ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ : ನನ್ನ ಬಾಳಸಂಗಾತಿ

Last Updated 10 ಮಾರ್ಚ್ 2018, 15:38 IST
ಅಕ್ಷರ ಗಾತ್ರ

ನನ್ನ ಜೀವನದಲಿ ೪೦ ವಸಂತಗಳು ಜೊತೆ ಜೊತೆಯಾಗಿ ನಡೆದು, ಸಖಳಾಗಿ, ಸಹಧರ್ಮಿಣಿಯಾಗಿ, ಸುಖ ದುಃಖಗಳಲ್ಲಿ ಬೆನ್ನೆಲುಬಾಗಿ ನಿಂತಿರುವ,   ನನ್ನ ಬದುಕಿಗೆ  ಸ್ಫೂರ್ತಿನೀಡಿದ, ನೀಡುತ್ತಿರುವ ಮಹಿಳೆ, ನನ್ನ ಮಡದಿ  ಎಂದರೆ ಅತಿಶಯೋಕ್ತಿಯಲ್ಲ. ಮಧ್ಯಮ ಕುಟುಂಬದ, ಸುಸಂಸ್ಕೃತ (ತೀ.ನಂ.ಶ್ರೀ. ಅವರ ಅಣ್ಣನ ಮೊಮ್ಮಗಳು),ವಿದ್ಯಾವಂತ ಹೆಣ್ಣು. ನನ್ನ ಕೈ ಹಿಡಿದು, ಸಂಸಾರದ ದೋಣಿಯನ್ನು ಏರುಪೇರುಗಳೆಂಬ ಚಕ್ರವ್ಯೂಹದಿಂದ ಪಾರುಮಾಡಿಸಿ, ಶಾಂತ ಗೃಹ ವಾತಾವರಣ ನಿರ್ಮಾಣ ಮಾಡಿದ  ಗುಣವಂತೆ.
ನನ್ನ ಮೇಲೆ ಅಪಾರ ಗೌರವ ಮತ್ತು ಪ್ರೀತಿ.  ತನ್ನ ಕೆಲಸದ ಜೊತೆ, ಮಕ್ಕಳ ಅಭಿವೃದ್ಧಿ ಮತ್ತು ಅವರ ಪಾಲನೆ ಯಲ್ಲಿ ನಿರತಳಾಗಿದ್ದಳು.  ಹಿರಿಯರ ಮತ್ತು ಕಿರಿಯರ ಮನದಲಿ ಸದಾ ರಾರಾಜಿಸುವ ಭಾವನ್ಮಾತಕ ಹೆಣ್ಣು.
ಸಮಾನಭಾವ, ಸಧಭಿರುಚಿ, ನಿರಾಳ ಹೃದಯದ ಅವಳ ಗುಣಗಳು, ನನ್ನ ಬದುಕನ್ನು ಪ್ರೇರೇಪಿಸಿತು.
ಎಲ್ಲಾ ಕೆಲಸಗಳನ್ನು ಕರಾರುವಕ್ಕಾಗಿ ಮಾಡುವ ಗುಣ; ಮೆಲುಧ್ವನಿ, ಪರಿಶುದ್ಧತೆ, ಅನ್ಯೋನತೆ, ಸಾಮರಸ್ಯ ಮುಂತಾದ  ಆಕೆಯ ಗುಣ ಮತ್ತು  ನಡತೆಗಳು, ನನಗೆ  ಜೀವನದಲ್ಲಿ  ಒಳ್ಳೆಯ ಗುಣಗಳನ್ನು  ಅಳವಡಿಸಲು ಹೆಚ್ಚು ಸ್ಫೂರ್ತಿನೀಡಿತು.
ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಅವಳ ಧೈರ್ಯ, ಏಕಾಗ್ರತೆ ಮೆಚ್ಚುವಂತದು. ಸಂಗೀತ ಅಭ್ಯಾಸ, ಸಂಸ್ಕೃತ ಭಾಷೆಯಲ್ಲಿ  ಪರೀಕ್ಷೆ, ಇತ್ಯಾದಿ, ಅವಳು ಜೀವನವನ್ನು ನೋಡುವ ರೀತಿ , ನನಗೆ ತುಂಬಾ ಇಷ್ಟ.
ಅವಳಿಂದ ಪ್ರೇರಿತನಾಗಿ, ಕಾವ್ಯಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದೇನೆ.
ಬಾಳೆಂದಾಗ ಹುಸಿಮುನಿಸು, ಹುಸಿಕಾಳಗ ಇವೆಲ್ಲಾ ಇದ್ದರೂ, ಇದು ವಿಷಯ ಆಧಾರಿತ ವಾದರಿಂದ, ನನಗೆ ತಪ್ಪು ಒಪ್ಪುಗಳ ತಿಳುವಳಿಕೆಗೂ ಅನುಕೂಲವಾಯಿತು. ಸರಸ ಸಾಮರಸ್ಯ ನಂಬಿಕೆ, ನಮ್ಮ ಸಂಸಾರದ ಆಧಾರ.

-ಎನ್.ಶಂಕರರಾವ್.
ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT