ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೂ ಬಿಜೆಪಿ ಟಿಕೇಟ್ ಆಕಾಂಕ್ಷಿ’

Last Updated 19 ಫೆಬ್ರುವರಿ 2018, 7:09 IST
ಅಕ್ಷರ ಗಾತ್ರ

ಆಲಮಟ್ಟಿ(ನಿಡಗುಂದಿ): ‘ನಾನು ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ’ ಎಂದು ಬಿಜೆಪಿ ರೇಷ್ಮೆ ಬೆಳೆಗಾರರ ಪ್ರಕೋಷ್ಠದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಪಟ್ಟಣಶೆಟ್ಟಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ ಅವರು, ‘ವಿಕಾಸ ಸಮಾಜ ಸೇವಾ ಸಂಘ ಸ್ಥಾಪಿಸಿ ಅದರ ಮೂಲಕ ಕಳೆದ 15 ವರ್ಷಗಳಿಂದ ಹಲವು ಸಾಮಾಜಿಕ ಚಟುವಟಿಕೆ ಕೈಗೊಂಡಿದ್ದೇನೆ, ಹಲವು ಮಹಿಳೆಯರಿಗೆ ತರಬೇತಿ ವಿವಿಧ ಸಂಘಟನೆಗಳ ಮೂಲಕ ನೀಡಿಸಿ ಸ್ವ ಉದ್ಯೋಗ ಕೊಳ್ಳಲು ನೆರವಾಗಿದ್ದೇನೆ, ಆಲಮಟ್ಟಿಯ ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷೆಯಾಗಿ, ನಗೆಕೂಟದ ಅಧ್ಯಕ್ಷರಾಗಿ, ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ’ ಎಂದ ಅವರು, ‘ನನ್ನ ಸಾಮಾಜಿಕ ಸೇವೆ ಗಮನಿಸಿ ಬಸವ ಪೀಠದ ವತಿಯಿಂದ ನೀಡುವ ‘ಅಕ್ಕ’ ಪ್ರಶಸ್ತಿಯೂ ನನಗೆ ಲಭಿಸಿದೆ’ ಎಂದು ಹೇಳಿದರು.

‘ಮತದಾರರಲ್ಲಿ ಶೇ 50 ರಷ್ಟು ಮಹಿಳೆಯರಿದ್ದು, ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಬಿಜೆಪಿ ಹೈಕಮಾಂಡ್‌ ಕಲ್ಪಿಸಿ ಅಣ್ಣ ಬಸವಣ್ಣನವರ ನಾಡಿನಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು. ಅಣ್ಣ ಬಸವಣ್ಣನವರು 12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೇ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರು. ಹೀಗಾಗಿ ಅಣ್ಣ ಬಸವಣ್ಣನವರ ನಾಡಿನಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕು’ ಎಂದು ಪ್ರತಿಪಾದಿಸಿದರು.

‘ಗ್ರಾಮೀಣ ಮಟ್ಟದಲ್ಲಿ ನಾನಾ ಕಡೆ ಮಹಿಳಾ ಸಂಘಟನೆಗಳನ್ನು ಒಗ್ಗೂಡಿಸಿ ಸಮಾವೇಶವನ್ನು ನಡೆಸಿದ್ದೇನೆ, ಸ್ತ್ರೀ ಶಕ್ತಿ ಸಂಘಟನೆಗಳ ಆರ್ಥಿಕ ಚಟುವಟಿಕೆಗೂ ಸಹಾಯ ಮಾಡಿದ್ದೇನೆ ಎಂದರು. ಮೂಲತಃ ದಿಂಡವಾರ ಗ್ರಾಮದವಳಾದ ನಾನು ಕಳೆದ 15 ವರ್ಷದಿಂದ ಮಹಿಳೆಯರ ಸಂಘಟಿಸಿ ಸಮಾವೇಶವನ್ನು ನಡೆಸಿದ್ದೇನೆ’ ಎಂದರು.

‘ವಿಧಾನಸಭೆಗೆ ಸ್ಪರ್ಧಿಸುವ ಪ್ರತಿಯೊಬ್ಬರಿಗೂ ಪ್ರಚಾರದಲ್ಲಿ, ಸಮಾವೇಶದಲ್ಲಿ ಮಹಿಳೆಯರ ಸಂಘಟನೆ ಬೇಕು, ಆದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶಗಳು ಸಿಗುತ್ತಿಲ್ಲ, ರಾಜಕೀಯದಲ್ಲಿಯೂ ಮಹಿಳೆಯರಿಗೆ ಅವಕಾಶಗಳು ದೊರೆಯಬೇಕು’ ಎಂದರು. ಅನ್ನಪೂರ್ಣ ಜಮಖಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT