ಮಾರಾಟಕ್ಕೆ ಟೆಂಡರ್

ಎಪಿಎಂಸಿ: 30 ಮಳಿಗೆ ಅಕ್ರಮ ಹಂಚಿಕೆ

‘ಈಗಿನ ಆಡಳಿತ ಮಂಡಳಿಯ ಅಧಿಕಾರಾವಧಿ ಫೆ.24ರಂದು ಮುಗಿಯಲಿದೆ. ಎಪಿಎಂಸಿ ಯಾರ್ಡ್‌ನಲ್ಲಿದ್ದ ಬಿಡಿಎ ಪ್ರದೇಶದ ಮಳಿಗೆಗಳ ಅಕ್ರಮ ಹಂಚಿಕೆ ಹಗರಣ ಮುಚ್ಚಿಹಾಕಲು, ಬಾಕಿ 29 ಮಳಿಗೆಗಳನ್ನು ಗುತ್ತಿಗೆ ಮತ್ತು ಮಾರಾಟ ನಿಯಮದ ಆಧಾರದಲ್ಲಿ ವಿತರಿಸಲು ಮುಂದಾಗಿದೆ. ಜನವರಿ 29ರಂದು ಟೆಂಡರ್‌ ಪ್ರಕಟಣೆ ಹೊರಡಿಸಿದ್ದು, ಫೆ.21ರಂದು ಬಹಿರಂಗ ಹರಾಜು ನಡೆಸುತ್ತಿದೆ’ ಎಂದು ವರ್ತಕರು ಆರೋಪ ಮಾಡಿದ್ದಾರೆ.

ಬೆಂಗಳೂರು: ಆಲೂಗಡ್ಡೆ ಮತ್ತು ಈರುಳ್ಳಿ ವ್ಯಾಪಾರಿಗಳನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಿಸಲು ಮುಂದಾಗಿರುವ ಯಶವಂತಪುರ ಎಪಿಎಂಸಿ ಆಡಳಿತ ಮಂಡಳಿಯು, 30 ಮಳಿಗೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ ಎಂದು ವರ್ತಕರು ಆರೋಪಿಸಿದ್ದಾರೆ.

‘ಈಗಿನ ಆಡಳಿತ ಮಂಡಳಿಯ ಅಧಿಕಾರಾವಧಿ ಫೆ.24ರಂದು ಮುಗಿಯಲಿದೆ. ಎಪಿಎಂಸಿ ಯಾರ್ಡ್‌ನಲ್ಲಿದ್ದ ಬಿಡಿಎ ಪ್ರದೇಶದ ಮಳಿಗೆಗಳ ಅಕ್ರಮ ಹಂಚಿಕೆ ಹಗರಣ ಮುಚ್ಚಿಹಾಕಲು, ಬಾಕಿ 29 ಮಳಿಗೆಗಳನ್ನು ಗುತ್ತಿಗೆ ಮತ್ತು ಮಾರಾಟ ನಿಯಮದ ಆಧಾರದಲ್ಲಿ ವಿತರಿಸಲು ಮುಂದಾಗಿದೆ. ಜನವರಿ 29ರಂದು ಟೆಂಡರ್‌ ಪ್ರಕಟಣೆ ಹೊರಡಿಸಿದ್ದು, ಫೆ.21ರಂದು ಬಹಿರಂಗ ಹರಾಜು ನಡೆಸುತ್ತಿದೆ’ ಎಂದು ವರ್ತಕರು ಆರೋಪ ಮಾಡಿದ್ದಾರೆ.

‘ದಾಸನಪುರ ಮಾರುಕಟ್ಟೆಗೆಸ್ಥಳಾಂತರವಾಗುವಂತೆ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರಿಗೆ ಎ‍ಪಿಎಂಸಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಮಳಿಗೆಗಳ ಪರವಾನಗಿ ನವೀಕರಿಸದೆ ಕಿರುಕುಳ ನೀಡುತ್ತಿದ್ದಾರೆ. ಆದರೆ, ಬಿಡಿಎ ಪ್ರದೇಶದ 70 ಮಳಿಗೆಗಳ ಪೈಕಿ 30 ಮಳಿಗೆಗಳನ್ನು ತಮಗೆ ಬೇಕಾದವರಿಗೆ ಅಕ್ರಮವಾಗಿ ಹಂಚಿದ್ದಾರೆ’ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ದೂರುತ್ತಾರೆ.

'ಒಂದೊಂದು ಮಳಿಗೆಗೆ ₹10 ಲಕ್ಷದಿಂದ ₹20 ಲಕ್ಷದವರೆಗೂ ಹಣ ಪಡೆದು ಗುಟ್ಟಾಗಿ ಹಂಚಿದ್ದಾರೆ. ಇದನ್ನು ರದ್ದುಪಡಿಸಬೇಕೆಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದೇವೆ. ರದ್ದುಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ತಿಳಿಸಿದರು.

‘ನನ್ನ ಅವಧಿಯಲ್ಲಿ ಯಾರಿಗೂ ಅನಧಿಕೃತವಾಗಿ ಮಳಿಗೆ ಹಂಚಿಲ್ಲ. ಬಿಡಿಎ ಪ್ರದೇಶದ ಮಳಿಗೆಗಳಲ್ಲಿ 5 ಮಳಿಗೆಗಳನ್ನು ಮಾತ್ರ ಪಾರ್ಕಿಂಗ್‌ ಜಾಗಕ್ಕೆ ಉಳಿಸಿ, ಉಳಿದ 29 ಮಳಿಗೆಗಳಿಗೆ ಟೆಂಡರ್‌ ಕರೆಯಲಾಗಿದೆ. ಮಳಿಗೆ ಅಕ್ರಮವಾಗಿ ಹಂಚಿರುವ ಬಗ್ಗೆ ದೂರು ಬಂದರೆ ಪರಿಶೀಲಿಸಲಾಗುವುದು' ಎಂದು ಯಶವಂತಪುರ ಎಪಿಎಂಸಿ ಸಮಿತಿಯ ಕಾರ್ಯದರ್ಶಿ ಪಾತಲಿಂಗಯ್ಯ ಪ್ರತಿಕ್ರಿಯಿಸಿದರು.

‘ಸರ್ಕಾರ ಸುಮಾರು ₹250 ಕೋಟಿ ವಿನಿಯೋಗಿಸಿ ಹೊಸ ಮಾರುಕಟ್ಟೆ ನಿರ್ಮಿಸಿದೆ. ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ 2–3 ಪರವಾನಗಿ ಹೊಂದಿರುವ ವರ್ತಕರು, ಬಾಡಿಗೆ ಪರಿಷ್ಕರಣೆ ಮುಂದಿಟ್ಟುಕೊಂಡು ಹೊಸ ಮಾರುಕಟ್ಟೆಗೆ ಸ್ಥಳಾಂತರವಾಗಲು ತಗಾದೆ ತೆಗೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿರುವ ವಾಹನದಟ್ಟಣೆ ಸಮಸ್ಯೆ ನಿವಾರಿಸಲು ವರ್ತಕರನ್ನು ಸ್ಥಳಾಂತರಿಸದೆ ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ಎಪಿಎಂಸಿ ಉಪಾಧ್ಯಕ್ಷ ನಾರಾಯಣರೆಡ್ಡಿ.

ಬಾಡಿಗೆ ಹೆಚ್ಚಳ ಪರಿಷ್ಕರಣೆ ಭರವಸೆ
ಯಶವಂತಪುರ ಎಪಿಎಂಸಿ ಯಾರ್ಡ್‍ನಲ್ಲಿ ಮಳಿಗೆಗಳ ತಿಂಗಳ ಬಾಡಿಗೆಯನ್ನು ಕನಿಷ್ಠ ಏಳರಿಂದ ಎಂಟು ಪಟ್ಟು ಹೆಚ್ಚಿಸಲಾಗಿತ್ತು. ಈ ನಿರ್ಧಾರ ಕೈಬಿಡುವ ಬಗ್ಗೆ ಪರಿಶೀಲಿಸುವುದಾಗಿ ಕೃಷಿ ಮಾರಾಟ ಇಲಾಖೆಯ ಪ್ರಧಾನಕಾರ್ಯದರ್ಶಿ ಭರವಸೆ ಕೊಟ್ಟಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್.ಶಂಕರಪ್ಪ ತಿಳಿಸಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಹೇಮಲತಾ, ಇಲಾಖೆಯ ನಿರ್ದೇಶಕ ಎಂ.ಬಿ.ರಾಜೇಶ್‌ಗೌಡ ಅವರು ಇತ್ತೀಚೆಗೆ ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರ ಸಮ್ಮುಖದಲ್ಲಿ ವರ್ತಕರ ಅಹವಾಲು ಆಲಿಸಿದರು. ಶೀಘ್ರದಲ್ಲೇ ಬಾಡಿಗೆ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

*
15-20 ವರ್ಷಗಳಿಂದ ಬಾಡಿಗೆ ಹೆಚ್ಚಿಸಿರಲಿಲ್ಲ. ಈಗ ನಿಯಮಾನುಸಾರವಾಗಿ ಶೇ 5ರಿಂದ ಶೇ 25ರವರೆಗೆ ಬಾಡಿಗೆ ಪರಿಷ್ಕರಿಸಲಾಗಿದೆ.
–ಪಾತಲಿಂಗಯ್ಯ, ಕಾರ್ಯದರ್ಶಿ, ಯಶವಂತಪುರ ಎಪಿಎಂಸಿ ಸಮಿತಿ

Comments
ಈ ವಿಭಾಗದಿಂದ ಇನ್ನಷ್ಟು
‘ಮೋದಿ ಸರ್ಕಾರವನ್ನು ಕಿತ್ತೊಗೆಯಿರಿ’

ಬೆಂಗಳೂರು
‘ಮೋದಿ ಸರ್ಕಾರವನ್ನು ಕಿತ್ತೊಗೆಯಿರಿ’

26 May, 2018

ಬೆಂಗಳೂರು
ಶಾಸಕರಿಗೆ ಕೊನೆಗೂ ತವರು ಸೇರುವ ಭಾಗ್ಯ!

ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 10 ದಿನಗಳ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕೊನೆಗೂ ತವರಿಗೆ ಮರಳುವ ಭಾಗ್ಯ ಒದಗಿಬಂತು. ಹೋಟೆಲ್‌ಗಳಲ್ಲಿ ವಾಸ್ತವ್ಯ...

26 May, 2018

ಬೆಂಗಳೂರು
‘ಸಚಿವ ಸ್ಥಾನಕ್ಕೆ ಮನವಿ’

ವಿಧಾನಪರಿಷತ್ ಸದಸ್ಯರಾದ, ಗೊಲ್ಲ ಸಮುದಾಯದ ಜಯಮ್ಮ ಬಾಲರಾಜ್ ಅವರಿಗೆ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಯಾದವ ಯುವ ಸೇನೆ...

26 May, 2018

ಬೆಂಗಳೂರು
ದಾಖಲೆಗಳಿಲ್ಲದ ನಗದು ವಶ

ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದನ್ನು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

26 May, 2018
ವಿಧಾನಸೌಧಕ್ಕೆ ಬಾರದ ದೇವೇಗೌಡ

ಬೆಂಗಳೂರು
ವಿಧಾನಸೌಧಕ್ಕೆ ಬಾರದ ದೇವೇಗೌಡ

26 May, 2018