ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ವಸತಿಗೃಹ ದುರಸ್ತಿಗೆ ಆಗ್ರಹ

ಡಿಸಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ
Last Updated 6 ಜುಲೈ 2018, 13:07 IST
ಅಕ್ಷರ ಗಾತ್ರ

ಹಾಸನ : ಬೇಲೂರು ತಾಲ್ಲೂಕು ಬಿಕ್ಕೋಡು ಹೋಬಳಿ ಕೆಸಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವಸತಿಗೃಹ‌ ದುರಸ್ತಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎಸ್‌. ತೀರ್ಥಪ್ಪ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.

ವೈದ್ಯರ ವಾಸ್ತವ್ಯ ಇಲ್ಲದೆ ಹಾಗೂ ನಿರ್ವಹಣೆ ಕೊರತೆಯಿಂದ ವಸತಿಗೃಹ ಕಟ್ಟಡ ಶಿಥಿಲವಾಗಿದ್ದು, ಕ್ವಾಟರ್ಸ್‌ ಸುತ್ತಲಿನ ಕಾಂಪೌಂಡ್ ಬಿದ್ದು ಹೋಗಿದೆ. ಹಾಗಾಗಿ ಈ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುತ್ತಿಲ್ಲ. ಕಾಂಪೌಡರ್ ಮಾತ್ರ ಇದ್ದಾರೆ. ಇದರಿಂದ ಜನರು ಚಿಕಿತ್ಸೆಗೆ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕಿದೆ ಎಂದರು.

ಅರೇಹಳ್ಳಿ ಹೋಬಳಿ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿನ ವಸತಿಗೃಹ ಸುತ್ತಲೂ ಲಾಂಟನ ಹಾಗೂ ಗಿಡ, ಗಂಟಿಗಳು ಬೆಳೆದು ನಿಂತು, ಪಾಳು ಬಿದ್ದಿದೆ. ಮೊದಲು ವಾರದಲ್ಲಿ ಮೂರು ದಿನ ಬರುತ್ತಿದ್ದ ವೈದ್ಯರು ಈಗ ಇತ್ತ ಸುಳಿಯುತ್ತಿಲ್ಲ. ಇದರಿಂದ ಸುತ್ತ ಮುತ್ತಲ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಸತಿಗೃಹ ದುರಸ್ತಿ ಮಾಡಬೇಕು ಮತ್ತು ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT