ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ ಕ್ವಾರ್ಟರ್‌ಗೆ ಭಾರತದ ಸಿಂಧು, ಪ್ರಣಯ್‌

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಮೀರ್‌ ವರ್ಮಾ, ವೈಷ್ಣವಿ ಜಕ್ಕರೆಡ್ಡಿಗೆ ನಿರಾಸೆ
Last Updated 11 ಜುಲೈ 2018, 17:17 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಭಾರತದ ಪಿ. ವಿ. ಸಿಂಧು ಹಾಗೂ ಎಚ್‌. ಎಸ್‌. ಪ್ರಣಯ್‌ ಅವರು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಹಂತ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಪಿ. ವಿ. ಸಿಂಧು ಅವರು ಬಲ್ಗೇರಿಯಾದ ಲಿಂಡಾ ಜೆಚಿರಿ ಅವರನ್ನು 21–8, 21–15ರಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಸಿಂಧು ಅವರು ಹಾಂಕಾಂಗ್‌ನ ಯಿಪ್‌ ಪುಯಿ ಯಿನ್‌ ಅವರನ್ನು ಎದುರಿಸಲಿದ್ದಾರೆ.

ಮೊದಲ ಗೇಮ್‌ನಿಂದಲೂ ಆಕರ್ಷಕ ಆಟ ಆಡಿದ ಸಿಂಧು ಅವರು ಮನಮೋಹಕ ಸ್ಮ್ಯಾಷ್‌ ಹಾಗೂ ರಿಟರ್ನ್‌ಗಳಿಂದ ಗಮನಸೆಳೆದರು. ಭಾರತದ ಆಟಗಾರ್ತಿ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವಲ್ಲಿ ಲಿಂಡಾ ಅವಚರು ವಿಫಲವಾದರು.

ಜಪಾನ್‌ನ ಸಯಾಕಾ ಸಾಟೊ ಅವರುವೈಷ್ಣವಿ ಜಕ್ಕರೆಡ್ಡಿ ಅವರನ್ನು 21–13, 21–17ರಿಂದ ಮಣಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪ್ರಣಯ್‌ ಅವರು ಸ್ಪೇನ್‌ನ ಪ್ಯಾಬ್ಲೊ ಏಬಿಯನ್‌ ಅವರನ್ನು 21–16, 21–19ರಿಂದ ಸೋಲಿಸಿದರು. ಪ್ರೀ ಕ್ವಾರ್ಟರ್‌ ಘಟ್ಟದಲ್ಲಿ ಪ್ರಣಯ್‌ ಅವರು ಇಂಡೊನೇಷ್ಯಾದ ದ್ವಿ ಕುಂಕೂರು ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಸಮೀರ್‌ ವರ್ಮಾ ಅವರು ಥಾಯ್ಲೆಂಡ್‌ನ ತನೊಂಗ್ಸ್‌ ಸೆನ್ಸೊಂಬೂನಸ್ಕ್‌ ವಿರುದ್ಧ 18–21, 16–21ರಿಂದ ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಮನು ಅತ್ರಿ ಹಾಗೂ ಬಿ. ಸುಮಿತ್‌ ರೆಡ್ಡಿ ಜೋಡಿಯು ಚೀನಾ ತೈಪೆಯ ಚೆನ್‌ ಹುಂಗ್‌ ಲಿಂಗ್‌ ಹಾಗೂ ವಾಂಗ್‌ ಚಿ ಲಿನ್‌ ಜೋಡಿಯ ವಿರುದ್ಧ 21–18, 15–21, 21–17ರಿಂದ ಗೆದ್ದರು. ಇದರೊಂದಿಗೆ ಹದಿನಾರರ ಘಟ್ಟ ತಲುಪಿದ್ದಾರೆ.

ಡಬಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ಎಂ. ಆರ್‌. ಅರ್ಜುನ್‌ ಹಾಗೂ ರಾಮಚಂದ್ರನ್‌ ಶ್ಲೋಕ್‌ ಜೋಡಿಯು ಇಂಡೊನೇಷ್ಯಾದ ವಹ್ಯು ನಾಯಕಾ ಆರ್ಯ ಪಾಂಗ್‌ಕರ್ಯಾನಿರಾ ಹಾಗೂ ಅದೆ ಯೂಸುಫ್‌ ಸಂಟೋಸೊ ಜೋಡಿಯ ವಿರುದ್ಧ 18–21, 21–13, 16–21ರಿಂದ ಸೋತಿತು.

ಎಂ. ಅನಿಲ್‌ಕುಮಾರ್‌ ರಾಜು ಹಾಗೂ ವೆಂಕಟ್‌ ಗೌರವ್‌ ಪ್ರಸಾದ್‌ ಜೋಡಿಯು ಹಾಂಕಾಂಗ್‌ನ ಚುಂಗ್‌ ಯಾನ್ನಿ ಹಾಗೂ ಟಾಮ್‌ ಚುನ್‌ ಹೀ ಜೋಡಿಯ ಎದುರು 21–14, 12–21, 14–21ರಿಂದ ಮಣಿಯಿತು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ ಹಾಗೂ ಎಸ್‌. ಪೂರ್ವಿಶಾ ಜೋಡಿಯು ಹಾಗೂ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸೌರಭ್‌ ಶರ್ಮಾ ಹಾಗೂ ಅನೌಶ್ಕಾ ಪಾರಿಖ್‌ ಜೋಡಿಯು ಸೋತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT