ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ದೇವಾಲಯದಲ್ಲಿ ಬೆಂಕಿ ಅವಘಡ

Last Updated 18 ಫೆಬ್ರುವರಿ 2018, 19:39 IST
ಅಕ್ಷರ ಗಾತ್ರ

ಬೀಜಿಂಗ್‌(ಪಿಟಿಐ): ಟಿಬೆಟ್‌ನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಜೊಖಂಗ್‌ ಬೌದ್ಧ ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

2000ನೇ ಇಸವಿಯಲ್ಲಿ ಯುನೆಸ್ಕೊ ಪ್ರಕಟಿಸಿದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಈ ದೇವಸ್ಥಾನ ಸ್ಥಾನ ಪಡೆದಿದೆ. ಈ ದೇವಾಲಯ 1,300 ವರ್ಷಗಳ ಇತಿಹಾಸ ಹೊಂದಿದೆ.

ಯಾವುದೇ ಸಾವು ಸಂಭವಿಸಿದ ವರದಿಯಾಗಿಲ್ಲ ಎಂದು ಅಲ್ಲಿನ ಜಿನ್‌ಹುಅ ನ್ಯೂಸ್‌ ಏಜೆನ್ಸಿ ಪ್ರಕಟಿಸಿದೆ.

ಶನಿವಾರ ಸಂಜೆ 6.40ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ
ಯನ್ನು ನಂದಿಸಲಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಚೀನಾ ಡೈಲಿ ವರದಿ ಮಾಡಿದೆ.

ಜೊಖಂಗ್‌ ದೇವಸ್ಥಾನವನ್ನು ಕೈಕಾಂಗ್‌ ಮೊನಾಸ್ಟ್ರಿ ಎಂದೂ ಕರೆ ಯಲಾಗುತ್ತದೆ. ಟಿಬೆಟ್‌ನ ಅತ್ಯಂತ ಪ್ರವಿತ್ರ ಮತ್ತು ಪ್ರಮುಖ ದೇವಸ್ಥಾನ ಇದಾಗಿದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ತನಿಖೆ ನಡೆಸಲಾಗುತ್ತಿದೆ. ಇಷ್ಟು ಹಳೆಯ ದೇವಸ್ಥಾನದಲ್ಲಿ ಬೆಂಕಿ ಅವಘಡ ನಡೆದಿರುವುದರಿಂದ ಕಟ್ಟಡದ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆ ಮತ್ತು ಹೊಗೆ ಆವರಿಸಿದ ವಿಡಿಯೊ ಮತ್ತು ಚಿತ್ರಗಳನ್ನು ಅಂತರ್ಜಾಲ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.  

ಇಲ್ಲಿ 12 ವರ್ಷದ ಬಾಲಕ ಬುದ್ಧನ ಮೂರ್ತಿ ಸೇರಿದಂತೆ ಬೌದ್ಧ ಧರ್ಮಕ್ಕೆ ಸೇರಿದ ಸಾಂಸ್ಕೃತಿಕ ಖಜಾನೆಯೇ ಇದೆ. ಧರ್ಮಗುರು ದಲೈ ಲಾಮ ಅವರ ಅಧಿಕೃತ ನಿವಾಸ ಕೂಡಾ ಇಲ್ಲೇ ಇದೆ. ಈ ದೇವಾಲಯ ‌ಸಾವಿರಾರು ಪ್ರವಾಸಿಗ ರನ್ನು ಆಕರ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT