ಬಜೆಟ್‌ನಲ್ಲಿ ಸೇರ್ಪಡೆಗೆ ಪಾಲಿಕೆ ಸಿದ್ಧತೆ l ಕಡಿಮೆ ನಿರ್ವಹಣಾ ವೆಚ್ಚ ಹಾಗೂ ದೀರ್ಘ ಬಾಳಿಕೆಗಾಗಿ ಈ ಕಾಮಗಾರಿ

ಮತ್ತೆ 150 ಕಿ.ಮೀ. ರಸ್ತೆ ವೈಟ್‌ ಟಾಪಿಂಗ್‌

ನಗರೋತ್ಥಾನ ಯೋಜನೆಯಡಿ 2018–19ನೇ ಸಾಲಿನಲ್ಲಿ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲು ₹4,000 ಕೋಟಿ ಅನುದಾನ ಒದಗಿಸುವಂತೆ ಕೋರಿ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

ಮೈಸೂರು ರಸ್ತೆಯ ಒಂದು ಪಾರ್ಶ್ವದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸವಾರರು ಸಾಗಿದರು

ಬೆಂಗಳೂರು: ನಗರದಲ್ಲಿ ಮತ್ತೆ 150 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ನಗರೋತ್ಥಾನ ಯೋಜನೆಯಡಿ 2018–19ನೇ ಸಾಲಿನಲ್ಲಿ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲು ₹4,000 ಕೋಟಿ ಅನುದಾನ ಒದಗಿಸುವಂತೆ ಕೋರಿ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

ಬಜೆಟ್‌ ಕುರಿತು ಮುಖ್ಯಮಂತ್ರಿ ಅವರು ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ಪ್ರಸ್ತಾವವನ್ನು ಕೈಬಿಡಲಾಗಿತ್ತು. ಇದರ ಬದಲಿಗೆ ₹1,000 ಕೋಟಿ ಮೊತ್ತದ ಹೊಸ ಪ್ರಸ್ತಾವವನ್ನು ಸಿದ್ಧಪಡಿಸಲಾಗಿದೆ ಎಂದು ರಸ್ತೆ ಮೂಲಸೌಕರ್ಯ (ಯೋಜನೆ) ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಾಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಎಲ್ಲ ಯೋಜನೆಗಳಿಗೆ ಹಂಚಿಕೆ ಮಾಡಿದ ಬಳಿಕ ಉಳಿದ ಹಣದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ, ಈಗ ಉದ್ದೇಶಿಸಿರುವ ಯೋಜನಾ ಮೊತ್ತಕ್ಕಿಂತ ಹೆಚ್ಚಿನ ಅನುದಾನ ಸಿಗಬಹುದು ಅಥವಾ ಸಿಗದೇ ಇರಬಹುದು. ಇದರ ಬಗ್ಗೆ ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಡಿಮೆ ನಿರ್ವಹಣಾ ವೆಚ್ಚ ಹಾಗೂ ದೀರ್ಘ ಬಾಳಿಕೆಯ ಕಾರಣದಿಂದ ನಗರದ ಆಯ್ದ ಮುಖ್ಯರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿತ್ತು. ನಗರೋತ್ಥಾನ ಯೋಜನೆಯಡಿ 93.47 ಕಿ.ಮೀ ಉದ್ದದ 29 ರಸ್ತೆಗಳು ಹಾಗೂ ಆರು ಜಂಕ್ಷನ್‌ಗಳಲ್ಲಿ ವೈಟ್‌ ಟಾಪಿಂಗ್‌ ಮಾಡುವ ಕಾಮಗಾರಿಗೆ 2017ರ ಅಕ್ಟೋಬರ್‌ 9ರಂದು ಚಾಲನೆ ನೀಡಲಾಗಿತ್ತು.

ಈ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದ್ದು, ಆರು ರಸ್ತೆಗಳು ಹಾಗೂ ಆರು ವೃತ್ತಗಳ ಅಭಿವೃದ್ಧಿ ಒಳಗೊಂಡ ಕಾಮಗಾರಿಯ ಗುತ್ತಿಗೆಯನ್ನು ಎನ್‌ಸಿಸಿ ಕಂಪನಿಗೆ ನೀಡಲಾಗಿತ್ತು. 24 ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಮಧುಕಾನ್‌ ಪ್ರೈವೇಟ್‌ ಕಂಪನಿಗೆ ವಹಿಸಲಾಗಿತ್ತು.

ಹೊರವರ್ತುಲ ರಸ್ತೆಯ ಜ್ಞಾನಭಾರತಿಯಿಂದ ಸುಮನಹಳ್ಳಿ ಜಂಕ್ಷನ್‌ ಹಾಗೂ ತುಮಕೂರು ರಸ್ತೆಯಿಂದ ಹಳೇ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ– ಬ್ರಿಗೇಡ್‌ ರಸ್ತೆಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಕೋರಮಂಗಲ 20ನೇ ಮುಖ್ಯರಸ್ತೆ, ಮಾಗಡಿ ರಸ್ತೆಯಲ್ಲಿ ಕುಷ್ಠರೋಗ ಆಸ್ಪತ್ರೆ ಜಂಕ್ಷನ್‌ನಿಂದ ದೀಪಾಂಜಲಿ ನಗರ ಮೆಟ್ರೊ ನಿಲ್ದಾಣ, ಮೈಸೂರು ರಸ್ತೆ– ಕೆ.ಆರ್‌.ಮಾರುಕಟ್ಟೆ ವೃತ್ತದಿಂದ ಕೆಎಚ್‌ಇಎಲ್‌ ವೃತ್ತದವರೆಗಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಪರ್ಯಾಯ ಮಾರ್ಗ ಕಲ್ಪಿಸದೇ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಿಂದ ವಾಹನ ದಟ್ಟಣೆಯಲ್ಲಿ ಸಿಲುಕಿ ‍ಪಡಿಪಾಟಲು ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಈಗಾಗಲೇ ಕೈಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಮುಂದಿನ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಈವರೆಗೆ 13.35 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.

ಎಲ್ಲೆಲ್ಲಿ ಕಾಮಗಾರಿ ಪೂರ್ಣ
*ಹೊರವರ್ತುಲ ರಸ್ತೆಯ ಹೆಣ್ಣೂರು ಸೇತುವೆಯಿಂದ ಕಸ್ತೂರಿನಗರದವರೆಗೆ ಒಂದು ಪಾರ್ಶ್ವದಲ್ಲಿ 3 ಕಿ.ಮೀ.
*ರಾಜ್‌ಕುಮಾರ್‌ ಸಮಾಧಿ ಸ್ಥಳದಿಂದ 900 ಮೀ.
*ಗೊರಗುಂಟೆಪಾಳ್ಯದ ಬಳಿ 450 ಮೀ.
*ಆಡುಗೋಡಿ ರಸ್ತೆಯ ಆನೆಪಾಳ್ಯದಿಂದ ಸೇಂಟ್‌ ಜಾನ್ಸ್‌ ಆಸ್ಪತ್ರೆ ಜಂಕ್ಷನ್‌ವರೆಗೆ 3 ಕಿ.ಮೀ.
*ಮಾಗಡಿ ರಸ್ತೆಯ ವಿಜಯನಗರದ ಬಳಿ 1.50 ಕಿ.ಮೀ.
*ಮೈಸೂರು ರಸ್ತೆಯಲ್ಲಿ ಬ್ರಿಯಾಂಡ್‌ ಚೌಕದಿಂದ ವೃಷಭಾವತಿ ಕಾಲುವೆವರೆಗೆ 3 ಕಿ.ಮೀ.
*ಕೋರಮಂಗಲ 20ನೇ ಮುಖ್ಯರಸ್ತೆಯಲ್ಲಿ 1.50 ಕಿ.ಮೀ.

ಅಂಕಿ–ಅಂಶ

1,500 ಕಿ.ಮೀ. – ಮುಖ್ಯರಸ್ತೆ ಹಾಗೂ ಉಪಮುಖ್ಯ ರಸ್ತೆಗಳ ಉದ್ದ
13,500 ಕಿ.ಮೀ.– ವಾರ್ಡ್‌ ಮಟ್ಟದ ರಸ್ತೆಗಳ ಉದ್ದ
₹972 ಕೋಟಿ -29 ರಸ್ತೆಗಳು, ಆರು ಜಂಕ್ಷನ್‌ಗಳ ವೈಟ್‌ಟಾಪಿಂಗ್‌ ಕಾಮಗಾರಿ ವೆಚ್ಚ

Comments
ಈ ವಿಭಾಗದಿಂದ ಇನ್ನಷ್ಟು
‘ಮೋದಿ ಸರ್ಕಾರವನ್ನು ಕಿತ್ತೊಗೆಯಿರಿ’

ಬೆಂಗಳೂರು
‘ಮೋದಿ ಸರ್ಕಾರವನ್ನು ಕಿತ್ತೊಗೆಯಿರಿ’

26 May, 2018

ಬೆಂಗಳೂರು
ಶಾಸಕರಿಗೆ ಕೊನೆಗೂ ತವರು ಸೇರುವ ಭಾಗ್ಯ!

ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 10 ದಿನಗಳ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕೊನೆಗೂ ತವರಿಗೆ ಮರಳುವ ಭಾಗ್ಯ ಒದಗಿಬಂತು. ಹೋಟೆಲ್‌ಗಳಲ್ಲಿ ವಾಸ್ತವ್ಯ...

26 May, 2018

ಬೆಂಗಳೂರು
‘ಸಚಿವ ಸ್ಥಾನಕ್ಕೆ ಮನವಿ’

ವಿಧಾನಪರಿಷತ್ ಸದಸ್ಯರಾದ, ಗೊಲ್ಲ ಸಮುದಾಯದ ಜಯಮ್ಮ ಬಾಲರಾಜ್ ಅವರಿಗೆ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಯಾದವ ಯುವ ಸೇನೆ...

26 May, 2018

ಬೆಂಗಳೂರು
ದಾಖಲೆಗಳಿಲ್ಲದ ನಗದು ವಶ

ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದನ್ನು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

26 May, 2018
ವಿಧಾನಸೌಧಕ್ಕೆ ಬಾರದ ದೇವೇಗೌಡ

ಬೆಂಗಳೂರು
ವಿಧಾನಸೌಧಕ್ಕೆ ಬಾರದ ದೇವೇಗೌಡ

26 May, 2018