ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ 3–3–1968

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬ್ಯಾಂಕ್ ದರ ಶೇ. 6 ರಿಂದ 5ಕ್ಕೆ
ಮುಂಬೈ, ಮಾ. 2–
ರಾಷ್ಟ್ರದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವ ಹಿತದೃಷ್ಟಿಯಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಉಂಟು ಮಾಡಲು ರಿಜರ್ವ್ ಬ್ಯಾಂಕ್ ಇಂದು ಬ್ಯಾಂಕ್ ದರವನ್ನು ಶೇ. 6 ರಿಂದ ಶೇ. 5ಕ್ಕೆ ಇಳಿಸಿತು.

ಈ ದರ ಈ ಕೂಡಲೇ ಜಾರಿಗೆ ಬರುವುದೆಂದು ರಿಜರ್ವ್ ಬ್ಯಾಂಕ್ ಪ್ರಕಟಿಸಿದೆ. ಬ್ಯಾಂಕ್‌ಗಳ ಸಾಲ ನೀಡಿಕೆ ದರ ಮತ್ತು ಠೇವಣಿ ದರವನ್ನೂ ರಿಜರ್ವ್ ಬ್ಯಾಂಕ್ ಇಳಿಸಿದೆ.

ಹಣಕಾಸಿನ ಪೇಟೆಯಲ್ಲಿ ನಿರಾಂತಕ
ಮುಂಬೈ, ಮಾ. 2–
ರಿಜರ್ವ್ ಬ್ಯಾಂಕ್, ಬ್ಯಾಂಕ್‌ ದರ ಇಳಿಸಿದ ಪರಿಣಾಮ ಅಂತರ ಬ್ಯಾಂಕ್ ವ್ಯವಹಾರ ದರದಲ್ಲಿ ಕೂಡಲೇ ಬದಲಾವಣೆ ಉಂಟಾಗಲಿಲ್ಲ. ಅದು ಶೇ. 5 ರಂತೆಯೇ ಇತ್ತು. ಅಲ್ಪಾವಧಿ ಹಣಕಾಸಿನ ಪೇಟೆಯ ಪರಿಸ್ಥಿತಿಯು ದಿನದ ವ್ಯವಹಾರ ಮುಕ್ತಾಯದ ವೇಳೆಗೆ ಸುಗಮವಾಗಿತ್ತು.

ಸಂಸತ್ ಭವನ ನಿರ್ವಹಣೆಗೆ ವರ್ಷಕ್ಕೆ 2.64 ಲಕ್ಷ ರೂ.
ನವದೆಹಲಿ, ಮಾ. 2– 
ಇಲ್ಲಿನ ಸಂಸತ್ ಭವನದ ನಿರ್ವಹಣೆ ಹಾಗೂ ದುರಸ್ತು ಕಾರ್ಯಗಳಿಗಾಗಿ ವರ್ಷಕ್ಕೆ 2.64 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ಎಡ್ವಿನ್ ಲುಟ್‌ಯೆನ್ ಮತ್ತು ಸರ್‌ ಹರ್‌ಬರ್ಟ್‌ರವರು ಸಿದ್ಧಪಡಿಸಿದ ವಿನ್ಯಾಸದಂತೆ 1927ರಲ್ಲಿ ನಿರ್ಮಿಸಿದ ಈ ಭಾರಿ ಭವನಕ್ಕೆ 83 ಲಕ್ಷ ರೂಪಾಯಿ ವೆಚ್ಚ ತಗುಲಿತ್ತು. 560 ಅಡಿ ವ್ಯಾಸದ ಈ ಬೃಹತ್ ಭವನದ ಈಗಿನ ಅಂದಾಜು ಬೆಲೆ 5 ಕೋಟಿ ರೂಪಾಯಿ.

ನಿರುದ್ಯೋಗ ನಿವಾರಣೆಗೆ ರಾಷ್ಟ್ರಪತಿ ಸೂತ್ರ
ನವದೆಹಲಿ, ಮಾ. 2–
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್‌ರವರು ಮೂರು ಅಂಶಗಳ ಕಾರ್ಯಕ್ರಮವೊಂದನ್ನು ಸಲಹೆ ಮಾಡಿದ್ದಾರೆ.

ಮೂರು ಅಂಶಗಳ ಕಾರ್ಯಕ್ರಮ ಜನಸಂಖ್ಯೆಯ ನಿಯಂತ್ರಣ ಮತ್ತು ಜನನ ಪ್ರಮಾಣವನ್ನು ಈಗಿರುವ ಅರ್ಧಕ್ಕೆ ಇಳಿಸುವುದು. ಕೃಷಿ ಉತ್ಪಾದನೆ ವೃದ್ಧಿಸುವುದು ಮತ್ತು ಕೈಗಾರಿಕಾ ಅಭಿವೃದ್ಧಿ ಇವುಗಳ ಮೂಲಕ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವುದು. ಪ್ರತಿಯೊಬ್ಬ ವಿದ್ಯಾವಂತನೂ ದೇಶಕ್ಕೆ ಒಂದು ಸಮಸ್ಯೆಯಾಗದೆ ಉತ್ಪಾದನೆ ಹೆಚ್ಚಿಸುವ ಕೇಂದ್ರ ಶಕ್ತಿಯಾಗುವಂತೆ ಶಿಕ್ಷಣ ವಿಧಾನವನ್ನು ಪುನರ್ ರೂಪಿಸುವುದು.

ಉ ಥಾಂಟ್ ಜತೆ ಪಾರ್ಥಸಾರಥಿ ಭೇಟಿ
ವಿಶ್ವರಾಷ್ಟ್ರಸಂಸ್ಥೆ, ಮಾ. 2–
ಭಾರತದ ರಾಯಭಾರಿ ಶ್ರೀ ಜಿ. ಪಾರ್ಥಸಾರಥಿ ಅವರು ಇಂದು ಬೆಳಿಗ್ಗೆ ವಿಶ್ವರಾಷ್ಟ್ರಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉ ಥಾಂಟ್ ಅವರನ್ನು ಭೇಟಿ ಮಾಡಿ ವಿಯಟ್ನಾಂ, ಪಶ್ಚಿಮ ಏಷ್ಯ ಮತ್ತಿತರ ಅನೇಕ ವಿಷಯಗಳನ್ನು ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT