ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕಕ್ಕೆ ಪ್ರತಿಮೆ ಧ್ವಂಸ ರಾಜಕೀಯ

ಲೆನಿನ್‌, ಪೆರಿಯಾರ್‌ ನಂತರ ಅಂಬೇಡ್ಕರ್‌, ಮುಖರ್ಜಿ ಸರದಿ
Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಮ್ಯುನಿಸ್ಟ್ ನಾಯಕ ಲೆನಿನ್‌ ಮತ್ತು ಸಮಾಜ ಸುಧಾರಕ ಪೆರಿಯಾರ್‌ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಬುಧವಾರ ಮೀರಠ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಕೋಲ್ಕತ್ತಾದಲ್ಲಿ ಜನಸಂಘ ಸ್ಥಾಪಕ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರ ಪುತ್ಥಳಿಗಳನ್ನು ನೆಲಸಮಗೊಳಿಸಲಾಗಿದೆ.

ಇದರೊಂದಿಗೆ ಮಹಾ ಪುರುಷರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಎಡ ಮತ್ತು ಬಲ ಪಂಥೀಯ ಕಾರ್ಯಕರ್ತರ ರಾಜಕೀಯ ಸಂಘರ್ಷ ತಾರಕಕ್ಕೇರಿದೆ.
ಈ ನಡುವೆ ತಮಿಳುನಾಡಿನ ಕೊಯಮತ್ತೂರು ಬಿಜೆಪಿ ಕಚೇರಿಯ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಲಾಗಿದೆ. ಈ ಎಲ್ಲ ಬೆಳವಣಿಗೆ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪರಿಸ್ಥಿತಿ ಶಮನಗೊಳಿಸಲು ಮುಂದಾಗಿವೆ.

ಪ್ರಧಾನಿ ಖಂಡನೆ: ಪ್ರತಿಮೆ ಭಗ್ನಗೊಳಿಸಿದ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT