ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆ ಉತ್ತಮ ಸಂಬಂಧ: ಶ್ರೀಲಂಕ ಸಚಿವ

Last Updated 4 ಜುಲೈ 2018, 16:27 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಭಾರತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸುತ್ತಿದೆ. , ಭಾರತ ಮತ್ತು ಶ್ರೀಲಂಕ ಸಂಬಂಧ ಕೂಡ ಉತ್ತಮವಿದೆ ಎಂದು ಶ್ರೀಲಂಕ ದೇಶದ ಶಿಕ್ಷಣ ಸಚಿವ ರಾಧಕೃಷ್ಣನ್ ಹೇಳಿದರು.

ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಪತ್ನಿ ಕುಟುಂಬ ಸದಸ್ಯರ ಜತೆ ಆಗಮಿಸಿದ ಅವರು ದೇಗುಲದಲ್ಲಿ ಶ್ರೀ ದೇವರ ದರ್ಶನ ಪಡೆದು, ಆಶ್ಲೇಷ ಬಲಿ ಪೂಜೆ ನೆರವೇರಿಸಿ, ಮಹಾಪೂಜೆಯಲ್ಲಿ ಅವರು ಪತ್ರಕರ್ತರ ಜತೆ ಮಾತನಾಡಿದರು. ಪ್ರಾದೇಶಿಕ ಭಾಷೆಗಳಾದ ಸಿಂಹವಳಿಯ ಮತ್ತು ತಮಿಳು ಭಾಷಿಕ ಕಲಿಕೆಗೆ ಮಹತ್ವ ನೀಡುವುದರ ಜತೆ ಆಂಗ್ಲ ಭಾಷೆಗೂ ಆದ್ಯತೆ ನೀಡಿದ್ದೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಸ್ಕಾಲರ್‍ಶಿಪ್ ನೀಡಲಾಗುತ್ತಿದ್ದು ವೈದ್ಯಕೀಯ ಕಾಲೇಜುಗಳ ಸ್ಥಾಪನೆಯತ್ತ ಗಮನಹರಿಸಿದ್ದೇವೆ ಎಂದರು.

ದೇಗುಲಕ್ಕೆ ಭೇಟಿ ನೀಡಿದ ಸಚಿವರಿಗೆ ದೇಗುಲದ ಪ್ರಧಾನ ಅರ್ಚಕರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಹರಸಿದರು. ಸಚಿವರ ಜತೆ ಪತ್ನಿ ಜಾನಕಿ, ಪುತ್ರಿ ಅನನ್ಯ, ಪಾಂಡಿಚೇರಿ ಮುಖ್ಯ ಮಂತ್ರಿಯ ಆಪ್ತ ಸಹಾಯಕ ಭಾಲಕೃಷ್ಣನ್ ಇದ್ದರು. ದೇಗುಲದ ಕಚೇರಿಯಲ್ಲಿ ಸಚಿವರನ್ನು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶಾಲು ಹೊದಿಸಿ ಗೌರವಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ ಎಚ್ ರವೀಂದ್ರ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೆರಾಲು, ದೇಗುಲದ ಶಿಷ್ಟಚಾರ ಅಧಿಕಾರಿ ಗೋಪಿನಾಥ ನಂಭೀಶ, ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ದೇಗುಲದ ಪ್ರಮೋದ್, ಹರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT