ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

800 ಅಡಿ ಎತ್ತರದಲ್ಲಿ 102ರ ತಾತನ ವಿಹಾರ!

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

102 ವರ್ಷದ ಸಾಹಸಿ ಅಜ್ಜ ವಿಶ್ವದ ಅತಿ ಹಿರಿಯ ಝಿಪ್‌ಲೈನರ್‌ ಎಂಬ ದಾಖಲೆ ಮಾಡುವ ಸಿದ್ಧತೆಯಲ್ಲಿದ್ದಾರೆ.

ಜನವರಿ ತಿಂಗಳಲ್ಲಿ 102ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಗ್ಲೆನ್‌ ಕ್ವಿಲಿನ್‌ ಅವರು ಕ್ಯಾಲಿಪೋರ್ನಿಯಾದ ಕಾರ್ಲ್ಸ್‌ಬ್ಯಾಡ್‌ನವರು. ಅವರು ಎರಡನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಯೋಧ. ಯುದ್ಧದ ಸಮಯದಲ್ಲಿ ಅಣುಬಾಂಬ್‌ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮ್ಯಾನ್‌ಹಟನ್‌ ಯೋಜನೆಯಲ್ಲಿ ಕೆಲಸ ಮಾಡಿದ್ದರು. ಈಗ ಇಳಿ ವಯಸ್ಸಿನಲ್ಲಿ ಝಿಪ್ಲಿಂಗ್‌ನಲ್ಲಿ ದಾಖಲೆ ಮಾಡುವ ಸಿದ್ಧತೆ ಮಾಡುತ್ತಿದ್ದಾರೆ. 800 ಅಡಿ ಎತ್ತರದಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಜಿಪ್ಲಿಂಗ್‌ (ಪರ್ವವತಗಳ ನಡುವೆ ರೋಪ್‌ ವೇ) ಮಾಡಿ ದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಈ ಹಿಂದೆ 90 ವರ್ಷದ ವೃದ್ಧರೊಬ್ಬರು ಇದೇ ರೀತಿ ಅತಿ ಎತ್ತರದಲ್ಲಿ ಝಿಪ್ಲಿಂಗ್‌ ಮಾಡಿ ದಾಖಲೆ ಮಾಡಿದ್ದರು. ಈಗ ಈ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಈಚೆಗೆ ಕ್ವಿಲಿನ್‌ ಹಾಗೂ ಅವರ ಮೊಮ್ಮಗ ವೆಚ್‌ ಅವರು ಕ್ಯಾಲಿಪೋರ್ನಿಯಾದ ಲಾ ಜೊಲ್ಲ ಜಿಪ್‌ ಝೋಮ್‌ ಪಾರ್ಕ್‌ಗೆ ಪ್ರವಾಸ ಮಾಡಿದ್ದರು. ಇಲ್ಲಿ ಪರ್ವತಶ್ರೇಣಿಯ ಪ್ರಮುಖ ಆಕರ್ಷಣೆ ಝಿಫ್ಲಿಂಗ್‌. ಅಲ್ಲಿ 800 ಅಡಿ ಎತ್ತರದಲ್ಲಿ ರೋಪ್‌ ವೇ ಮೂಲಕ ಝಿಪ್ಲಿಂಗ್‌ ಮಾಡಿದ್ದಾರೆ.

ಮನೆಯಲ್ಲಿ ಸುಮ್ಮನೆ ಕೂತು ಕಾಲ ತಳ್ಳುವ ಸ್ವಭಾವ ಕ್ವಿಲಿನ್‌ ಅವರದ್ದಲ್ಲ. ನಿವೃತ್ತ ಜೀವನ ನಡೆಸುತ್ತಿರುವ ಅವರು ಈ ಇಳಿವಯಸ್ಸಿನಲ್ಲಿಯೂ ವಾರದಲ್ಲಿ ಕನಿಷ್ಠ ನಾಲ್ಕು ದಿನವಾದರೂ ಜಿಮ್‌ಗೆ ಹೋಗುತ್ತಾರೆ. ಮುಂದಿನ ವರ್ಷ ಜನವರಿಯಲ್ಲಿ ಕ್ವಿಲಿನ್‌ 103ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ವಿಶ್ವದ ಅತಿ ಹಿರಿಯ ಸ್ಕೈಡ್ರೈವರ್‌ ಎಂಬ ದಾಖಲೆ ಮಾಡಲು ಕ್ವಿಲಿನ್‌ ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT