ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಜೀವನದ ಸ್ಫೂರ್ತಿ ವಿಜಯಶ್ರೀ ಹಿರೇಮಠ

Last Updated 10 ಮಾರ್ಚ್ 2018, 17:18 IST
ಅಕ್ಷರ ಗಾತ್ರ

ಹೆಸರಿನಲ್ಲಿಯೇ ( ನಾಮಧೇಯದಲ್ಲಿಯೇ) ವಿಜಯಶ್ರೀ ಎಂದು ವಿಜಯದ ಮಾಲೆಯನ್ನು ಹೊತ್ತ ಅವರ ಜೀವನದ ಬಗ್ಗೆ ಕೇಳಬೇಕೆ ?
ಹೌದು. ಅವರು ಹೆಸರಿಗೆ ತಕ್ಕಂತೆ ವಿಜಯಶ್ರೀನೆ. ಎಲ್ಲ ವಿಷಯದಲ್ಲೂ ಪಾರಂಗತರೂ, ಪ್ರಾವೀಣ್ಯರೂ,  ಡಿಗ್ರಿ ವ್ಯಾಸಂಗ ಮಾಡುತ್ತಿರುವ ನನಗೆ ಅವರ ಕನ್ನಡ ತರಗತಿ ಎಂದರೇ ಎಲ್ಲಿಲ್ಲದ ಖುಷಿ, ನನಗಷ್ಟೇ ಅಲ್ಲ ನಮ್ಮ ತರಗತಿಯಲ್ಲಿರುವ ಎಲ್ಲರಿಗೂ ಇಷ್ಟವೇ.

ವಾರಕ್ಕೊಮ್ಮೆ ಬರುವ ಅವರ ಒಂದು ತರಗತಿ ನಮ್ಮೆಲ್ಲರಿಗೂ ದೀಪಾವಳಿ ಹಬ್ಬಕ್ಕೆ ಮಾಡುವ ಹೋಳಿಗೆಯ ಸಿಹಿಯನ್ನು ಸವಿದಷ್ಟೇ ಖುಷಿ ಆಗುತ್ತಿತ್ತು.
ಇದ್ಯಾಕೆ ಇದನ್ನೆಲ್ಲಾ ಹೇಳುತ್ತಿದ್ದೆನೆ ಎಂದು ಕೊಂಡಿರಾ,  ಇಂದಿನ ಯುವ ಪೀಳಿಗೆ ಡಿಗ್ರಿಗೆ ಬಂದ ಕೂಡಲೇ ಹೆಚ್ಚಾಗಿ ತರಗತಿಗಳನ್ನು ನಿರ್ಲಕ್ಷಿಸುವೆ, ಅದರಲ್ಲೂ ಕನ್ನಡವೆಂದರೆ ಕನ್ನಡ ತರಗತಿ  ಎಂದರೇ ಮೂಗು ಮೂರಿಯುತ್ತಾ, ಅದೇನ್ ಮಹಾನ್ ಕನ್ನಡ ಬೀಡು ಓದಿ ತಿಳಿದುಕೊಂಡರೆ ಆಯಿತೆಂದು ಹೇಳುವವರ ಸಂಖ್ಯೆಯೇ ಹೆಚ್ಚು ಅಂತಹುದರಲ್ಲಿ, ನಮ್ಮ ಕಾಲೇಜಿನಲ್ಲಿ ವಿಜಯಶ್ರೀ ಮ್ಯಾಡಮ್ ಅವರ ಕನ್ನಡ ತರಗತಿ ಇತ್ತೆಂದರೆ ಸಾಕು ಒಂದು ಬೆಂಚು ಕೊಡ ಖಾಲಿ ಇರುವುದಿಲ್ಲ. ಆ ರೀತಿಯಾಗಿ ವಿದ್ಯಾರ್ಥಿಗಳಿಗೆ ತಿಳಿಯುವ ಹಾಗೇ, ಇಷ್ಟವಾಗುವ ಹಾಗೇ, ಹಾಸ್ಯಮಯವಾಗಿ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ನಿದ್ದೆ ಬರದ ಹಾಗೇ, ನಿದ್ದೆ ಬಂದರೂ ಕೂಡ ಹಾರಿ ಹೋಗುವ ಹಾಗೇ ಹೇಳುತ್ತಾರೆ.

ಆದರೆ ಇದೆಲ್ಲಕ್ಕಿಂತಲೂ ಹೆಚ್ಚಿನದಾಗಿ ಕನ್ನಡ ಭಾಷೆಯ ಮೇಲೆ ಹಾಗೂ ಅವರ ಕೆಲಸದ ಮೇಲೆ ಅವರಿಗಿರುವ ಅಭಿಮಾನ , ಶ್ರದ್ಧೆ, ಭಕ್ತಿ, ವಿಶ್ವಾಸ, ಎಲ್ಲದಕ್ಕಿಂತಲೂ ಮಿಗಿಲಾದುದೂ ಅವರನ್ನು ನೋಡಿಯೇ ನಾನು ಕೂಡ ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು, ಹಾಗೂ ಓದಿನ ಕಡೆಗೆ ಹೆಚ್ಚಿನ ಗಮನ, ಶ್ರದ್ಧೆ, ಭಕ್ತಿ, ವಿಶ್ವಾಸ, ಮೂಡಿಸಿಕೊಳ್ಳಲು ಸಾಧ್ಯವಾಯಿತು, ನನ್ನ ಜೀವನದ ಸ್ಫೂರ್ತಿಯಾಗಿ ಗುರುವಿನ ಸ್ಥಾನದಲ್ಲಿ ಸದಾ ನನ್ನ ಮನದಲ್ಲಿ ಅಚ್ಚ ಅಳಿಯದ ನೆನಪಾಗಿ ಹಚ್ಚ ಹಸಿರಾಗಿ ಉಳಿಯುವವರೆ.


-ಅಶ್ವಿನಿ ಕ. ದುರ್ಗಣ್ಣವರ
ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT