ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಿ ಭಾಷೆ ಕಲಿಯುತ್ತಿರುವ ಭಾರತೀಯ ಯೋಧರು!

Last Updated 25 ಫೆಬ್ರುವರಿ 2018, 19:39 IST
ಅಕ್ಷರ ಗಾತ್ರ

ಭೋಪಾಲ್: ಭಾರತ–ಚೀನಾ ಗಡಿಯಲ್ಲಿರುವ ಇಂಡೊ–ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಪಡೆಯ (ಐಟಿಬಿಪಿ) ಸಿಬ್ಬಂದಿ ಚೀನಿ ಕಲಿಯಲು ಮುಂದಾಗಿದ್ದಾರೆ.

ಚೀನಾ ಸೈನಿಕರ ಜತೆ ಸಂವಹನ ನಡೆಸಲು ಅನುಕೂವಾಗಲಿ ಎಂಬ ದೃಷ್ಟಿಯಿಂದ ಐಟಿಬಿಪಿಯ 25 ಸಿಬ್ಬಂದಿ ಮಧ್ಯಪ್ರದೇಶದ ಸಾಂಚಿ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಚೀನಿ ಭಾಷೆ ಕಲಿಕಾ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ.

ಸಾಂಚಿ ವಿಶ್ವವಿದ್ಯಾಲಯದಲ್ಲಿ 2016–17ನೇ ಸಾಲಿನಲ್ಲಿ ಆರಂಭಿಸಲಾದ ಕೋರ್ಸ್‌ಗೆ ಐಟಿಪಿಯ ನಾಲ್ವರು ಸಿಬ್ಬಂದಿ ಪ್ರವೇಶ ಪಡೆದಿದ್ದರು.

ಮೊದಲ ವರ್ಷವೇ ಐಟಿಬಿಪಿಯ ಇಬ್ಬರು ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಯೋಧರು  ಚೀನಿ ಭಾಷೆ ಕಲಿತದ್ದರಿಂದ ಗಡಿಯಲ್ಲಿ ವ್ಯವಹರಿಸಲು ಅವರಿಗೆ ಅನುಕೂಲವಾಗುತ್ತಿದೆ.

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಬೌದ್ಧ ಧರ್ಮೀಯರು ಮತ್ತು ಬೌದ್ಧ ಬಿಕ್ಕುಗಳು ಹೆಚ್ಚಾಗಿರುವ ಅನೇಕ ಹಳ್ಳಿಗಳಿವೆ. ಅವರೆಲ್ಲಾ ಚೀನಿ ಭಾಷೆಯಲ್ಲೇ ವ್ಯವಹರಿಸುತ್ತಾರೆ.

ಆ ಭಾಷೆ ಗೊತ್ತಿದ್ದರೆ ಗಡಿ ರಕ್ಷಣೆಗೂ ನೆರವಾಗುತ್ತದೆ ಎಂದು ಐಟಿಬಿಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT