ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಒಪ್ಪಿಕೊಂಡು ತೆರಿಗೆ ಪಾವತಿಗೆ ಮುಂದಾದ ಕಂಪನಿ

₹1ಕೋಟಿ ಹಣ, 101 ಕೆ.ಜಿ ಚಿನ್ನಾಭರಣ ವಶ
Last Updated 17 ಜುಲೈ 2018, 20:12 IST
ಅಕ್ಷರ ಗಾತ್ರ

ಚೆನ್ನೈ/ನವದೆಹಲಿ : ಚೆನ್ನೈ ಸೇರಿದಂತೆ ತಮಿಳುನಾಡಿನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ವೇಳೆ ಅ‍ಪಾರ ‍ಪ‍್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ.ಈ ಬೆಳವಣಿಗೆಯ ಬೆನ್ನಲ್ಲೇ, ಶೋಧಕ್ಕೆ ಒಳಗಾದ ಎಸ್‌ಪಿಕೆ ಕಂಪನಿಯು ತೆರಿಗೆ ವಂಚನೆಯನ್ನು ಒಪ್ಪಿಕೊಂಡಿದೆ. ದಂಡ ಸಮೇತ ತೆರಿಗೆ ಪಾವತಿಸುವುದಾಗಿ ಹೇಳಿದೆ ಎಂದು ತಿಳಿದು ಬಂದಿದೆ.

ಚೆನ್ನೈನ ಹೆದ್ದಾರಿ ಮತ್ತು ರಸ್ತೆ ನಿರ್ಮಾಣ ಸಂಸ್ಥೆ ಎಸ್‌ಪಿಕೆ ಕಂಪನಿಗೆ ಸೇರಿದ 20 ಕಚೇರಿಗಳಿಂದ ಇಲ್ಲಿಯ ವರೆಗೆ ₹163 ಕೋಟಿ ನಗದು ಮತ್ತು 101 ಕೆ.ಜಿ ಚಿನ್ನಾಭರಣಗಳನ್ನು ಅಧಿಕಾರಿ
ಗಳು ವಶಪಡಿಸಿಕೊಂಡಿದ್ದಾರೆ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಸೋಮವಾರದಿಂದ ಆರಂಭವಾಗಿರುವ ಶೋಧ ಇನ್ನೂ ಮುಂದುವರೆದಿದೆ. ಇದುವರೆಗಿನ ಐ. ಟಿ ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ಅತ್ಯಂತ ದೊಡ್ಡ ಮೊತ್ತ ಇದಾಗಿರಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
***

* ದಂಡ ಸಮೇತ ತೆರಿಗೆ ಪಾವತಿಗೆ ಮುಂದಾದ ಕಂಪನಿ

* ಎರಡು ಐಷಾರಾಮಿ ಕಾರುಗಳಲ್ಲಿ ₹61 ಕೋಟಿ ಪತ್ತೆ

* ಹೊಟೆಲ್‌, ಗಣಿಗಾರಿಕೆಯಲ್ಲೂ ತೊಡಗಿರುವ ಎಸ್‌ಪಿಕೆ ಕಂಪನಿ

* ಚೆನ್ನೈನಲ್ಲಿ 17, ಅರುಪ್ಪುಕೊಟೈನ ನಾಲ್ಕು ಮತ್ತು ಕಟಪಾಡಿಯ ಒಂದು ಕಚೇರಿಯಲ್ಲಿ ಮುಂದುವರೆದ ಶೋಧ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT