದ ಓಲಾ ಚಾಲಕ!

ಓಲಾ ಕ್ಯಾಬ್‌ ಚಾಲಕ ಎತ್ತಿಕೊಂಡು ಹೋಗಿದ್ದ, ಚಿತ್ರನಟಿ ಪರೂಲ್‌ ಯಾದವ್‌ ಅವರ ದುಬಾರಿ ಬೆಲೆಯ ವಾಚ್‌ ಅನ್ನು ಪೊಲೀಸರು ಪತ್ತೆಹಚ್ಚಿ ಮರಳಿಸಿದ ಪ್ರಕರಣ ಶನಿವಾರ...

27 May, 2018
ಸಾಮೂಹಿಕ ಅತ್ಯಾಚಾರ; ಯುವತಿಯಿಂದ ದೂರು

ತನಿಖೆ
ಸಾಮೂಹಿಕ ಅತ್ಯಾಚಾರ; ಯುವತಿಯಿಂದ ದೂರು

27 May, 2018

ಕಳ್ಳತನ
ಚಪ್ಪಲಿಯಿಂದ ಸಿಕ್ಕಿಬಿದ್ದ ಆರೋಪಿ

ಭರತ್‌ ರಾಥೋಡ್‌ ಎಂಬುವರಿಗೆ ಸೇರಿದ್ದ ಪುನಾಗರ್ ಫ್ಯಾಷನ್ಸ್ ಮಳಿಗೆಯಲ್ಲಿ ಇತ್ತೀಚೆಗೆ ನುಗ್ಗಿದ್ದ ಕಳ್ಳನೊಬ್ಬ, ₹25 ಸಾವಿರ ನಗದು ಕದ್ದೊಯ್ದಿದ್ದ. ಕೃತ್ಯದ ದೃಶ್ಯವು ಮಳಿಗೆಯ ಸಿ.ಸಿ.ಟಿ.ವಿ...

27 May, 2018