ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಸೂಕ್ಷ್ಮ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಿಕ್ವಿಯಮ್‌ ಫಾರ್‌ ಮಿಸಸ್‌ ಜೆ

ಪತಿಯನ್ನು ಕಳೆದುಕೊಂಡ ಮಹಿಳೆ ಗಂಡನ ಪುಣ್ಯತಿಥಿಯ ಕೆಲಸಗಳನ್ನೆಲ್ಲಾ ಮುಗಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಆಕೆ ಎದುರಿಸುವ ಸವಾಲುಗಳನ್ನು ಚಿತ್ರವು ಕಟು ಹಾಸ್ಯದ ಮೂಲಕ ಕಟ್ಟಿಕೊಡುತ್ತದೆ. ಪತಿಯ ಪ್ರೀತಿಗಾಗಿ ಆಕೆ ಹಂಬಲಿಸುವ ರೀತಿಯ ನಿರೂಪಣೆ ಆಪ್ತವಾಗುತ್ತದೆ. ತಾನು 20 ವರ್ಷ ಸಲ್ಲಿಸಿದ ಸೇವೆಗಾಗಿ ಸೇವಾ ಪ್ರಮಾಣ ಪತ್ರ ಪಡೆಯುವುದೊಂದೇ ಬಾಕಿ. ಆದರೆ, ಸಾಮಾಜಿಕವಾಗಿ ಬದಲಾವಣೆಯ ಪರ್ವದಲ್ಲಿ ಆಕೆಯ ದೇಶದಲ್ಲಿ ಅದು ತುಂಬಾ ಕಷ್ಟಕರ. ಬದುಕೂ ದುಸ್ತರ, ಸಾವು ಇನ್ನೂ ಕಷ್ಟ ಎನ್ನುವುದನ್ನು ಚಿತ್ರ ಹೇಳುತ್ತದೆ.

ನಿ: ಬೋಜನ್‌ ವೂಲೆಸ್ಟಿಕ್‌, ಪರದೆ–7 ಬೆಳಿಗ್ಗೆ 10

ಬ್ರೆತ್

ಬಾಲಕಿಯೊಬ್ಬಳ ಜೀವನೋತ್ಸಾಹದ ಮೂಲಕ, ಅವಳು ಕಟ್ಟಿಕೊಳ್ಳುವ ಭ್ರಮಾಲೋಕದ ಮೂಲಕ 70–80ರ ದಶಕದ ಇರಾನ್‌ನ ಚಿತ್ರಣವನ್ನು ಕಟ್ಟಿಕೊಡುವ ಇರಾನಿಯನ್‌ ಚಿತ್ರ ‘ಬ್ರೆತ್’. ಎರಡು ದೇಶಗಳ ನಡುವಿನ ಯುದ್ಧ ತಲೆಮಾರುಗಳ ಕನಸನ್ನು ಹೇಗೆ ನುಚ್ಚುನೂರಾಗಿಸುತ್ತದೆ ಎಂಬುದನ್ನು ಆಪ್ತ ನಿರೂಪಣೆಯ ಮೂಲಕ ಕಟ್ಟಿಕೊಟ್ಟಿದೆ. ಮಧ್ಯಮವರ್ಗದ ಕುಟುಂಬವೊಂದು ಬದುಕುಕಟ್ಟಿಕೊಳ್ಳಲು ಹೆಣಗುವುದನ್ನು ಸಿನಿಮಾ ಬಿಂಬಿಸುತ್ತದೆ.

ನಿ.ನರ್ಗೀಸ್‌ ಅಬಯಾರ್. ಪರದೆ–10, ಮಧ್ಯಾಹ್ನ 12.20

ವಜೀಬ್

ಅಣ್ಣನೊಬ್ಬ ತನ್ನ ತಂಗಿ ಮದುವೆಯ ಆಮಂತ್ರಣ ಪತ್ರಗಳನ್ನು ತಂದೆಯ ಸ್ನೇಹಿತರು, ಸಂಬಂಧಿಕರಿಗೆ ಕೊಡಲು ಹೋಗುವಾಗ ನಡೆಯುವ ಘಟನಾವಳಿಗಳ ಮೂಲಕ ಪ್ಯಾಲೆಸ್ಟೈನ್ ದೇಶದ ಸಮಸ್ಯೆಗಳು, ತಲೆಮಾರುಗಳ ಸಂಘರ್ಷವನ್ನು ಕಟ್ಟಿಕೊಡುವ ಚಿತ್ರ ವಜೀಬ್. ಮಗನನ್ನು ತನ್ನೊಡನೆ ಉಳಿಸಿಕೊಳ್ಳಲು ತಂದೆ ಮಾಡುವ ಪ್ರಯತ್ನ, ದೇಶ ಬಿಟ್ಟು ಹೋಗಲು ಮಗ ಕೊಡುವ ಕಾರಣಗಳು ಗಮನ ಸೆಳೆಯುತ್ತವೆ.

ನಿ. ಅನ್ನೇಮರಿ ಜಾಸಿರ್. ಪರಧೆ–4. ಸಂಜೆ–6

ಸಿಂಫೋನಿ ಫಾರ್ ಅನಾ

ಕ್ರಾಂತಿಯ ನೆರಳಿಲ್ಲಿ ಪ್ರೀತಿಗಾಗಿ ಪರಿತಪಿಸುವ ಹಂಬಲಿಸುವ ಚಿತ್ರ ಇದು. 1970ರ ದಶಕದಲ್ಲಿ ವಿಶ್ವವನ್ನು ಮಿಲಿಟರಿ ಸರ್ವಾಧಿಕಾರದ ಕರಿನೆರಳು ಆವರಿಸಿರುವಾಗ 15 ವರ್ಷ ವಯಸ್ಸಿನ ಆನಾ ಹೇಗೆ ಪ್ರೀತಿಯನ್ನು ಉಳಿಸಿಕೊಳ್ಳುತ್ತಾಳೆ ಎನ್ನುವುದನ್ನು ಚಿತ್ರವು ಕಟ್ಟಿಕೊಡುತ್ತದೆ.

ನಿ–ಅರ್ನೆಸ್ಟೋ ಅರ್ಡಿಟೊ. ಪರದೆ–11. ರಾತ್ರಿ 8.10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT