ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 26–2–1968

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪ್ರಧಾನಿ ಪುತ್ರನ ‍ಪಾಣಿಗ್ರಹಣ

ನವದೆಹಲಿ, ಫೆ. 25– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುತ್ರ ಶ್ರೀ ರಾಜೀವ್ ಗಾಂಧಿ ಮತ್ತು ಇಟಲಿಯ ಕನ್ಯಾಮಣಿ ಸೋನಿಯಾ ಮಯಿನೊ ಇಂದು ಸಂಜೆ ಬಂಧು ಬಳಗದ ಸಮ್ಮುಖದಲ್ಲಿ ದಂಪತಿಗಳಾದರು.

ಪ್ರಧಾನಿಯ ನಿವಾಸದಲ್ಲಿ ಸರಳ, ಸುಂದರ ಸಮಾರಂಭ. ವಧುವಿನ ಪರಿವಾರಕ್ಕೆ ಸ್ವಾಗತ ಕೋರಲು ಕೆಂಪು ಅಂಚಿನ ಟಿಸೂರ್ ಸೀರೆ ಉಟ್ಟ ಶ್ರೀಮತಿ ಇಂದಿರಾ ಗಾಂಧಿ ಅವರ ಸಂಭ್ರಮ.

ಅವರ ಜೊತೆ ಸಡಗರಿಸುತ್ತಿದ್ದವರು ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ದಿವಂಗತ ಕಮಲಾ ನೆಹರೂ ಅವರ ಸೋದರ ಶ್ರೀ ಕೆ.ಎನ್. ಕೌಲ್, ದಿವಂಗತ ಫಿರೋಜ್ ಗಾಂಧಿ ಅವರ ಸೋದರಿ ಕುಮಾರಿ ತಹಮಿನ ಗಾಂಧಿ.

ತಾಯಿ ಪವೊಲ ಮಯಿನೊ, ಸೋದರಿ ಅನಿಸಿಯ, ಚಿಕ್ಕಮ್ಮ ಅನಿತ ಮತ್ತು ಚಿಕ್ಕಪ್ಪ ಏಂಜಲೊ ಪ್ರಿಡೆಬನ್ ಅವರೊಡನೆ ಶಹನಾಯ್ ಸಂಗೀತದ ನಡುವೆ ಲಜ್ಜೆಯ ಹೆಜ್ಜೆ ಇಡುತ್ತಾ ನಡೆದು ಬಂದ ಕನ್ಯಾಮಣಿ ಸೋನಿಯಾಗೆ ಆರತಿ ಬೆಳಗಿದರು ಕುಮಾರಿ ತಹಮಿನ ಗಾಂಧಿ.

ಹೆಣ್ಣಿನ ಕಡೆಯವರಿಗೆ ರಜತದಾನಿಯಿಂದ ಪನ್ನೀರಿನ ಸ್ವಾಗತ.

ಆಕರ್ಷಕ ಚಮಕಿ ಜರಿ ಅಂಚಿನ ಕೆಂಪು ಖಾದಿ ಸೀರೆ ಉಟ್ಟ ವಧುವಿಗೆ ಆಭರಣಗಳ ಬದಲು ಪುಷ್ಪಾಲಂಕಾರ.

*

ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಡಳಿತ: ವಿಧಾನ ಮಂಡಲ ಸ್ಥಗಿತ

ನವದೆಹಲಿ, ಫೆ. 25– ಭಾರತದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶವನ್ನು ಇಂದು ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಲಾಯಿತು.

ರಾಜ್ಯಪಾಲರ ಶಿಫಾರಸಿನ ಪ್ರಕಾರ ರಾಜ್ಯ ವಿಧಾನ ಮಂಡಲವನ್ನು ಸಂವಿಧಾನದ 356ನೇ ವಿಧಿಯಂತೆ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT