ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಶ್ಯ ಇತ್ತೇ?

Last Updated 6 ಜುಲೈ 2018, 17:03 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ನಿರ್ಧರಿಸಿದೆ. ಸರ್ಕಾರದ ರಾಜಕೀಯ ತಪ್ಪು ನಡೆಗಳಲ್ಲಿ ಇದೂ ಒಂದು. ಬ್ರಾಹ್ಮಣ ಸಮುದಾಯವು ಯಾರ ಹಂಗಿಲ್ಲದೆ ತಮ್ಮ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಹೊಂದಿದೆ. ಅವರಿಗೆ ಸರ್ಕಾರದ ಹಂಗಿನ ನೆರವು ಬೇಕಾಗಿರಲಿಲ್ಲ.

ಇತರ ಸಮುದಾಯಗಳಲ್ಲಿ ಇರುವಂತೆ ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಎಲ್ಲ ಜಾತಿಗಳಲ್ಲೂ ಇರುವ ಬಡವರ ಅಭಿವೃದ್ಧಿಯ ಅಗತ್ಯವನ್ನು ಸರ್ಕಾರ ಮನಗಾಣಬಹುದಿತ್ತು. ಅಂತೆಯೇ ಹಿಂದುಳಿದ ಜಾತಿಗಳಲ್ಲಿ ಆರ್ಥಿಕವಾಗಿ ಸಬಲರಾಗಿರುವವರು ಈಗ ಬಳಸಿಕೊಳ್ಳುತ್ತಿರುವ ಸವಲತ್ತುಗಳನ್ನು ತಡೆಹಿಡಿದು ಆ ಮೂಲಕ ಸರ್ಕಾರದ ಅನುದಾನ ದುರುಪಯೋಗ ಆಗುವುದನ್ನು ತಪ್ಪಿಸಬಹುದಿತ್ತು. ಜಾತಿಭೇದ ಇಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲರೂ ಸರ್ಕಾರದಿಂದ ಸೌಲಭ್ಯ, ನೆರವು ಪಡೆಯಲು ಹಕ್ಕುದಾರರಾಗಿರುತ್ತಾರೆ.

-ಕೊ.ಸು.ನರಸಿಂಹ ಮೂರ್ತಿ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT