ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ, ಆಕಾಶ ಮತ್ತು ಅಂತರಿಕ್ಷ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‍1. ನಮ್ಮ ಭೂ ಗ್ರಹದ ಒಂದು ಸುಂದರ ಉಪಗ್ರಹ ಚಿತ್ರ ಇಲ್ಲಿದೆ (ಚಿತ್ರ-1). ಈ ಚಿತ್ರದಲ್ಲಿ ಗೋಚರಿಸುತ್ತಿರುವ ನೆಲ- ಕಡಲುಗಳನ್ನು ಗಮನಿಸಿ. ಈ ಪ್ರಶ್ನೆಗಳಿಗೆ ಉತ್ತರಿಸಿ:

ಅ. ಇಲ್ಲಿ ಕಾಣುತ್ತಿರುವ ಎರಡು ಭೂಖಂಡಗಳು ಯಾವುವು?
ಬ. ಇಲ್ಲಿ ಕಾಣುತ್ತಿರುವ ಎರಡು ಮಹಾಸಾಗರಗಳು ಯಾವುವು?

2. ಧರೆಯ ಅತ್ಯಂತ ವಿಸ್ತಾರ ಪಾರಾವಾರವಾಗಿರುವ ‘ಶಾಂತ ಸಾಗರ’ವನ್ನು ತೋರಿಸುತ್ತಿರುವ ಭೂಪಟ ಚಿತ್ರ- 2ರಲ್ಲಿದೆ. ಈ ಕೆಳಗೆ ಹೆಸರಿಸಿರುವ ದ್ವೀಪ- ದ್ವೀಪಸ್ತೋಮಗಳ ಪಟ್ಟಿಯಲ್ಲಿ ಯಾವುವು ಶಾಂತಸಾಗರ ಪ್ರದೇಶದಲ್ಲಿವೆ ಗುರುತಿಸಬಲ್ಲಿರಾ?

ಅ. ಫಿಲಿಪ್ಪೀನ್ಸ್
ಬ. ನ್ಯೂಜಿಲ್ಯಾಂಡ್
ಕ. ಮಡಗಾಸ್ಕರ್
ಡ. ಹವಾಯ್
ಇ. ಈಸ್ಟರ್ ದ್ವೀಪಗಳು
ಈ. ಫಾಲ್ಕ್ ಲ್ಯಾಂಡ್ ದ್ವೀಪಗಳು
ಉ. ಗ್ಯಾಲಪಗೋಸ್ ದ್ವೀಪಗಳು
. ಶ್ರೀಲಂಕಾ
ಣ. ಬಿಕಿನೀ ದ್ವೀಪಗಳು

3. ಚಿತ್ರ- 3ರಲ್ಲಿರುವ ಹಕ್ಕಿಯನ್ನು ನೋಡಿ. ಈ ಹಕ್ಕಿ ಯಾವುದು ಗೊತ್ತೇ?

. ಬಿಳಿಕೊಕ್ಕರೆ
ಬ. ಕ್ಯಾಟಲ್ ಈಗ್ರೆಟ್
ಕ. ಕಿಂಗ್‌ಫಿಷರ್
ಡ. ಸ್ಪೂನ್ ಬಿಲ್

4. ಚಿತ್ರ- 4ರಲ್ಲಿರುವ ಭೂಪಟವನ್ನು ಗಮನಿಸಿ. ಈ ಭೂಪಟದಲ್ಲಿ ವನ ಮತ್ತು ವನ್ಯಜೀವಿ ಸಮೃದ್ಧವಾದ ‘ಆಫ್ರಿಕಾ ಖಂಡ’ ಸಂಪೂರ್ಣವಾಗಿ ಕಾಣುತ್ತಿದೆ ಅಲ್ಲವೇ? ಈ ಕೆಳಗೆ ಹೆಸರಿಸಿರುವ ವನ್ಯಜೀವಿ ಸಂರಕ್ಷಣೆಯ ವಿಶ್ವ ಪ್ರಸಿದ್ಧ ರಾಷ್ಟ್ರೀಯ ಉದ್ಯಾನಗಳಲ್ಲಿ ಯಾವುವು ಆಫ್ರಿಕಾ ಖಂಡದಲ್ಲಿವೆ?

ಅ. ಸೆರೆಂಗೆಟಿ ರಾಷ್ಟ್ರೀಯ ಉದ್ಯಾನ
ಬ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ಕ. ಯಾಸೂನಿ ರಾಷ್ಟ್ರೀಯ ಉದ್ಯಾನ
ಡ. ಕ್ರೂಗರ್ ರಾಷ್ಟ್ರೀಯ ಉದ್ಯಾನ
ಇ. ಎಟೋಷಾ ರಾಷ್ಟ್ರೀಯ ಉದ್ಯಾನ

5. ಜ್ವಾಲಾಮುಖಿಯೊಂದರಿಂದ ಕುದಿ ಕುದಿವ ಶಿಲಾಪಾಕ ಉಕ್ಕುತ್ತಿರುವ ರುದ್ರ ರಮ್ಯ ದೃಶ್ಯವೊಂದು ಚಿತ್ರ- 5ರಲ್ಲಿದೆ. ಇಲ್ಲಿ ಪಟ್ಟಿ ಮಾಡಿರುವ ನಿಸರ್ಗ ನಿರ್ಮಿತಿಗಳಲ್ಲಿ ಯಾವುವು ಜ್ವಾಲಾಮುಖಿಗಳಲ್ಲ? ಪತ್ತೆಮಾಡಿ:

ಅ. ಸ್ಟ್ರಾಂಬೋಲಿ
. ಪಿನಾಟುಬೋ
ಕ. ಕಲಹಾರೀ
ಡ. ಫ್ಯೂಜಿಯಾಮಾ
ಇ. ಎರಿಬಸ್
ಈ. ಕಾಕಸಸ್
ಉ. ಎಟ್ನಾ
ಟ. ಸಿಯೆರಾ ನಿವ್ಯಾಡಾ

6. ಉತ್ತರ ಅಮೆರಿಕ ಖಂಡದಲ್ಲಿರುವ ಒಂದು ವಿಶ್ವ ಪ್ರಸಿದ್ಧ ನಿಸರ್ಗ ತಾಣ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದ ಒಂದು ದೃಶ್ಯ ಚಿತ್ರ- 6ರಲ್ಲಿದೆ. ಅಲ್ಲಿನ ಯಾವ ಭೂ ಲಕ್ಷಣ ಈ ತಾಣದ ವಿಶ್ವ ಖ್ಯಾತಿಗೆ ಕಾರಣ?

ಅ. ಬೃಹದಾಕಾರದ ಬಂಡೆಗಳು
ಬ. ವಿಸ್ತಾರ ಸರೋವರಗಳು
ಕ. ಹೇರಳ ಸಂಖ್ಯೆಯ ಬಿಸಿ ಜಲದ ಬುಗ್ಗೆಗಳು ಮತ್ತು ಕಾರಂಜಿಗಳು
ಡ. ಅದ್ಭುತ ನದಿ ಕೊರಕಲುಗಳು

7. ಭೂ ವಾಯುಮಂಡಲದಲ್ಲಿ ಮೈದಳೆವ ಸುತ್ತುವ ಗಾಳಿಯ ವಿದ್ಯಮಾನಗಳು ಹಲವಾರಿವೆ. ಅಂಥವುಗಳಲ್ಲೊಂದಾದ ಡಸ್ಟ್ ಡೆವಿಲ್ ಚಿತ್ರ-7ರಲ್ಲಿದೆ. ಅಂತಹ ಸುತ್ತುವ ಗಾಳಿಯ ವಿದ್ಯಮಾನಗಳನ್ನುಈ ಪಟ್ಟಿಯಲ್ಲಿ ಗುರುತಿಸಿ:

ಅ. ಎಲ್-ನೈನೋ
ಬ. ಸೈಕ್ಲೋನ್
ಕ. ಸಿರೊಕ್ಕೋ
ಡ. ಟಾರ್ನೆಡೋ
ಇ. ಮಾನ್ಸೂನ್

8. ಹರಿವ ನದಿ ನೀರು ನೆಲಕ್ಕಿಳಿದು, ನೆಲವನ್ನು ಕೊರೆದು ರೂಪಿಸಿರುವ ಗುಹೆಯೊಂದರ ಅದ್ಭುತ ದೃಶ್ಯವೊಂದು ಚಿತ್ರ- 8ರಲ್ಲಿದೆ. ನೆಲದಾಳದಲ್ಲಿ ಮೈದಳೆದು, ಸ್ತಂಭ- ಬಿಳಿಲುಗಳಿಂದಲೂ ಇತರ ಹೇರಳ ಬಗೆಗಳ ಚಿತ್ತಾರಗಳಿಂದಲೂ ಅಲಂಕರಣಗೊಳ್ಳುವ ಇಂಥ ಗುಹಾಲೋಕಗಳು ನೆಲದ ಯಾವ ಬಗೆಯ ಶಿಲಾ ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ?

ಅ. ಮರಳು ಶಿಲೆ
ಬ. ಬಸಾಲ್ಟ್ ಶಿಲೆ
ಕ. ಸುಣ್ಣ ಶಿಲೆ
ಡ. ಗ್ರಾನೈಟ್ ಶಿಲೆ
ಇ. ಅಮೃತ ಶಿಲೆ

9. ಕಾಗದದ ಮೇಲೆ ಬರೆಯಲು ಬಳಸುವ ಪೆನ್ಸಿಲ್‌ಗಳು ಚಿತ್ರ- 9ರಲ್ಲಿವೆ. ಇಂಥ ಸೀಸದ ಕಡ್ಡಿಗಳನ್ನು ತಯಾರಿಸಲು ಬಳಸುವ ನೈಸರ್ಗಿಕ ಖನಿಜ ಯಾವುದು?

ಅ. ಟಾಲ್ಕ್
ಬ. ಗ್ರಾಫೈಟ್
. ಸೋಡಿಯಂ
ಡ. ಆಂಥ್ರಾಸೈಟ್

10. ನಮ್ಮ ಸೌರವ್ಯೂಹದ್ದೇ ಶನಿ ಗ್ರಹದ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿ ಇತ್ತೀಚೆಗಷ್ಟೇ ‘ಮೃತ’ವಾದ ವ್ಯೋಮ ನೌಕೆ ‘ಕ್ಯಾಸಿನೀ ಮಿಷನ್’ ಚಿತ್ರ- 10ರಲ್ಲಿದೆ. ಇಲ್ಲಿ ಹೆಸರಿಸಿರುವ ವ್ಯೋಮ ನೌಕೆಗಳಲ್ಲಿ ಯಾವುದು ಅತ್ಯಂತ ದೀರ್ಘ ಕಾಲದಿಂದ ಇನ್ನೂ ಕ್ರಿಯಾಶೀಲವಾಗಿಯೇ ಉಳಿದಿದೆ?

ಅ. ಗೆಲಿಲಿಯೋ
ಬ. ಯೂಲಿಸಿಸ್
ಕ. ಜ್ಯೂನೋ
ಡ. ಪಯೋನೀರ್-1
ಇ. ವಾಯೇಜರ್-2
ಈ. ವೈಕಿಂಗ್
ಉ. ಮ್ಯಾಜಲಾನ್

11 ನಮ್ಮ ಸೌರವ್ಯೂಹಕ್ಕೇ ಸೇರಿದ ಎರಡು ಅತ್ಯಂತ ವಿಶಿಷ್ಟ ‘ಚಂದ್ರ’ರ ಮೇಲ್ಮೈ ಲಕ್ಷಣಗಳನ್ನು ತೋರುವ ಚಿತ್ರಗಳು ಇಲ್ಲಿವೆ. ಜ್ವಾಲಾಮುಖಿ ಚಟುವಟಿಕೆ ಗರಿಷ್ಠ ಪ್ರಮಾಣದಲ್ಲಿ ನಡೆಯುತ್ತಿರುವ ಚಂದ್ರ ಚಿತ್ರ- 11ರಲ್ಲೂ, ನೀರ್ಗಲ್ಲಿನದೇ ಇಡೀ ಮೇಲ್ಮೈ ಅನ್ನು ಹೊಂದಿರುವ ಚಂದ್ರ ಚಿತ್ರ- 12 ರಲ್ಲೂ ಇವೆ.

ಅ. ಈ ಚಂದ್ರರು ಯಾವುವು ಗೊತ್ತೇ?
ಬ. ಈ ಎರಡೂ ಚಂದ್ರರು ಯಾವ ಗ್ರಹದ ಉಪಗ್ರಹಗಳಾಗಿವೆ?

12. ಸೌರೇತರ ನಕ್ಷತ್ರವೊಂದನ್ನು ಪರಿಭ್ರಮಿಸುತ್ತಿರುವ ಅನ್ಯ ಗ್ರಹವೊಂದರ ದೃಶ್ಯ ಚಿತ್ರ- 13ರಲ್ಲಿದೆ. ಈವರೆಗೆ ಪತ್ತೆಯಾಗಿರುವ ಸಾವಿರಾರು ಅನ್ಯಗ್ರಹಗಳಲ್ಲಿ ನಮಗೆ ಅತ್ಯಂತ ಹತ್ತಿರದ ಅನ್ಯ ಗ್ರಹ ಯಾವ ನಕ್ಷತ್ರವನ್ನು ಸುತ್ತುತ್ತಿದೆ?

ಅ. ಆಲ್ಡೆಬ್ರಾನ್
ಬ. ಆಲ್ಫಾ ಸೆಂಟಾರಿ
ಕ. ಸಿರಿಯಸ್
ಡ. ಬರ್ನಾರ್ಡ್ ನಕ್ಷತ್ರ
ಕ. ಕ್ಯಾಪೆಲ್ಲ

13. ಕಳ್ಳಿ ಗಿಡದ ಹೂವುಗಳ ನಡುವೆ ಆಹಾರ ಅರಸುತ್ತಿರುವ ಸರ್ಪವೊಂದರ ದೃಶ್ಯ ಚಿತ್ರ- 14ರಲ್ಲಿದೆ. ಸರ್ಪಗಳ ಬಗೆಗಿನ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?

ಅ. ಸರ್ಪಗಳು ಉಭಯವಾಸಿ ವರ್ಗಕ್ಕೆ ಸೇರಿವೆ
ಬ. ಸರ್ಪಗಳು ಶೀತ ರಕ್ತ ಪ್ರಾಣಿಗಳಾಗಿವೆ
ಕ. ಎಲ್ಲ ಸರ್ಪಗಳೂ ವಿಷವನ್ನು ಹೊಂದಿವೆ
ಡ. ಸರ್ಪಗಳು ಹಾಲನ್ನಾಗಲೀ, ಯಾವುದೇ ಸಸ್ಯಾಹಾರವನ್ನಾಗಲೀ ಸೇವಿಸುವುದಿಲ್ಲ
ಇ. ನಾಗರಹಾವಿನ ವಿಧಗಳು ಮಾತ್ರ ಹೆಡೆ ತೆರೆಯುತ್ತವೆ
ಈ. ಸರ್ಪ ವಿಷ ಹಲವಾರು ಜೀವ ರಕ್ಷಕ ಔಷಧಗಳಿಗೆ ಆಕರವಾಗಿದೆ
ಉ. ಇಲಿಗಳ ಸಂಖ್ಯಾ ನಿಯಂತ್ರಣದಲ್ಲಿ ಸರ್ಪಗಳದು ಮಹತ್ವದ ಪಾತ್ರ
ಟ. ಸಾಗರದಲ್ಲೂ ಸರ್ಪಗಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT