ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಮೂಗುದಾರ

ಕುಲಪತಿ ನೇಮಕಾತಿಯಲ್ಲಿ ರಾಜ್ಯಪಾಲರ ಪರಮಾಧಿಕಾರ ಮೊಟಕು?
Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯಗಳ ಆಡಳಿತ, ಕಾಮಗಾರಿ, ಕುಲಪತಿ ಹಾಗೂ ಸಿಬ್ಬಂದಿ ನೇಮಕಾತಿಯ ಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಮಹತ್ವದ ಮಸೂದೆಗೆ ವಿಧಾನಪರಿಷತ್‌ ಬುಧವಾರ ಅನುಮೋದನೆ ನೀಡಿದೆ.

ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ‘ಕರ್ನಾಟಕ ವಿಶ್ವವಿದ್ಯಾಲಯಗಳ ಮಸೂದೆ–2017’ಕ್ಕೆ ಪರಿಷತ್‌ ಅನುಮೋದನೆ ನೀಡಿರಲಿಲ್ಲ. ಸುದೀರ್ಘ ಚರ್ಚೆಯ ಬಳಿಕ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿ ವರದಿ ಆಧರಿಸಿ ಕೆಲವು ಬದಲಾವಣೆಗಳೊಂದಿಗೆ ಸರ್ಕಾರ ಇದೇ 20 ರಂದು ‍ಪರಿಷತ್ತಿನಲ್ಲಿ ಮಂಡಿಸಿತ್ತು. ರಾಜ್ಯಪಾಲರ ಅಂಕಿತ ದೊರೆತ ಬಳಿಕವಷ್ಟೇ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲಿದೆ.

ಈಗಿರುವ ಕಾಯ್ದೆ ಅನುಸಾರ ಕುಲಪತಿ ನೇಮಕಕ್ಕೆ ಸರ್ಕಾರ ರಚಿಸಿದ್ದ ಶೋಧನಾ ಸಮಿತಿ ಶಿಫಾರಸು ಮಾಡಿದ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತಿತ್ತು. ಆ ಪಟ್ಟಿಯಲ್ಲಿದ್ದ ಹೆಸರುಗಳ ಪೈಕಿ ಒಬ್ಬರನ್ನು ನೇಮಕ ಮಾಡುವ ಪರಮಾಧಿಕಾರ ರಾಜ್ಯಪಾಲರಿಗೆ ಇತ್ತು.

‘ಶೋಧನಾ ಸಮಿತಿ ಶಿಫಾರಸು ಮಾಡುವ ಹೆಸರುಗಳಲ್ಲಿ ಒಬ್ಬರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ಅವರು ಹೆಸರು ತಿರಸ್ಕರಿಸಿದರೆ ಕಡ್ಡಾಯವಾಗಿ ಕಾರಣ ತಿಳಿಸಬೇಕು. ಎರಡನೆ ಬಾರಿ ಶಿಫಾರಸು ಮಾಡಿದಲ್ಲಿ 30 ದಿನದೊಳಗೆ ರಾಜ್ಯಪಾಲರು ಕುಲಪತಿ ನೇಮಕ ಮಾಡಲೇಬೇಕು’ ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ.

ಶೋಧನಾ ಸಮಿತಿಯಲ್ಲಿ ಇನ್ನು ಮುಂದೆ ನಾಲ್ವರ ಬದಲು ಐವರು ಸದಸ್ಯರು ಇರಲು ಅವಕಾಶ ಕಲ್ಪಿಸಲಾಗಿದೆ. ಮೂರು ಸದಸ್ಯರು ಸಭೆಗೆ ಹಾಜರಾದರೂ ಕೋರಂ ಸಂಪೂರ್ಣ ಎಂದು ಪರಿಗಣಿಸಲಾಗುವುದು. ಆದರೆ, ಕುಲಪತಿ ಹುದ್ದೆಗೆ ಅರ್ಹರಾಗಲು 25 ವರ್ಷ ಕಡ್ಡಾಯವಾಗಿ ಬೋಧನೆ ಮಾಡಿರಬೇಕು. ಇದರಲ್ಲಿ 10 ವರ್ಷ ಪ್ರಾಧ್ಯಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರಬೇಕು ಎಂಬ ಹಳೆಯ ನಿಯಮವನ್ನೇ ಉಳಿಸಿಕೊಳ್ಳಲಾಗಿದೆ.

ಕಾಮಗಾರಿ, ಖರೀದಿಗೆ ಕಡಿವಾಣ: ವಿಶ್ವವಿದ್ಯಾಲಯಗಳ ಆವರಣದಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿ ಹಾಗೂ ಪೀಠೋಪಕರಣ ಖರೀದಿ ಪ್ರಕ್ರಿಯೆಯನ್ನು ಸರ್ಕಾರದ ಕಣ್ಗಾವಲಿನಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ.

ಕಟ್ಟಡಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ನಿಯಮದಂತೆ ಅಂದಾಜು ವೆಚ್ಚ ನಿಗದಿಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ₹10 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿ ಹಾಗೂ ಗುತ್ತಿಗೆ ಟೆಂಡರ್ ಪ್ರಕ್ರಿಯೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲೇಬೇಕು. ಕಾರು, ಪೀಠೋಪಕರಣ ಇತರ ಖರೀದಿಗಳಿಗೆ ಕುಲಪತಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.

ಮಸೂದೆ ಬಗ್ಗೆ ವಿವರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ‘1976ರಲ್ಲಿ ವಿಶ್ವವಿದ್ಯಾಲಯ ಕಾಯ್ದೆ ರೂಪಿಸಲಾಯಿತು. ಬಳಿಕ 2000ರಲ್ಲಿ ಸುಧಾರಣೆಗಾಗಿ ತಿದ್ದುಪಡಿ ತರಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಕೃತ, ತಾಂತ್ರಿಕ ಮುಂತಾದ ವಿಷಯಾಧಾರಿತ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. ಹೀಗಾಗಿ, ಕೆಲವು ಗೊಂದಲಗಳು ಉಂಟಾಗಿದ್ದರಿಂದ ಏಕರೂಪ ಕಾಯ್ದೆ ಮಾಡಿದರೆ ಸುಧಾರಣೆ ತರಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು’ ಎಂದು ವಿವರಿಸಿದರು.

‘ಈ ಮಸೂದೆ ವ್ಯಾಪ್ತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಮಾತ್ರ ಕೈಬಿಡಲಾಗಿದೆ. ಇಲ್ಲಿ ಕೇವಲ ಸಂಶೋಧನೆ ಚಟುವಟಿಕೆಗಳು ನಡೆಯುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯಗಳಲ್ಲಿ ಹಣಕಾಸಿನ ಪಾರದರ್ಶಕತೆ ತರಲು ಸಾರ್ವಜನಿಕ ಹಣಕಾಸು ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದರಿಂದ, ಎಲ್ಲ ಖಾತೆಗಳಲ್ಲಿ ನಡೆಯುವ ಹಣಕಾಸಿನ ವಹಿವಾಟಿನ ಬಗ್ಗೆ ಪ್ರತಿ ದಿನವೂ ಮಾಹಿತಿ ದೊರೆಯುತ್ತದೆ’ ಎಂದು ತಿಳಿಸಿದರು.

ಮಸೂದೆ ಬಗ್ಗೆ ವಿವರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ‘1976ರಲ್ಲಿ ವಿಶ್ವವಿದ್ಯಾಲಯ ಕಾಯ್ದೆ ರೂಪಿಸಲಾಯಿತು. ಬಳಿಕ 2000ರಲ್ಲಿ ಸುಧಾರಣೆಗಾಗಿ ತಿದ್ದುಪಡಿ ತರಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಕೃತ, ತಾಂತ್ರಿಕ ಮುಂತಾದ ವಿಷಯಾಧಾರಿತ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. ಹೀಗಾಗಿ, ಕೆಲವು ಗೊಂದಲಗಳು ಉಂಟಾಗಿದ್ದರಿಂದ ಏಕರೂಪ ಕಾಯ್ದೆ ಮಾಡಿದರೆ ಸುಧಾರಣೆ ತರಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು’ ಎಂದು ವಿವರಿಸಿದರು.

‘ಈ ಮಸೂದೆ ವ್ಯಾಪ್ತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಮಾತ್ರ ಕೈಬಿಡಲಾಗಿದೆ. ಇಲ್ಲಿ ಕೇವಲ ಸಂಶೋಧನೆ ಚಟುವಟಿಕೆಗಳು ನಡೆಯುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯಗಳಲ್ಲಿ ಹಣಕಾಸಿನ ಪಾರದರ್ಶಕತೆ ತರಲು ಸಾರ್ವಜನಿಕ ಹಣಕಾಸು ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದರಿಂದ, ಎಲ್ಲ ಖಾತೆಗಳಲ್ಲಿ ನಡೆಯುವ ಹಣಕಾಸಿನ ವಹಿವಾಟಿನ ಬಗ್ಗೆ ಪ್ರತಿ ದಿನವೂ ಮಾಹಿತಿ ದೊರೆಯುತ್ತದೆ’ ಎಂದು ತಿಳಿಸಿದರು.

ಸಿಂಡಿಕೇಟ್‌ ಸದಸ್ಯರಿಗೆ ಸ್ನಾತಕೋತ್ತರ ಪದವಿ

* ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ನಲ್ಲಿ ಇನ್ನು ಮುಂದೆ ಆರು ಸದಸ್ಯರ ಬದಲು ನಾಲ್ವರು ಸದಸ್ಯರು ಇರಲು ಅವಕಾಶ ಕಲ್ಪಿಸಲಾಗಿದೆ

*ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಅಥವಾ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬರು ಸದಸ್ಯರಿರಬೇಕು. ಈ ಪೈಕಿ ಒಬ್ಬರು ಮಹಿಳೆ ಇರಬೇಕು

* ಕನಿಷ್ಠ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ವೃತ್ತಿಪರ ಕೋರ್ಸ್‌ಗಳಲ್ಲಿ ಪದವಿ ಪಡೆದಿರಬೇಕು

* ವಿಧಾನಸಭೆ ಮತ್ತು ವಿಧಾನಪರಿಷತ್‌ನಿಂದ ತಲಾ ಒಬ್ಬರನ್ನು ಸ್ಪೀಕರ್‌ ಹಾಗೂ ಸಭಾಪತಿ  ಸಿಂಡಿಕೇಟ್‌ಗೆ ನೇಮಿಸುತ್ತಾರೆ. ಆಯಾ ಪ್ರದೇಶದ ಶಾಸಕರಿಗೆ ಆದ್ಯತೆ

* ವಿಶ್ವವಿದ್ಯಾಲಯಕ್ಕೆ ಇನ್ನು ಮುಂದೆ ಒಬ್ಬರೇ ಕುಲಸಚಿವರು. ಮೌಲ್ಯಮಾಪನ ಕುಲಸಚಿವ ಹುದ್ದೆ ಬದಲು ಪರೀಕ್ಷಾ ನಿಯಂತ್ರಕ ಹುದ್ದೆ ಸೃಜನೆ

* ಕುಲಸಚಿವ ಹುದ್ದೆಗೆ ಐಎಎಸ್ ಅಧಿಕಾರಿ ನೇಮಕಕ್ಕೆ ಆದ್ಯತೆ ಅಥವಾ ಕನಿಷ್ಠ 10 ವರ್ಷ ಬೋಧನೆ ಮಾಡಿದ ಪ್ರಾಧ್ಯಾಪಕರು ಅರ್ಹರು

*ಕುಲಸಚಿವರ ಅವಧಿ ಮೂರು ವರ್ಷ

* ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಮಹಿಳೆಗೆ ಮೀಸಲು

ಸಿಬ್ಬಂದಿ ನೇಮಕಾತಿ ಮಂಡಳಿ ರಚನೆ

*ಬೋಧಕ, ಬೋಧಕೇತರ ಸಿಬ್ಬಂದಿಯ ಆರಂಭಿಕ ನೇರ ನೇಮಕಾತಿಯ ಪಾರದರ್ಶಕತೆ ಹೆಚ್ಚಿಸಲು ರಾಜ್ಯ ಸರ್ಕಾರದ ಮೂಲಕ ಸಾಮಾನ್ಯ ನೇಮಕಾತಿ ಮಂಡಳಿ ಸ್ಥಾಪನೆ

* ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಲ್ಲಿ 1:3 ಅನುಪಾತದಲ್ಲಿ ಸಂದರ್ಶನ

*ಸಂದರ್ಶನದ ಸಂಪೂರ್ಣವಾಗಿ ವಿಡಿಯೊ ಚಿತ್ರೀಕರಣ ಮಾಡಿ, ವೆಬ್‌ಸೈಟ್‌ಗೆ ಹಾಕಲಾಗುವುದು. ಸಂದರ್ಶನಕ್ಕೂ ಅತಿ ಕಡಿಮೆ ಅಂಕಗಳ ನಿಗದಿ

₹1ಲಕ್ಷ ಪೆನ್‌ ಖರೀದಿ!

ವಿಶ್ವವಿದ್ಯಾಲಯಗಳಲ್ಲಿ ಸಾಮಗ್ರಿಗಳ ಖರೀದಿ ಬಗ್ಗೆ ಸ್ವಾರಸ್ಯಕರವಾಗಿ ಬಿಚ್ಚಿಟ್ಟ ಸಚಿವ ಬಸವರಾಜ ರಾಯರಡ್ಡಿ ಅವರು, ಕೆಲವು ಕುಲಪತಿಗಳು ₹1 ಲಕ್ಷ ಮೌಲ್ಯದ  ಮೊಬ್ಲಾ ಕಂಪನಿಯ ಪೆನ್‌ ಖರೀದಿಸಿದ್ದಾರೆ. ಜತೆಗೆ ಡೈನಿಂಗ್‌ ಟೇಬಲ್‌ ಮತ್ತು ಮಂಚಗಳನ್ನು ಖರೀದಿಸಲು ಅತಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇವುಗಳೆಲ್ಲವನ್ನೂ ಕಾವೇರಿ ಎಂಪೋರಿಯಂನಿಂದಲೇ ಖರೀದಿಸುತ್ತಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT