ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ಗೆ ‘ಫಾಲ್ಟ್ ಇನ್ ಅವರ್ ಸ್ಟಾರ್ಸ್’, ಹೀಗಿದೆ ನೋಡಿ ಫಸ್ಟ್‌ಲುಕ್

Last Updated 6 ಜುಲೈ 2018, 6:38 IST
ಅಕ್ಷರ ಗಾತ್ರ

ಸಾವಿನ ಅಂಚಿನಲ್ಲಿರುವ ಯುವಕ ಹಾಗೂ ಯುವತಿ ಪ್ರೀತಿಸುವ ಮನಮಿಡಿಯುವ ಕತೆ ‘ಫಾಲ್ಟ್‌ ಇನ್‌ ಅವರ್‌ ಸ್ಟಾರ್ಸ್‌’ ಚಿತ್ರದ್ದು.2014ರಲ್ಲಿ ತೆರೆ ಕಂಡು ಹಾಲಿವುಡ್‌ನಲ್ಲಿ ಭಾರಿ ಯಶಸ್ಸು ಗಳಿಸಿದ್ದ ಈ ಚಿತ್ರವು ಬಾಲಿವುಡ್‌ಗೆ ರಿಮೇಕ್‌ ಆಗಲಿದೆ ಎಂಬ ಸುದ್ದಿ ಹಬ್ಬಿದಾಗ ಈ ಚಿತ್ರದಲ್ಲಿ ನಾಯಕ– ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಈ ಚಿತ್ರದ ನಾಯಕನಾಗಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಹಾಗೂ ನಾಯಕಿಯಾಗಿ ರಾಕ್‌ಸ್ಟಾರ್‌ ಚಿತ್ರದಲ್ಲಿ ನರ್ಗೀಸ್‌ ಫಕ್ರಿ ಮಗಳಾಗಿ ನಟಿಸಿದ್ದ ಸಂಜನಾ ಸಾಂಘಿ ನಟಿಸುತ್ತಿದ್ದಾರೆ.

‘ಫಾಲ್ಟ್‌ ಇನ್‌ ಅವರ್‌ ಸ್ಟಾರ್ಸ್‌’ ಬಾಲಿವುಡ್‌ ರಿಮೇಕ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಪ್ರಿಯರನ್ನು ಕಾತುರದಿಂದ ಕಾಯುವಂತೆ ಮಾಡಿದೆ.

ಈ ಚಿತ್ರವನ್ನು ಮುಖೇಶ್‌ ಛಬಾರ ಅವರು ನಿರ್ದೇಶಿಸುತ್ತಿದ್ದು, ಇದು ಅವರ ನಿರ್ದೇಶನದ ಮೊದಲ ಚಿತ್ರ. ಹಾಗೆ ನಟಿ ಸಂಜನಾ ಸಹ ಪೂರ್ಣಪ್ರಮಾಣದ ನಾಯಕಿಯಾಗಿ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಹಿಂದೆ ‘ಹಿಂದಿ ಮೀಡಿಯಂ’ ಹಾಗೂ ‘ಫಕ್ರಿ’ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು.

‘ನಾನು ಹಾಗೂ ಮುಖೇಶ್‌ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ಅವರ ಮೊದಲ ಸಿನಿಮಾದಲ್ಲಿ ನಾಯಕನಟನಾಗುವ ಅವಕಾಶ ನೀಡಿದ್ದಾರೆ. ಅವರ ವಿಶ್ವಾಸದಂತೆ ನಟಿಸಲಿದ್ದೇನೆ. ಚಿತ್ರಕತೆಯನ್ನು ಓದದೇ ನಾನು ಸಹಿ ಮಾಡಿದ ಮೊದಲ ಚಿತ್ರ ಇದು. ಅಂತಹ ಅತ್ಯುತ್ತಮ ಕತೆಯುಳ್ಳ ಚಿತ್ರದಲ್ಲಿ ನಟಿಸಿತ್ತಿರುವುದಕ್ಕೆ ನನಗೇ ಖುಷಿಯಾಗುತ್ತಿದೆ’ ಎಂದು ಸಿನಿಮಾ ಬಗ್ಗೆ ಸುಶಾಂತ್‌ ಸಿಂಗ್‌ ಹೇಳಿದ್ದಾರೆ.

ಈ ಚಿತ್ರದ ಫಸ್ಟ್‌ಲುಕ್‌ ಅನ್ನು ಮುಖೇಶ್‌ ಹಂಚಿಕೊಂಡಿದ್ದು, ಇದರಲ್ಲಿ ಸುಶಾಂತ್‌ ಹಾಗೂ ಸಂಜನಾ ಜೋಡಿ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿವೆ. ಹಾಲಿವುಡ್‌ನಲ್ಲಿ ಶೈಲೆನ್‌ ವೂಡ್ಲಿ ಹಾಗೂ ಆನ್ಸೆಲ್‌ ಎಲ್ಗೊರ್ಟ್‌ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಈಗ ಫಸ್ಟ್‌ಲುಕ್‌ನಲ್ಲಿ ಸುಶಾಂತ್‌, ಸಂಜನಾ ಜೋಡಿಯನ್ನು ನೋಡಿ, ಈ ಜೋಡಿಯೂ ಸಹಾ ಹಾಲಿವುಡ್‌ನಂತೆ ಮ್ಯಾಜಿಕ್‌ ಮಾಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT