ಕೇಂದ್ರ ಸರ್ಕಾರವು ಇತ್ತೀಚಿಗೆ ಕಸ್ಟಮ್ಸ್ ಡ್ಯೂಟಿ ಹೆಚ್ಚಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ತನ್ನ ಟೆಲಿವಿಷನ್ ಸೆಟ್‌ಗಳ ಬೆಲೆಯನ್ನು ಶೇ 2 ರಿಂದ ಶೇ 7ರಷ್ಟು ಹೆಚ್ಚಿಸುವುದಾಗಿ ಪ್ಯಾನಾಸೋನಿಕ್ ತಿಳಿಸಿದೆ. ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಇನ್ನೂ ಕೆಲ ಸಂಸ್ಥೆಗಳು ತಿಳಿಸಿವೆ. ಮಾರುಕಟ್ಟೆ ಮೂಲಗಳ ಪ್ರಕಾರ , ಸ್ಯಾಮ್ಸಂಗ್ ಶೇ 2 ರಿಂದ ಶೇ 6ರವರೆಗೆ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.