ಎಂ2ಎಂ ಸಂಖ್ಯೆಗಳನ್ನು ಅಂತರ್ಜಾಲ ಸಹಾಯದಿಂದ ಕಾರ್ಯನಿರ್ವಹಿಸುವ ಸ್ವೈಪಿಂಗ್ ಮಷಿನ್, ಕಾರುಗಳ ಮೇಲೆ ನಿಗಾ ವ್ಯವಸ್ಥೆ, ಸಾರಿಗೆ ನಿರ್ವಹಣೆ, ಸ್ಮಾರ್ಟ್ ವಿದ್ಯುತ್ ಮೀಟರ್ಗಳಲ್ಲಿ ಬಳಸಲಾಗುತ್ತಿದೆ. ಇಂಟರ್ನೆಟ್ ನೆರವಿನಿಂದ ಪರಸ್ಪರ ಸಂವಹನ ಸಾಧಿಸುವ, ದೂರದಿಂದಲೇ ನಿಯಂತ್ರಿಸಬಹುದಾದ ಡಿಜಿಟಲ್ ಪರಿಕರಗಳಲ್ಲಿ (ಇಂಟರ್ನೆಟ್ ಆಫ್ ಥಿಂಗ್ಸ್) ಅಳವಡಿಸುವ ಸಿಮ್ಗಳಲ್ಲಿ ಈ ಸಂಖ್ಯೆ ಬಳಸಲಾಗುತ್ತಿದೆ. ಬ್ಯಾಂಕ್ಗಳೂ ಸೇರಿದಂತೆ ವಿವಿಧ ಉದ್ದಿಮೆ ಸಂಸ್ಥೆಗಳು ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಈ ‘ಎಂ2ಎಂ’ ವ್ಯವಸ್ಥೆ ಬಳಸುತ್ತಿವೆ.