ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಹಿಡಿಯಲು ಬಂದರು

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಈ ವರ್ಷದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನೋಂದಣಿ ಮಾಡಿಕೊಂಡವರಲ್ಲಿ ವಿದ್ಯಾರ್ಥಿಗಳು, ಸಿನಿಮಾರಂಗದವರ ಸಂಖ್ಯೆ ಹೆಚ್ಚಿದೆ’

-ಹೀಗೆಂದು ಖುಷಿಯಿಂದಲೇ ಹೇಳಿಕೊಂಡರು ಚಿತ್ರೋತ್ಸವದಲ್ಲಿ ಸಂಘಟನಾ ತಂಡದಲ್ಲಿರುವ ರಮಣ್.

ಅವರು ಕಳೆದ ಮೂರು ವರ್ಷಗಳಿಂದ ಬೆಂಗಳೂರು ಚಿತ್ರೋತ್ಸದಲ್ಲಿ ನೋಂದಣಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾರಂಗದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಿರುವ ಅವರು ‘ಸಾಮಾನ್ಯವಾಗಿ ಚಿತ್ರರಂಗದವರು ತಮ್ಮ ಕೆಲಸ ಬಿಟ್ಟು ಸಿನಿಮೋತ್ಸವಕ್ಕೆ ಬರುವುದಿಲ್ಲ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಿತ್ರೋತ್ಸವಕ್ಕೆ ನೋಂದಣಿಮಾಡಿಕೊಂಡ ಚಿತ್ರರಂಗದವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ’ ಎನ್ನುತ್ತಾರೆ ಅವರು.

ಈ ವರ್ಷದ ಚಿತ್ರೋತ್ಸವಕ್ಕೆ ಸುಮಾರು ನಾಲ್ಕು ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ‘ಕಳೆದ ವರ್ಷಕ್ಕೆ ಹೋಲಿಸಿದರೆ ನೋಂದಣಿ ಮಾಡಿಕೊಂಡವರ ಸಂಖ್ಯೆಯಲ್ಲಿ ಶೇ 30 ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ರಮಣ್.

ಇವರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದವರು ಮತ್ತು ಫಿಲಂ ಸೊಸೈಟಿ ಸದಸ್ಯರ ಸಂಖ್ಯೆ ಸಾವಿರವನ್ನು ಮೀರಿದೆ. 800ಕ್ಕೂ ಅಧಿಕ ವಿದ್ಯಾರ್ಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 600 ಹಿರಿಯ ನಾಗರಿಕರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ 1500ಕ್ಕೂ ಅಧಿಕ ಜನರು ಡೆಲಿಗೇಟ್ಸ್ ಆಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಅಂತರ್ಜಾಲದಲ್ಲೂ ಉತ್ತಮ ಪ್ರತಿಕ್ರಿಯೆ: ಅಂತರ್ಜಾಲದಲ್ಲಿ ನೋಂದಣಿ ಮಾಡಿಕೊಂಡವವರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆಯಾಗಿದೆ ಎಂಬ ಸಂಗತಿಯತ್ತಲೂ ಅವರು ಗಮನ ಸೆಳೆಯುತ್ತಾರೆ. ಸುಮಾರು ಎಂಟುನೂರು ಜನರು ಚಿತ್ರೋತ್ಸವದ ಜಾಲತಾಣದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ದೈನಿಕ ಪಾಸ್ ಇಲ್ಲ: ಪ್ರತಿವರ್ಷ ಡೆಲಿಗೇಟ್ಸ್, ಚಿತ್ರರಂಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಎಂಬ ವಿಭಾಗಗಳಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಪಾಸ್‍ಗಳನ್ನು ನೀಡಲಾಗುತ್ತದೆ. ಈ ಪಾಸ್‍ಗಳು ಚಿತ್ರೋತ್ಸವದ ಎಲ್ಲ ದಿನಗಳಿಗೂ ಅನ್ವಯಿಸುತ್ತವೆ. ಆದರೆ ಇವನ್ನು ಹೊರತುಪಡಿಸಿ ಪ್ರತಿದಿನ ಚಿತ್ರೋತ್ಸವ ನಡೆಯುವ ಸ್ಥಳದಲ್ಲಿಯೇ ದೈನಿಕ ಪಾಸ್ ಕೂಡ ನೀಡಲಾಗುತ್ತಿತ್ತು. ಈ ವರ್ಷ ದೈನಿಕ ಪಾಸ್‍ಗಳನ್ನು ನೀಡುತ್ತಿಲ್ಲ.

‘ಪ್ರತಿ ವರ್ಷ ಮೊದಲೇ ನೋಂದಣಿ ಮಾಡಿಕೊಳ್ಳುತ್ತಿದ್ದವರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದ್ದರಿಂದ ಚಿತ್ಸೋತ್ಸವ ನಡೆಯುವ ಸ್ಥಳದಲ್ಲಿಯೇ ದೈನಿಕ ಪಾಸ್‍ಗಳನ್ನು ಕೊಡಲಾಗುತ್ತಿತ್ತು. ಈ ಬಾರಿ ಮೊದಲೇ ನೋಂದಣಿ ಮಾಡಿಕೊಂಡವರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಆದ್ದರಿಂದ ದೈನಿಕ ಪಾಸ್ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ರಮಣ್ ವಿವರಿಸುತ್ತಾರೆ.

ಪ್ರೇಕ್ಷಕರ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಈ ಹೆಚ್ಚಳ ಜಗತ್ತಿನ ಸಿನಿಮಾಗಳ ಕುರಿತು ಜನರಿಗೆ ಹೆಚ್ಚುತ್ತಿರುವ ಆಸಕ್ತಿಯ ಸೂಚನೆಯಷ್ಟೇ ಅಲ್ಲ, ಬೆಂಗಳೂರು ಚಿತ್ರೋತ್ಸವದ ಗುಣಮಟ್ಟ ಮತ್ತು ಜನಪ್ರಿಯತೆಯಲ್ಲಿನ ಬೆಳವಣಿಗೆಯ ಪುರಾವೆಯಾಗಿಯೂ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT