ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 11

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ‘ಅಪೂರ್ ಸಂಸಾರ್’ ಚಲನಚಿತ್ರದ ನಿರ್ದೇಶಕರು ಯಾರು?
ಅ) ಎಂ. ಎಸ್. ಸತ್ಯು ಆ) ಋತ್ವಿಕ್ ಘಟಕ್
ಇ) ಸತ್ಯಜಿತ್ ರೇ ಈ) ಗೋವಿಂದ್ ನಿಹಲಾನಿ

2. ಜಯಕಾಂತನ್ ಯಾವ ಭಾಷೆಯ ಪ್ರಸಿದ್ಧ ಕಥೆಗಾರರು?

ಅ) ಮಲಯಾಳಂ ಆ) ತಮಿಳು
ಇ) ತೆಲುಗು ಈ) ಒರಿಯಾ

3. ‘ಸ್ಟ್ರಾಟ್ ಫರ್ಡ್ ಅಪಾನ್ ಅವಾನ್’ನಲ್ಲಿ ಜನಿಸಿದ ಕವಿ, ನಾಟಕಕಾರ ಯಾರು?

ಅ) ಟಾಲ್‌ಸ್ಟಾಯ್‌ ಆ) ಶೆಲ್ಲಿ
ಇ) ಶೇಕ್ಸ್‌ಪಿಯರ್‌ ಈ) ಕೀಟ್ಸ್

4. ಕಪ್ಪೆಯು ಇವುಗಳಲ್ಲಿ ಯಾವ ಗುಂಪಿಗೆ ಸೇರಿದ ಪ್ರಾಣಿ?

ಅ) ಕಂಟಕ ಚರ್ಮಿ ಆ) ಉಭಯವಾಸಿ
ಇ) ಜಲಚರ ಈ) ವಲಯವಂತ

5. ಸದಾನಂದ ಅವರು ಸಂಪಾದಿಸುತ್ತಿದ್ದ ಆಂಗ್ಲಪತ್ರಿಕೆ ಯಾವುದು?

ಅ) ಫ್ರೀ ಪ್ರೆಸ್ ಜರ್ನಲ್ ಆ) ಹಿಂದು
ಇ) ಭವನ್ಸ್ ಜರ್ನಲ್ ಈ) ಇಂಡಿಯನ್ ಎಕ್ಸ್‌ಪ್ರೆಸ್‌

6. ಉಲ್ಲಾಸ ಕಾರಂತರು ಯಾವ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ?

ಅ) ಜನಗಣತಿ ಆ) ಹುಲಿಗಣತಿ
ಇ) ಪಶುಪಾಲನೆ ಈ) ಪಕ್ಷಿಗಣತಿ

7. ಪ್ರಸ್ತುತ ಪಂಜಾಬ್ ರಾಜ್ಯದಲ್ಲಿ ಯಾವ ಪಕ್ಷ ಆಡಳಿತದಲ್ಲಿದೆ?

ಅ) ಅಕಾಲಿದಳ ಆ) ಬಿಜೆಪಿ
ಇ) ಪಂಜಾಬ್‍ಪಾರ್ಟಿ ಈ) ಕಾಂಗ್ರೆಸ್

8. ’ಹಿಜಾಬ್ ‘ ಕಾದಂಬರಿಯನ್ನು ಬರೆದವರು ಯಾರು?

ಅ) ಗುರುಪ್ರಸಾದ್ ಕಾಗಿನೆಲೆ ಆ) ವಸುಧೇಂದ್ರ
ಇ) ಎಂ. ಆರ್. ದತ್ತಾತ್ರಿ ಈ) ಸುಮಂಗಲಾ

9. ಭಾರತೀಯ ವಿದ್ಯಾಭವನವನ್ನು ಸ್ಥಾಪಿಸಿದವರು ಯಾರು?

ಅ) ರಾಜಾಜಿ ಆ) ಕೆ. ಎಂ. ಮುನ್ಷಿ
ಇ) ಕೃಪಲಾನಿ ಈ) ಧರ್ಮಪಾಲ್

10. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಅಂಕಿತವೇನು?

ಅ) ಗುರುವಾಣಿ ಆ) ಗುರುಭಕ್ತ
ಇ) ಗುರುಪ್ರಿಯ ಈ) ಗುರುಗುಹ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:
1. ಇ) ಸಂಪತ್ ರಾಜ್ 2. ಈ) ಧ್ಯಾನ್ ಚಂದ್ 3. ಅ) ವೀರಪ್ಪ ಮೊಯ್ಲಿ 4. ಅ) ಬಾರ್ಸಿಲೋನ
5. ಈ) ಅನಿಮೋ ಮೀಟರ್  6. ಇ) ದೇವವ್ರತ 7. ಆ) ಆಂಧ್ರ 8. ಅ) ಫಿಲಿಫೈನ್ಸ್ 9. ಅ) ರಿಚರ್ಡ್ ಪಾರ್ಕರ್ 10. ಈ) ಫುಟ್‌ಬಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT