ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಚಿನ್ನ, ಸಿಗರೇಟ್‌ ಸಾಗಣೆ: ಮೂವರ ಬಂಧನ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮವಾಗಿ ಚಿನ್ನ ಹಾಗೂ ಸಿಗರೇಟ್ ಪ್ಯಾಕ್‌ಗಳನ್ನು ಸಾಗಣೆ ಮಾಡುತ್ತಿದ್ದ ಮೂವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಅವರಿಂದ ₹1.04 ಕೋಟಿ ಮೌಲ್ಯದ ಚಿನ್ನ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದುಬೈನಿಂದ ನಗರದ ನಿಲ್ದಾಣಕ್ಕೆ ಬಂದ ಆರೀಫ್ (21) ಎಂಬಾತ ಗೊಂಬೆಗಳನ್ನು ಇಡುವ ಬಾಕ್ಸ್‌ಗಳಲ್ಲಿ ಸಾಗಿಸುತ್ತಿದ್ದ ₹28.43 ಲಕ್ಷ ಮೌಲ್ಯದ 895 ಗ್ರಾಂನ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಸಿಂಗಪುರದಿಂದ ನಗರಕ್ಕೆ ಬಂದ ವಿಮಾನದಲ್ಲಿ ಅಪರಿಚಿತ ವ್ಯಕ್ತಿ ಬಿಟ್ಟು ಹೋಗಿದ್ದ ಬ್ಯಾಗ್‌ನಲ್ಲಿ ₹60 ಲಕ್ಷ ಮೌಲ್ಯದ 1 ಕೆ.ಜಿ. 900 ಗ್ರಾಂನ ಎರಡು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.

ಮತ್ತೊಂದು ಪ್ರಕರಣದಲ್ಲಿ, ಅಕ್ರಮವಾಗಿ ಸಾಗಿಸುತ್ತಿದ್ದ ₹ 7.41 ಲಕ್ಷ ಮೌಲ್ಯದ 233 ಗ್ರಾಂ ಚಿನ್ನ ಹಾಗೂ ₹ 60ಸಾವಿರ ಮೌಲ್ಯದ ವಿದೇಶಿ ಅಲಂಕಾರಿಕ ವಸ್ತುಗಳನ್ನು ಮೊಹಮ್ಮದ್ ತಾಲಿಬ್ ಅಹಮ್ಮದ್ ಎಂಬಾತನಿಂದ ವಶಕ್ಕೆ ಪಡಿಸಿಕೊಳ್ಳಲಾಗಿದೆ.

ಕೌಲಾಲಂಪುರದಿಂದ ಬಂದ ಅಲ್ಲಾ ಬಕ್ಷ್‌ ಎಂಬುವರಿಂದ ₹ 4 ಲಕ್ಷ ಮೌಲ್ಯದ 135 ಸಿಗರೇಟ್‌ ಪ್ಯಾಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT