ತನಿಖೆೆಗೆ ನ್ಯಾಯಾಲಯದ ಆದೇಶ

ವಕೀಲರ ಕೊಲೆಗೆ ಸುಪಾರಿ

ಹೈಕೋರ್ಟ್‌ನ ಹಿರಿಯ ವಕೀಲ ಮೊಹಮ್ಮದ್ ಅತೇರ್‌ (65) ಕೊಲೆಗೆ ಸುಪಾರಿ ನೀಡಿರುವ ಸಂಗತಿ ಬಯಲಾಗಿದ್ದು, ಈ ಸಂಬಂಧ ಅಶೋಕನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು: ಹೈಕೋರ್ಟ್‌ನ ಹಿರಿಯ ವಕೀಲ ಮೊಹಮ್ಮದ್ ಅತೇರ್‌ (65) ಕೊಲೆಗೆ ಸುಪಾರಿ ನೀಡಿರುವ ಸಂಗತಿ ಬಯಲಾಗಿದ್ದು, ಈ ಸಂಬಂಧ ಅಶೋಕನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಿಚ್ಮಂಡ್ ಟೌನ್‌ನಲ್ಲಿ ವಾಸವಿರುವ ಅತೇರ್‌ ಅವರ ಮೊಬೈಲ್‌ಗೆ ಮಾ. 4ರಂದು ರಾತ್ರಿ 8.50 ಗಂಟೆ ಸುಮಾರಿಗೆ 802*****79 ಸಂಖ್ಯೆಯಿಂದ ಕರೆ ಮಾಡಿದ್ದ ಅಪರಿಚಿತನೊಬ್ಬ, ‘ನಿನ್ನನ್ನು ಕೊಲೆ ಮಾಡಲು ಸುಪಾರಿ ಪಡೆದಿದ್ದೇನೆ. ಕೋಲಾರ ಅಥವಾ ಬೆಂಗಳೂರಿನ ರಸ್ತೆಯಲ್ಲೇ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಅಶೋಕನಗರ ಠಾಣೆಗೆ ಮಾ. 5ರಂದು ಅತೇರ್‌ ದೂರು ನೀಡಿದ್ದರು. ಇದೊಂದು ಸಾಮಾನ್ಯ ಪ್ರಕರಣವೆಂದು ತಿಳಿದಿದ್ದ ಪೊಲೀಸರು, ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಂಡಿದ್ದರು. ಅದನ್ನೇ ನ್ಯಾಯಾಲಯಕ್ಕೆ ನೀಡಿದ್ದರು. ‘ಪ್ರಕರಣವು ಗಂಭೀರವಾಗಿದ್ದು, ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಅದರನ್ವಯ ಪೊಲೀಸರು, ಜೀವ ಬೆದರಿಕೆ (ಐಪಿಸಿ 507) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘ಸುಮಾರು 40 ವರ್ಷಗಳಿಂದ ಅತೇರ್‌‌ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಸರ್ಕಾರದ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ಈಗ ಕೆಲ ಖಾಸಗಿ ವ್ಯಕ್ತಿಗಳ ಪ್ರಕರಣಗಳಲ್ಲಷ್ಟೇ ವಾದ ಮಂಡಿಸುತ್ತಿದ್ದಾರೆ. ಆ ಪ್ರಕರಣಗಳಲ್ಲಿ ಅವರು ವಾದ ಮಂಡಿಸಬಾರದು ಎಂಬ ಕಾರಣಕ್ಕೆ ಯಾರೋ ಈ ರೀತಿ ಬೆದರಿಕೆ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆಗಾಗ ಅತೇರ್‌ ಕೋಲಾರಕ್ಕೆ ಹೋಗಿ ಬರುತ್ತಾರೆ. ಅದನ್ನು ತಿಳಿದುಕೊಂಡ ವ್ಯಕ್ತಿಗಳೇ, ಕೋಲಾರ ರಸ್ತೆಯಲ್ಲೇ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಮೊಬೈಲ್‌ ಸಂಖ್ಯೆ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚುಟುಕು

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ...

23 Mar, 2018

ಬೆಂಗಳೂರು
ಭಾಷಾ ಅಲ್ಪಸಂಖ್ಯಾತ ಕೋಟಾ: ಪರೀಕ್ಷೆಗೆ ಅನುಮತಿ

‘ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕರ್ನಾಟಕದಲ್ಲಿ ಓದಿದ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದಡಿ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಎದುರಿಸಲು ಅನುಮತಿ ನೀಡಬಹುದು’...

23 Mar, 2018

ಮೂರೂವರೆ ವರ್ಷದ ಬಾಲಕಿಯ ಕೈ– ಕಾಲು ಕಟ್ಟಿ ಅತ್ಯಾಚಾರ
ಪೋಕ್ಸೊ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಮೂರೂವರೆ ವರ್ಷದ ಬಾಲಕಿಯ ಕೈ–ಕಾಲು ಕಟ್ಟಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ಎಸ್‌. ಸಂಜಯ್‌ಗೆ (26), 10 ವರ್ಷಗಳ ಕಠಿಣ ಜೈಲು ಶಿಕ್ಷೆ...

23 Mar, 2018

ಬೆಂಗಳೂರು
ವೈದ್ಯಕೀಯ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹ 20 ಲಕ್ಷ ವಂಚನೆ

ತಮ್ಮ ಮಗಳಿಗೆ ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ತಿರುಪತಿಯ ಉದ್ಯಮಿಯೊಬ್ಬರಿಗೆ ₹ 20 ಲಕ್ಷ ವಂಚಿಸಿರುವ ಆರೋಪದಡಿ ವಿಜಯ್ ಎಸ್‌.ರಾಮ್...

23 Mar, 2018

ದಾಬಸ್‌ಪೇಟೆ
ಬೈಕ್‌ಗೆ ಕ್ಯಾಂಟರ್‌ ಡಿಕ್ಕಿ ಇಬ್ಬರ ಸಾವು

ನೆಲಮಂಗಲ ತಾಲ್ಲೂಕು ನಿಡವಂದ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 298ರಲ್ಲಿ ಗುರುವಾರ ಬೈಕ್‌ಗೆ ಕ್ಯಾಂಟರ್‌ ಗುದ್ದಿದ ಪರಿಣಾಮ ದಾಬಸ್‌ಪೇಟೆಯ ಜಗದೀಶ್ ಮತ್ತು ಹೊನ್ನೇನಹಳ್ಳಿ ತಾಂಡ್ಯದ...

23 Mar, 2018