ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಅರಿತು ನಡೆಯಲಿ

Last Updated 18 ಫೆಬ್ರುವರಿ 2018, 20:26 IST
ಅಕ್ಷರ ಗಾತ್ರ

ಬಹಮನಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ, ವಿವಾದ ಸೃಷ್ಟಿಸುವ ಮೂಲಕವೇ ಕೆಲವು ಸಚಿವರು ಜನಪ್ರಿಯರಾಗಲು ಮುಂದಾಗುತ್ತಿದ್ದಾರೆ ಎಂದೆನಿಸುತ್ತದೆ.

ಇತಿಹಾಸ, ಐತಿಹಾಸಿಕ ಘಟನೆಗಳು ಮತ್ತು ಚಾರಿತ್ರಿಕ ಮಹಾಪುರುಷರ ಸ್ಮರಣೆ ತಪ್ಪಲ್ಲ. ಆದರೆ ಅದಕ್ಕೊಂದು ರಚನಾತ್ಮಕ ಉದ್ದೇಶ ಮತ್ತು ವ್ಯವಸ್ಥೆ ಇಲ್ಲದಿದ್ದರೆ ಕಾರ್ಯಕ್ರಮ ಪ್ರಚಾರ- ಅಪಪ್ರಚಾರಗಳ ತೆವಲು ಮಾತ್ರವಾಗುತ್ತದೆ! ಗಂಗ, ಕದಂಬ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳ ಬಗ್ಗೆ ಹೆಮ್ಮೆಪಡಲು, ಸಂಭ್ರಮಿಸಲು ಕನ್ನಡಿಗರಿಗೊಂದು ಸಾಂಸ್ಕೃತಿಕ ಕಾರಣವಿದೆ. ಆದರೆ ಬಹಮನಿ ರಾಜ್ಯದ ಉದಯ, ವಿಜಯನಗರ ಸಾಮ್ರಾಜ್ಯದೊಡನೆ ಅದರ ಸೆಣಸಾಟ, ಕೊನೆಗೆ ಮೊಘಲ್ ಸಾಮ್ರಾಜ್ಯದಲ್ಲಿ ಅದರ ವಿಲೀನ... ಈ ಕಥಾನಕದಲ್ಲಿ ಕನ್ನಡಿಗರು ಹೆಮ್ಮೆಪಡಲು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT