ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 7 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ

Last Updated 21 ಫೆಬ್ರುವರಿ 2018, 9:52 IST
ಅಕ್ಷರ ಗಾತ್ರ

ಭಾಲ್ಕಿ: ‘ಕೇಂದ್ರ ಸರ್ಕಾರ ಐದು ವರ್ಷ ಪೂರೈಸುವುದರ ಒಳಗೆ ಬೀದರ್ ಜಿಲ್ಲೆಯಲ್ಲಿ ಇನ್ನೂ ₹ 7 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ₹ 1,544 ಕೋಟಿ ವೆಚ್ಚದ ಮಹಾರಾಷ್ಟ್ರ ಗಡಿಯಿಂದ ಸಂಗಾರೆಡ್ಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ, ಬೀದರ್‌–ಹುಮನಾಬಾದ್‌ ಹಾಗೂ ಬೀದರ್‌– ಕಮಲನಗರ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ₹ 40 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಬರುವ ಎರಡು–ಮೂರು ತಿಂಗಳಲ್ಲಿ ₹ 50 ಸಾವಿರ ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

‘2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 6,805 ಕಿ.ಮೀ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. ಕರ್ನಾಟಕ ರಾಜ್ಯ ರಚನೆ ಆದಾಗಿನಿಂದ 2014 ವರೆಗೆ ಕೇವಲ 6,760 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು’ ಎಂದು ಹೇಳಿದರು.

‘ಲಾತೂರ್‌, ಮರಾಠವಾಡಾ, ಉದಗೀರ್‌, ನೀಲಂಗಾ ಪಟ್ಟಣಗಳಲ್ಲಿ ನೀರಿನ ಗಂಭೀರ ಸಮಸ್ಯೆ ಇದೆ. ನೀರಿನ ಸಮಸ್ಯೆ ನಿವಾರಣೆ ಆಗದ ಹೊರತು ದೇಶದ ವಿಕಾಸ ಅಸಾಧ್ಯ’ ಎಂದು ತಿಳಿಸಿದರು.

‘ಇಂದು ರೈತರ ಸ್ಥಿತಿ ಗಂಭೀರವಾಗಿದೆ. ಮಳೆಯ ಶೇ 15ರಿಂದ 20 ರಷ್ಟು ನೀರು ಡ್ಯಾಂ, ಬಾವಿಗಳನ್ನು ಸೇರುತ್ತದೆ. ಶೇ 15 ರಿಂದ 20 ರಷ್ಟು ಭೂಮಿಯ ಅಂತರಾಳವನ್ನು ಸೇರುತ್ತದೆ. ಶೇ 60ರಿಂದ 70 ರಷ್ಟು ಸಮುದ್ರದ ಪಾಲಾಗುತ್ತದೆ’ ಎಂದು ಹೇಳಿದರು.

‘25 ರಿಂದ 30 ಟಿಎಂಸಿ ನೀರಿಗಾಗಿ ರಾಜ್ಯಗಳ ಮಧ್ಯೆ ವಿವಾದ ನಡೆಯುತ್ತಿವೆ. ನೀರಿನ ಲಭ್ಯತೆ ಹೆಚ್ಚಿಸಲು ರಾಜ್ಯದಲ್ಲಿ ಬ್ರಿಜ್‌ ಕಂ ಬ್ಯಾರೆಜ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

2019ರ ಮೇ ಒಳಗಾಗಿ ಗಂಗಾ ನದಿಯನ್ನು ಶುದ್ಧಗೊಳಿಸಲಾಗುವುದು. ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿ ರೈತರ ಸ್ಥಿತಿಯನ್ನು ಬದಲಾಯಿಸಲಿದೆ. ಸಿಎನ್‌ಜಿ, ಈಥೇನಾಲ್‌, ಮಿಥೇನ್‌ ಬಳಸಿ ಪ್ರಗತಿ ಸಾಧಿಸಬೇಕು. ದೇಶ ಮಾಲಿನ್ಯದಿಂದ ಮುಕ್ತವಾಗಬೇಕು. ಪೆಟ್ರೋಲ್‌, ಡಿಸೇಲ್‌ ಆಮದು ನಿಲ್ಲಬೇಕು. ಕೃಷಿ, ಕೈಗಾರಿಕೆ ಅಭಿವೃದ್ಧಿಯಲ್ಲಿ ನೀರು, ವಿದ್ಯುತ್‌, ರಸ್ತೆ ಸಂಪರ್ಕ, ಸಂವಹನ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.

ಸಂಸದರಾದ ಪ್ರಹ್ಲಾದ ಜೋಶಿ, ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ಜಹೀರಾಬಾದ್‌ ಸಂಸದ ಬಿ.ಬಿ.ಪಾಟೀಲ, ಔರಾದ್‌ ಶಾಸಕ ಪ್ರಭು ಚವ್ಹಾಣ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ಮಾರುತಿರಾವ್‌ ಮುಳೆ, ಸುಭಾಷ ಕಲ್ಲೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ ಇದ್ದರು.

ಗಡ್ಕರಿಗೆ ಸ್ಮರಣಿಕೆ: ಕೇಂದ್ರ ಸಾರಿಗೆ, ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರಿಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸ್ಮರಣಿಕೆಯಾಗಿ ಬಸವೇಶ್ವರ ಮೂರ್ತಿ ನೀಡಿದರೆ, ಮರಾಠಾ ಸಮಿತಿ ವತಿಯಿಂದ ಶಿವಾಜಿ ಮೂರ್ತಿ ನೀಡಿ ಸನ್ಮಾನಿಸಲಾಯಿತು.

ಸಂಸದ ಭಗವಂತ ಖೂಬಾ ಅವರು ಮೈಸೂರು ಪೇಟ ತೊಡಿಸಿ, ಬೆಳ್ಳಿಯ ಗಣೇಶನ ಮೂರ್ತಿ ನೀಡಿ ಗೌರವಿಸಿದರು.  ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಸೋಮನಾಥ ಪಾಟೀಲ ನಿರೂಪಿಸಿದರು.‘ಕೇಂದ್ರ ಸರ್ಕಾರ ಐದು ವರ್ಷ ಪೂರೈಸುವುದರ ಒಳಗೆ ಬೀದರ್ ಜಿಲ್ಲೆಯಲ್ಲಿ ಇನ್ನೂ ₹ 7 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ₹ 1,544 ಕೋಟಿ ವೆಚ್ಚದ ಮಹಾರಾಷ್ಟ್ರ ಗಡಿಯಿಂದ ಸಂಗಾರೆಡ್ಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ, ಬೀದರ್‌–ಹುಮನಾಬಾದ್‌ ಹಾಗೂ ಬೀದರ್‌– ಕಮಲನಗರ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ₹ 40 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಬರುವ ಎರಡು–ಮೂರು ತಿಂಗಳಲ್ಲಿ ₹ 50 ಸಾವಿರ ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

‘2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 6,805 ಕಿ.ಮೀ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. ಕರ್ನಾಟಕ ರಾಜ್ಯ ರಚನೆ ಆದಾಗಿನಿಂದ 2014 ವರೆಗೆ ಕೇವಲ 6,760 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು’ ಎಂದು ಹೇಳಿದರು.

‘ಲಾತೂರ್‌, ಮರಾಠವಾಡಾ, ಉದಗೀರ್‌, ನೀಲಂಗಾ ಪಟ್ಟಣಗಳಲ್ಲಿ ನೀರಿನ ಗಂಭೀರ ಸಮಸ್ಯೆ ಇದೆ. ನೀರಿನ ಸಮಸ್ಯೆ ನಿವಾರಣೆ ಆಗದ ಹೊರತು ದೇಶದ ವಿಕಾಸ ಅಸಾಧ್ಯ’ ಎಂದು ತಿಳಿಸಿದರು.

‘ಇಂದು ರೈತರ ಸ್ಥಿತಿ ಗಂಭೀರವಾಗಿದೆ. ಮಳೆಯ ಶೇ 15ರಿಂದ 20 ರಷ್ಟು ನೀರು ಡ್ಯಾಂ, ಬಾವಿಗಳನ್ನು ಸೇರುತ್ತದೆ. ಶೇ 15 ರಿಂದ 20 ರಷ್ಟು ಭೂಮಿಯ ಅಂತರಾಳವನ್ನು ಸೇರುತ್ತದೆ. ಶೇ 60ರಿಂದ 70 ರಷ್ಟು ಸಮುದ್ರದ ಪಾಲಾಗುತ್ತದೆ’ ಎಂದು ಹೇಳಿದರು.

‘25 ರಿಂದ 30 ಟಿಎಂಸಿ ನೀರಿಗಾಗಿ ರಾಜ್ಯಗಳ ಮಧ್ಯೆ ವಿವಾದ ನಡೆಯುತ್ತಿವೆ. ನೀರಿನ ಲಭ್ಯತೆ ಹೆಚ್ಚಿಸಲು ರಾಜ್ಯದಲ್ಲಿ ಬ್ರಿಜ್‌ ಕಂ ಬ್ಯಾರೆಜ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

2019ರ ಮೇ ಒಳಗಾಗಿ ಗಂಗಾ ನದಿಯನ್ನು ಶುದ್ಧಗೊಳಿಸಲಾಗುವುದು. ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿ ರೈತರ ಸ್ಥಿತಿಯನ್ನು ಬದಲಾಯಿಸಲಿದೆ. ಸಿಎನ್‌ಜಿ, ಈಥೇನಾಲ್‌, ಮಿಥೇನ್‌ ಬಳಸಿ ಪ್ರಗತಿ ಸಾಧಿಸಬೇಕು. ದೇಶ ಮಾಲಿನ್ಯದಿಂದ ಮುಕ್ತವಾಗಬೇಕು. ಪೆಟ್ರೋಲ್‌, ಡಿಸೇಲ್‌ ಆಮದು ನಿಲ್ಲಬೇಕು. ಕೃಷಿ, ಕೈಗಾರಿಕೆ ಅಭಿವೃದ್ಧಿಯಲ್ಲಿ ನೀರು, ವಿದ್ಯುತ್‌, ರಸ್ತೆ ಸಂಪರ್ಕ, ಸಂವಹನ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.

ಸಂಸದರಾದ ಪ್ರಹ್ಲಾದ ಜೋಶಿ, ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ಜಹೀರಾಬಾದ್‌ ಸಂಸದ ಬಿ.ಬಿ.ಪಾಟೀಲ, ಔರಾದ್‌ ಶಾಸಕ ಪ್ರಭು ಚವ್ಹಾಣ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ಮಾರುತಿರಾವ್‌ ಮುಳೆ, ಸುಭಾಷ ಕಲ್ಲೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ ಇದ್ದರು.

ಗಡ್ಕರಿಗೆ ಸ್ಮರಣಿಕೆ: ಕೇಂದ್ರ ಸಾರಿಗೆ, ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರಿಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸ್ಮರಣಿಕೆಯಾಗಿ ಬಸವೇಶ್ವರ ಮೂರ್ತಿ ನೀಡಿದರೆ, ಮರಾಠಾ ಸಮಿತಿ ವತಿಯಿಂದ ಶಿವಾಜಿ ಮೂರ್ತಿ ನೀಡಿ ಸನ್ಮಾನಿಸಲಾಯಿತು.

ಸಂಸದ ಭಗವಂತ ಖೂಬಾ ಅವರು ಮೈಸೂರು ಪೇಟ ತೊಡಿಸಿ, ಬೆಳ್ಳಿಯ ಗಣೇಶನ ಮೂರ್ತಿ ನೀಡಿ ಗೌರವಿಸಿದರು.  ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಸೋಮನಾಥ ಪಾಟೀಲ ನಿರೂಪಿಸಿದರು.

* * 

ಬುಲ್ಡೋಜರ್‌ ಕೆಳಗೆ ಹಾಕಲು ಹಿಂಜರಿಯುವುದಿಲ್ಲ: ಗಡ್ಕರಿ

ಭಾಲ್ಕಿ: ‘ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಗುತ್ತಿಗೆದಾರರು ಕಳಪೆ ಕಾಮಗಾರಿ ಕೈಗೊಂಡರೆ ಅವರನ್ನು ಬುಲ್ಡೋಜರ್‌ ಕೆಳಗೆ ಹಾಕಲು ಸಹ ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಎಚ್ಚರಿಸಿದರು. ‘200 ವರ್ಷಗಳವರೆಗೆ ತಗ್ಗು ಗುಂಡಿಗಳು ಬೀಳದಂತಹ ಹೆದ್ದಾರಿಗಳನ್ನು ನಿರ್ಮಿಸಲಾಗುವುದು’ ಎಂದರು.

* * 

50 ವರ್ಷಗಳಲ್ಲಿ ಆಗದಷ್ಟು ಹೆದ್ದಾರಿಗಳನ್ನು ಮುಂದಿನ 2 ವರ್ಷಗಳಲ್ಲಿ ನಿರ್ಮಿಸಲಾಗುವುದು. ಈ ರಸ್ತೆಗಳು ಸುದೀರ್ಘ ಅವಧಿಗೆ ಬಾಳಿಕೆಗೆ ಬರಲಿವೆ.
ನಿತಿನ್‌ ಗಡ್ಕರಿ  ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT