ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ನೀಡುವಂತೆ ಒತ್ತಾಯಿಸಿ ಐಟಿಐ ಸಿಬ್ಬಂದಿ ಪ್ರತಿಭಟನೆ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಳು ವರ್ಷ ಪೂರೈಸಿದ ಎಲ್ಲ ಖಾಸಗಿ ಐಟಿಐ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಖಾಸಗಿ ಐಟಿಐಗಳ ಅನುದಾನ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ಖಾಸಗಿ ಐಟಿಐ ಸಂಸ್ಥೆಗಳ ಸಿಬ್ಬಂದಿ ಪುರಭವನದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಉದ್ಯೋಗ ಮತ್ತು ತರಬೇತಿಯ ಪ್ರಧಾನ ನಿರ್ದೇಶನಾಲಯದ (ಡಿಜಿಇಟಿ) ಅನುಮತಿ ಪಡೆದು 7 ವರ್ಷಗಳನ್ನು ಪೂರೈಸಿದ 196 ಐಟಿಐ ಸಂಸ್ಥೆಗಳಿಗೆ 2010 ರವರೆಗೂ ಸಿಬ್ಬಂದಿ ಆಧಾರಿತವಾಗಿ ಸರ್ಕಾರ ವೇತನ ಅನುದಾನ ನೀಡಿದೆ. ನಂತರ ಅನುದಾನ ಸ್ಥಗಿತಗೊಳಿಸಲಾಗಿದೆ. ಇದರಿಂದ ಖಾಸಗಿ ಐಟಿಐ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಮಿತಿಯ ಅಧ್ಯಕ್ಷ ಕೆ.ಕಲವೀರ ಆಚಾರ್ಯ ಹೇಳಿದರು.

‘ಅನುದಾನಕ್ಕೆ ಅರ್ಹವಾದ ಖಾಸಗಿ ಐಟಿಐ ಸಂಸ್ಥೆಗಳ ಪಟ್ಟಿ ಸಿದ್ಧಪಡಿಸಿ ಅಂದಾಜು ವೆಚ್ಚದೊಂದಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅದನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಸಿಬ್ಬಂದಿ ಆಧಾರಿತ ವೇತನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಎಂಜಿನಿಯರ್ ಕೋರ್ಸ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳು ದೇಶದಲ್ಲಿ ಆರಂಭವಾಗುವುದಕ್ಕಿಂತ ಮೊದಲೇ ಐಟಿಐ ಸಂಸ್ಥೆಗಳು ಪ್ರಾರಂಭವಾಗಿದ್ದವು. ಅವುಗಳಲ್ಲಿ ತರಬೇತಿ ಮುಗಿಸಿದ ಕೂಡಲೇ  ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತದೆ. ಆದರೆ, ತರಬೇತಿ ನೀಡುವ ಸಿಬ್ಬಂದಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಐಟಿಐ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಸುಮಾರು 15 ಕೋಟಿ ಖರ್ಚು ಮಾಡುತ್ತದೆ. ಅಲ್ಲಿ, ಮೂರು ಅಥವಾ ಆರು ತಿಂಗಳ ಅವಧಿಯ ಕೋರ್ಸ್‌ ಆರಂಭಿಸಿ, ತರಬೇತಿ ನೀಡುತ್ತದೆ. ಅಂಥ ಕೋರ್ಸ್‌ಗಳಿಂದ ಉದ್ಯೋಗ ಖಾತ್ರಿ ಸಿಗುವುದಿಲ್ಲ. ತರಬೇತಿ ಪಡೆದವರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT