ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಮಾಲಿಯಾದಲ್ಲಿ ಅವಳಿ ಕಾರ್‌ ಬಾಂಬ್‌ ಸ್ಫೋಟ: 38 ಸಾವು

Last Updated 24 ಫೆಬ್ರುವರಿ 2018, 12:49 IST
ಅಕ್ಷರ ಗಾತ್ರ

ಮೊಗದಿಶು: ಸೊಮಾಲಿಯಾ ದೇಶದ ರಾಜಧಾನಿ ಮೊಗದಿಶು ನಗರದಲ್ಲಿ ಶುಕ್ರವಾರ ಸಂಭವಿಸಿದ ಅವಳಿ ಕಾರ್‌ ಬಾಂಬ್‌ ಸ್ಫೋಟದಲ್ಲಿ 38ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಅಧ್ಯಕ್ಷರ ನಿವಾಸ ಸಮೀಪ ಇರುವ ಸುರಕ್ಷತಾ ತಪಾಸಣೆ ಸ್ಥಳದಲ್ಲಿ ಮೊದಲ ಸ್ಫೋಟವಾಗಿದ್ದು, ಹತ್ತಿರದಲ್ಲೇ ಇರುವ ಹೋಟೆಲ್‌ ಸಮೀಪ ಎರಡನೇ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಬಾಬ್‌ ಇಸ್ಲಾಮಿಕ್‌ ಉಗ್ರ ಸಂಘಟನೆ, ಸರ್ಕಾರ ಹಾಗೂ ರಕ್ಷಣೆಯನ್ನು ಗುರಿಯಾಗಿರಿಸಿಕೊಂಡು ದಾಳಿ ಸಂಘಟಿಸಿದ್ದಾಗಿ ಅಂತರ್ಜಾಲದಲ್ಲಿ ಹೇಳಿಕೆ ಪ್ರಕಟಿಸಿದೆ.

ಚೆಕ್‌ಪೋಸ್ಟ್‌ ಅನ್ನು ದಾಟಿ ಅಧ್ಯಕ್ಷರ ನಿವಾಸದತ್ತ ನುಗ್ಗಲು ಸ್ಫೋಟಕ ತುಂಬಿದ್ದ ವಾಹನವನ್ನು ಬಳಸಿಕೊಳ್ಳಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ ಅದನ್ನು ತಡೆದಿದ್ದರು.

‘ರಕ್ಷಣಾ ಪಡೆಗಳು ಉಗ್ರರ ಯೋಜನೆಯನ್ನು ವಿಫಲಗೊಳಿಸಿದ್ದು, ಐವರು ಉಗ್ರರನ್ನೂ ಹತ್ಯೆ ಮಾಡಲಾಗಿದೆ’ ಎಂದು ರಕ್ಷಣಾಧಿಕಾರಿ ಅಬ್ದುಲ್ಲಾಹಿ ಅಹ್ಮೆದ್‌ ಹೇಳಿದ್ದಾರೆ.

ಸೊಮಾಲಿಯಾ ಸರ್ಕಾರವನ್ನು ಉರುಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಶಬಾಬ್‌ ಸಂಘಟನೆ ಕಳೆದ ಅಕ್ಟೋಬರ್‌ನಲ್ಲಿ ನಡೆಸಿದ ಬಾಂಬ್‌ ದಾಳಿಯಲ್ಲಿ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಇದಾದ ನಂತರ ಸರ್ಕಾರ ಸಂಘಟನೆಯ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಜತೆಗೆ ಅಮೆರಿಕ ಸೇನೆಯು ಡ್ರೋಣ್‌ ದಾಳಿ ಸಂಘಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT