ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಕ್ತ ಜಗತ್ತನ್ನು ಆಳಬೇಕು

ಸ್ಕಿಲ್‌ಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ
Last Updated 5 ಜುಲೈ 2018, 12:06 IST
ಅಕ್ಷರ ಗಾತ್ರ

ಧಾರವಾಡ: ‘ಜಗತ್ತಿನಲ್ಲಿ ಜನಸಂಖ್ಯೆ ಕಡಿಮೆ ಇರುವ ರಾಷ್ಟ್ರಗಳಿಗೆ ನಮ್ಮ ಯುವ ಪಡೆ ಹೋಗಬೇಕಿದೆ. ಅಲ್ಲಿ ಆಳ್ವಿಕೆ ಮಾಡಿ ಭಾರತದ ರಕ್ತ ಜಗತ್ತನ್ನು ಆಳುವಂತೆ ಮಾಡಬೇಕಿದೆ’ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟರು.

ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಕಲಾ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಕಿಲ್‌ಥಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಇಂದು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜನಸಂಖ್ಯೆ ಇಳಿಮುಖವಾಗಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಏರುಮುಖವಾಗಿದೆ.ಎಲ್ಲಿ ಜನಸಂಖ್ಯೆ ಕಡಿಮೆ ಇದೆಯೋ ಅಲ್ಲಿ ನಮ್ಮ ದೇಶದ ಯುವಜನತೆ ಗಡಿ ದಾಟಿ ಹೋಗಬೇಕು. ಐವತ್ತು ವರ್ಷದ ಹಿಂದೆ ನಮ್ಮ ಜನ ಅಮೇರಿಕಾಗೆ ಹೋದರೆ ಗೌರವ ನೀಡುತ್ತಿರಲಿಲ್ಲ.ಆದರೆ ಅಮೇರಿಕಾ ಅಧ್ಯಕ್ಷ ಇಂದು ಭಾರತೀಯ ಸಮುದಾಯ ಇದ್ದಲ್ಲಿ ಬಂದು ಗೌರವ ಕೊಡುತ್ತಾರೆ’ ಎಂದರು.

‘ಜನರನ್ನು ಅರ್ಥ ಮಾಡಿಕೊಳ್ಳದವರು ದೇಶದಲ್ಲಿರುವ 121 ಕೋಟಿ ಜನರನ್ನು ಹೊರೆ ಎಂದುಕೊಂಡರೆ, ಆದರೆ ಯೋಗ್ಯತೆ ಇರುವವರು ಜನಸಂಖ್ಯೆಯನ್ನು ಆಸ್ತಿ ಎಂದುಕೊಳ್ಳುತ್ತಾರೆ. ಬದುಕು ಎಂದರೆ ಏನುಎಂದು ನಿಜವಾದ ರೀತಿಯಲ್ಲಿ ವಿಶ್ವವಿದ್ಯಾಲಯಗಳು ಕಲಿಸಬೇಕಿದೆ.ಯಾರೂ ಅಂತರಂಗದ ಅನ್ವೇಷನೆಯಲ್ಲಿ ಹೆಜ್ಜೆ ಇಡುತ್ತಾರೊ ಅವರ ಹೆಜ್ಜೆಗಳನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

‘ಬದುಕು ಎಂದರೆ ಶರೀರಕ್ಕೆ ಬೇಕಾಗುವ ಅಗತ್ಯ ಪರಿಸರ ನಿರ್ಮಾಣ ಮಾಡಿಕೊಳ್ಳುವುದು ಎಂದು ಸ್ವಘೋಷಿತ ಬುದ್ಧಿಜೀವಿಗಳು ತಿಳಿದುಕೊಂಡಿದ್ದಾರೆ. ಆದರೆ ಅಂತರಂಗ, ಅಂತರಾತ್ಮ ಅನ್ನೋ ಪದ ಆ ಬುದ್ಧಿಜೀವಿಗಳ ನಿಘಂಟಿಯನಲ್ಲೇ ಇಲ್ಲ.ಶರೀರವೇ ಬದುಕು ಎಂದು ತಿಳಿದಿದ್ದಾರೆ. ಸ್ವಘೋಷಿತ ಬುದ್ದಿಜೀವಿಗಳಿಗೆ ಬದುಕು ಎಂದರೆ ಏನು ಎಂಬುದರ ಬಗ್ಗೆ ಶರೀರದ ಆಚೆಗೆ 360 ಡಿಗ್ರಿಯಲ್ಲಿ ಸಮಗ್ರವಾಗಿ ನೋಡುವುದೇ ಗೊತ್ತಿಲ್ಲ. ಆದರೆ ಅಂತರಂಗ ಇಲ್ಲದ ಶರೀರವೇ ಬದುಕು ಎನ್ನುವುದಾದರೆ ಸತ್ತ ಹೆಣಕ್ಕೂ ಬದುಕಿರುವ ಮನುಷ್ಯನಿಗೂ ವ್ಯತ್ಯಾಸವೇ ಇಲ್ಲದಂತಾಗಲಿದೆ’ ಎಂದರು.

‘ಕೆಲವರು ಚುನಾವಣೆಯಲ್ಲಿ ಗೆದ್ದ ನಂತರ ನಾನೇ ಸರ್ವಜ್ಞ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅವರ ತಲೆಯಲ್ಲಿ ಏನೂ ಇರುವುದಿಲ್ಲ. ಒಂದು ಬಾರಿ ಗೆದ್ದು ನಂತರ ತಾನೇ ಮುಂದೆ ಗೆಲ್ಲುತ್ತೇನೆ ಎಂದು ತಿಳಿದು ಮುಂದಿನ ಚುನಾವಣೆಯಲ್ಲಿ ಲಗಾ ಒಗಿಯುತ್ತಾರೆ’ ಎಂದು ಅನಂತಕುಮಾರ ಹೆಗಡೆ ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT