ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ಬೆಳವಣಿಗೆಗೆ ಪೂರಕ ಚಟುವಟಿಕೆ ಅಗತ್ಯ

Last Updated 6 ಜುಲೈ 2018, 13:17 IST
ಅಕ್ಷರ ಗಾತ್ರ

ಮೂಲ್ಕಿ: ‘ಯಕ್ಷಗಾನದ ಜೊತೆಗೆ ಬೇರೆ ಬೇರೆ ಕಲೆಗಳನ್ನೂ ಕಲಿತುಕೊಂಡು, ಯಕ್ಷಗಾನದ ಬೆಳವಣಿಗೆಗೆ ಪೂರಕವಾಗುವ ಚಟುವಟಿಕೆ ನಿರಂತರವಾಗಿ ನಡೆಯಬೇಕು’ ಎಂದು ಯಕ್ಷಗಾನದ ವಿಮರ್ಶಕ ಡಾ. ಪ್ರಭಾಕರ ಜೋಷಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಗುರುವಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಕ್ಷಗಾನ ಕೇಂದ್ರ ‘ಯಕ್ಷ ‌ಝೇಂಕಾರ’ ವನ್ನು ಯಕ್ಷಗಾನದ ವಿಮರ್ಶಕ ಡಾ. ಪ್ರಭಾಕರ ಜೋಷಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ, ‘ಯಕ್ಷಗಾನದ ನೋಡುವಿಕೆ, ಕೇಳುವಿಕೆ ಜ್ಞಾನ, ಮನರಂಜನೆ, ಚಿಂತನೆ ನೀಡುತ್ತದೆ’ ಎಂದರು.

ಯಕ್ಷಝೇಂಕಾರದ ನಿರ್ದೇಶಕ ಡಾ. ಗಣಪತಿ ಭಟ್ ಮಾತನಾಡಿ, ‘ಅಕಾಡೆಮಿಕ್ ಆಗಿ ಯಕ್ಷಗಾನವನ್ನು ಕಲಿಯಲು, ಮೂರು ವರ್ಷದ ಕಲಿಕೆಯ ಬಳಿಕ ಪ್ರಮಾಣಪತ್ರ ನೀಡುವ ವ್ಯವಸ್ಥೆ ಇಲ್ಲಿದೆ. ಇನ್ನೂರು ವಿದ್ಯಾರ್ಥಿಗಳು ಕೇಂದ್ರಕ್ಕೆ ಸೇರಿಕೊಂಡಿದ್ದಾರೆ’ ಎಂದರು.

ಕಾಲೇಜಿನ ವಿಧ್ಯಾರ್ಥಿ ಅಜಿತ್ ಕೆರೆಕಾಡು ಅವರು ಬರೆದ ಯಕ್ಷಗಾನ ಪುಸ್ತಕವನ್ನು ಅನಾವರಣಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಸುಧೀರ್ ಕುಮಾರ ಶೆಟ್ಟಿ,. ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ಕುಮಾರ್ ಶೆಟ್ಟಿ, ಯಕ್ಷಗಾನ ಶಿಕ್ಷಕ ಉಬರಡ್ಕ ಉಮೇಶ ಶೆಟ್ಟಿ, ಉಪನ್ಯಾಸಕ ಸಂತೋಷ್ ಆಳ್ವ, ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವನಿತಾ ಜೋಷಿ, ಡಾ. ಸೋಂದಾ ಭಾಸ್ಕರ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT