ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾದಲ್ಲಿ ಗೂಂಡಾಗಿರಿ ಸೃಷ್ಟಿ: ಕುಮಾರಸ್ವಾಮಿ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೈಸೂರು: ‘ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‌ಗೂಂಡಾಗಿರಿಯ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದ ಜನರು ಮತಹಾಕಲು ಆಚೆ ಬರುವುದಕ್ಕೆ ಭಯಪಡುವಂತಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ವರುಣಾ ಕ್ಷೇತ್ರದ ಎಸ್‌. ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಕುಮಾರ‍ಪರ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತದಾನ ಪ್ರತಿಯೊಬ್ಬರ ಹಕ್ಕು; ಧೈರ್ಯವಾಗಿ ಬಂದು ಓಟು ಮಾಡಿ. ಯಾರಿಗೂ ಹೆದರಿ ಕೂರುವ ಅಗತ್ಯವಿಲ್ಲ. ನಾನಿದ್ದೇನೆ ಭಯಪಡಬೇಡಿ’ ಎಂದು ಭರವಸೆ ನೀಡಿದರು.

‘ಅನೈತಿಕ ಚುನಾವಣೆಗಳನ್ನು ನಡೆಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನು ಹಣಕೊಟ್ಟು ಕೊಂಡುಕೊಂಡಿದ್ದರು. ಅವರ ಬಳಿ ಕಳ್ಳ ಮಾರ್ಗದಲ್ಲಿ ಬಂದಿರುವ ಹಣ ಸಾಕಷ್ಟಿದೆ. ಈಗಲೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ; ಕೇರಳಕ್ಕೆ ಮರಳು ರವಾನೆಯಾಗುತ್ತಿದೆ. ಆ ಹಣದಿಂದ ಜನರನ್ನು ಕೊಂಡುಕೊಳ್ಳುವ ಭ್ರಮೆಯಲ್ಲಿದ್ದಾರೆ. ಅದೇನು ಅವರ ದುಡ್ಡಲ್ಲ; ನಿಮ್ಮ ಹಣವೇ. ಹಣ ತೆಗೆದುಕೊಳ್ಳಿ ತಪ್ಪೇನಿಲ್ಲ. ಮತದಾನ ಮಾಡುವಾಗ ಜಾಗ್ರತೆಯಿರಲಿ’ ಎಂದರು.

‘ಮರಳು ದಂಧೆ ಬೆಂಬಲಿಸದವರನ್ನು ಅವರು ಉಳಿಸುವುದೂ ಇಲ್ಲ; ಬೆಳೆಸುವುದೂ ಇಲ್ಲ. ಇದೇ ಕಾರಣಕ್ಕೆ ಶ್ರೀನಿವಾಸ ಪ್ರಸಾದ್ ಅವರನ್ನು
ಮಂತ್ರಿಮಂಡಲದಿಂದ ಕೈಬಿಟ್ಟರು. ಇಂಥವರ ಜತೆಗೆ ನಾವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT