ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವ ಎಂದರೆ...

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಂಬಂಧ ವೃದ್ಧಿಯ ಸೇತುವೆ

ಭಾರತದ ಜೊತೆಗೆ ವಿಶ್ವದ ಇತರ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ವೃದ್ಧಿಸುವ ಸೇತುವೆಯಾಗಿ ಸಿನಿಮೋತ್ಸವವನ್ನು ನಾನು ಕಾಣುತ್ತೇನೆ. ಕಳೆದ 7 ವರ್ಷಗಳಿಂದ ಈ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿರುವ ನನಗೆ ಅಕ್ಷರದ ಜಗತ್ತಿನಾಚೆಗಿನ ಒಂದು ಒಳನೋಟವನ್ನು ಸಿನಿಮಾ ಮಾಧ್ಯಮ ಕಟ್ಟಿಕೊಟ್ಟಿದೆ. ಸಮುದಾಯ ಮತ್ತು ಜನವಾದಿ ಮಹಿಳಾ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನನಗೆ ಸಿನಿಮಾಗಳು ಸಂಸ್ಕೃತಿ ಮತ್ತು ಲಿಂಗಾಧಾರಿತ ವಿಷಯಗಳಲ್ಲಿ ಹೆಚ್ಚಿನ ಒಳನೋಟಗಳನ್ನು ಕಟ್ಟಿಕೊಡುತ್ತವೆ.

ಬಹಳ ಸಂದರ್ಭಗಳಲ್ಲಿ ನಾನು ಭಾರತದಲ್ಲಿ ಮಾತ್ರ ಲಿಂಗಾಧಾರಿತ ತರತಮಗಳಿವೆ ಎಂದು ಭಾವಿಸಿದ್ದೆ. ಆದರೆ, ಈ ರೀತಿಯ ಸಿನಿಮೋತ್ಸವಗಳು ನನಗೆ ವಿವಿಧ ದೇಶಗಳಲ್ಲಿರುವ ಅಘಾದವಾದ ಧರ್ಮಾಧಾರಿತ, ಲಿಂಗಾಧಾರಿತ, ವರ್ಗಾಧಾರಿತ ತಾರತಮ್ಯಗಳ ವ್ಯಾಪ್ತಿಯನ್ನು ಬಹಳ ಆಳವಾಗಿ ತಿಳಿಸಿವೆ. ದೇಶ, ಭಾಷೆಯ ಪರಿಧಿ ಮೀರಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಿಳಿದಾಗ ಹೇಗೆ ಮಹಿಳಾ ಸಮಾಜ ದೌರ್ಜನ್ಯದ ವಿರುದ್ಧ ಒಗ್ಗಟ್ಟಿನ ದನಿಯೆತ್ತಬೇಕು. ಹೇಗೆ ಸ್ಪಂದಿಸಬೇಕು ಎಂಬುದನ್ನು ಈ ಸಿನಿಹಬ್ಬಗಳು ಕಲಿಸಿವೆ.

ಕಳೆದ ಮೂರು ಉತ್ಸವಗಳಿಂದ ಲಿಂಗ ಸಂಬಂಧಿತ ವಿಚಾರಗೋಷ್ಠಿಗೆ ನನಗೆ ಅವಕಾಶ ನೀಡಿದ್ದಾರೆ. ಮಾರ್ಚ್‌ 1 ರಂದು ಆನಂದ್ ಮಹದೇವನ್‌ ಅವರ ‘ಡಾ.ರುಕ್ಮಾಬಾಯಿ’ ಚಿತ್ರ ಪ್ರದರ್ಶನವಾಗುತ್ತಿದೆ. ಭಾರತದ ಮೊದಲ ಮಹಿಳಾ ವೈದ್ಯೆ ಈಕೆ. ಬಾಲ್ಯವಿವಾಹವಾಗಿ ಅದರ ನಡುವೆಯೇ ತನ್ನ ಅಸ್ಮಿತೆಯನ್ನು ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದನ್ನು ಚಿತ್ರ ಕಟ್ಟಿಕೊಡುತ್ತದೆ. ಇಂದಿನ ಸ್ತ್ರೀ ಕುಲಕ್ಕೆ ಈ ಚಿತ್ರ ಆದರ್ಶಪ್ರಾಯವಾಗುವುದರಲ್ಲಿ ಸಂದೇಹವಿಲ್ಲ. ವಿವಿಧ  ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸಂವಾದಕ್ಕೂ ಅವಕಾಶ  ಇದೆ

–ವಿಮಲಾ

*

ಸಂಭ್ರಮ ಹೆಚ್ಚಿದೆ

ಹತ್ತು ವರ್ಷದಲ್ಲಿ ಚಿತ್ರೊತ್ಸವದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವರ್ಷದಿಂದ ವರ್ಷಕ್ಕೆ ಸಂಭ್ರಮ ಹೆಚ್ಚುತ್ತಿದೆ. ಕೇವಲ 600 ಜನರಿಂದ ಆರಂಭವಾದ ಉತ್ಸವದಲ್ಲಿ ಇಂದು ಹತ್ತು ಸಾವಿರಕ್ಕೂ ಅಧಿಕ ಡೆಲಿಗೇಟ್ಸ್‌ ನೋಂದಾಯಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದೆ. ಈ ಬಾರಿಯ ಸಿನಿಹಬ್ಬದ ವೈಶಿಷ್ಟ್ಯವೆಂದರೆ, ಅತ್ಯತ್ತಮ ಎನ್ನಬಹುದಾದ, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಹಾಗೂ ಮಾಸ್ಟರ್ ಕ್ಲಾಸ್‌ಗಳಿವೆ. ಕೇವಲ ಸಿನಿಮಾ ನೋಡುವುದಕ್ಕೆ ಸೀಮಿತವಾಗದೇ ಚಿತ್ರದ ಒಳನೋಟಗಳನ್ನು ಅರಿಯಲು ಸಹಕಾರಿಯಾಗಿದೆ. ಇಂದು ಪ್ರದರ್ಶನವಾಗುತ್ತಿರುವ ಲವ್‌ನೆಸ್‌ ಆಸ್ಕರ್‌ಗೆ ನಾಮಿನೇಟ್‌ ಆದ ಚಿತ್ರ. ಅದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ.

ಶನಿವಾರ ಪ್ರದರ್ಶನವಾಗುವ ಪ್ರೆಂಚ್‌ ಚಿತ್ರ ‘ಪೆಲಿಸಿಟಿ’ ಹಾಗೂ ಜರ್ಮನ್ ಭಾಷೆಯ ‘ಯಂಗ್ ಕಾರ್ಲ್‌ಮಾರ್ಕ್‌’ ಕೂಡ ಉತ್ತಮ ಚಿತ್ರಗಳು. ‘ಕಿಕೋ ಬಾಕ್ಸಿಂಗೆರೊ’ ಸಿನಿಮಾವನ್ನು ನೋಡಿದ್ದೇನೆ. ತಂದೆ, ತಾಯಿಯಿಂದ ದೂರವಿರುವ ಮಗ, ಒಬ್ಬ ವೈದ್ಯನೊಂದಿಗೆ ಹೇಗೆ ಆಪ್ತವಾಗುತ್ತಾನೆ ಎಂಬುದನ್ನು ಈ ಚಿತ್ರ ಬಿಂಬಿಸುತ್ತದೆ. ಪೀಲ್ ಗುಡ್‌ ಎನ್ನಬಹುದಾದ ಚಿತ್ರವಿದು.

ಜನಪ್ರಿಯ ಮಾದರಿಯನ್ನು ಚಿತ್ರ ಅಳವಡಿಸಿಕೊಂಡಿದೆ. ವಿವಿಧ ಅಂತರರಾಷ್ಟ್ರೀಯ ಚಿತ್ರಸ್ಪರ್ಧೆಗಳಲ್ಲಿ ‘ದಾಹ’ ಚಿತ್ರ ವೀಕ್ಷಿಸಿದ್ದೇನೆ. ಡಾಕಾ ಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಪ್ರಶಸ್ತ್ರಿ ದೊರೆತಿದೆ. ಇನ್ನೂ ‘ಚಿತ್ರಕಥೆ’ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸುತ್ತಾನೆ.

–ಗಿರೀಶ್‌ ಕಾಸರವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT