ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಸುವುದು ಹೇಗೆ?

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡುವಾಗ ಬ್ಯಾಟರಿ ಬಾಳಿಕೆ ಎಷ್ಟು ಹೊತ್ತು ಇರುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಕೈಯಲ್ಲಿರುವ ಫೋನ್ ಯಾವುದೇ ಕಂಪನಿಯದ್ದೇ ಆಗಿರಲಿ, ಬ್ಯಾಟರಿ ಮುಗಿದರೆ ಯಾವುದಕ್ಕೂ ಪ್ರಯೋಜನವಿಲ್ಲದಾಗಿ ಬಿಡುತ್ತದೆ. ಜತೆಗೆ ಪವರ್ ಬ್ಯಾಂಕ್ ಇದ್ದರೆ ಬಚಾವ್! ಮನೆಯಿಂದ ಹೊರಡುವಾಗ ಫುಲ್ ಚಾರ್ಜ್ ಮಾಡಿ ಬಂದಿದ್ದೆ, ಸ್ವಲ್ಪ ಹೊತ್ತಾದ ಕೂಡಲೇ 50 ಪರ್ಸೆಂಟ್‍ಗೆ ಬಂದುಬಿಟ್ಟಿದೆ ಎಂದು ಒಂದಲ್ಲ ಒಂದು ರೀತಿಯಲ್ಲಿ ಗಾಬರಿಗೊಳಗಾದವರೇ ನಾವೆಲ್ಲಾ. ಅಂದಹಾಗೆ ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವಂತೆ ಮಾಡಲು, ಚಾರ್ಜ್ ಉಳಿಕೆಗೆ ಕೆಲವು ಉಪಾಯಗಳು ಇಲ್ಲಿವೆ.

ವೈಬ್ರೇಷನ್ ಆಫ್ ಮಾಡಿ: ಮೊಬೈಲ್ ವೈಬ್ರೇಷನ್ ಮೋಡ್‍ನಲ್ಲಿದ್ದರೆ ಹೆಚ್ಚು ಬ್ಯಾಟರಿ ವಿನಿಯೋಗವಾಗುತ್ತದೆ. ಹಾಗಾಗಿ ಅತ್ಯಗತ್ಯವೆಂದಾಗ ಮಾತ್ರ ವೈಬ್ರೇಷನ್‍ನಲ್ಲಿಟ್ಟರೆ ಸಾಕು. ವೈಬ್ರೇಟ್ ಮಾಡಿ ರಿಂಗ್ ಆಗುವ ರೀತಿ ಇಟ್ಟುಕೊಳ್ಳುವುದು ಬೇಡವೇ ಬೇಡ. ವೈಬ್ರೇಷನ್ ಎಷ್ಟು ಜೋರಾಗಿ ಇರುತ್ತದೋ ಅಷ್ಟೇ ಹೆಚ್ಚು ಬ್ಯಾಟರಿ ವಿನಿಯೋಗವಾಗುತ್ತದೆ. ಹಾಗಾಗಿ ವೈಬ್ರೇಷನ್ ಇದ್ದರೂ ಕಡಿಮೆ ಶಬ್ದವಾಗುವಂತೆ ಇಡಿ.

ಸ್ಕ್ರೀನ್ ಟೈಮ್ ಔಟ್ : ಫೋನ್ ಯಾವುದೇ ಆಗಿರಲಿ, ಸ್ಕ್ರೀನ್ ಟೈಮ್ ಔಟ್ ಸೆಟ್ ಮಾಡುವಾಗ ಅತೀ ಕಡಿಮೆ ಅವಧಿಯ ಟೈಮ್ ಔಟ್ ಸೆಟ್ ಮಾಡಿ. ಬ್ಲೂಟೂತ್, ವೈಫೈ ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ ಅಗತ್ಯವಿಲ್ಲದೇ ಇರುವ ಸಮಯಗಳಲ್ಲಿ ವೈಫೈ ಆಫ್ ಮಾಡಿ. ಬ್ಲೂಟೂತ್ ಉಪಯೋಗಿಸುವುದಾದರೆ ಅಗತ್ಯ ಮುಗಿದ ಕೂಡಲೇ ಆಫ್ ಮಾಡಿ.

ಬ್ಯಾಕ್‍ ಗ್ರೌಂಡ್ ಆ್ಯಪ್ ಬೇಡ: ಒಂದಕ್ಕಿಂತ ಹೆಚ್ಚು ಆ್ಯಪ್‌ಗಳನ್ನು ಬಳಸುತ್ತಿರುವಾಗ ಬ್ಯಾಟರಿಯೂ ಹೆಚ್ಚು ಖರ್ಚಾಗುತ್ತದೆ. ಬ್ಯಾಕ್ ಗ್ರೌಂಡ್ ಆ್ಯಪ್‌ಗಳ ಬಳಕೆ ಬೇಡವೇ ಬೇಡ.

ಲೊಕೇಷನ್ ಸರ್ವೀಸ್ ಬಳಕೆ ಬೇಡ: ಲೊಕೇಷನ್ ಸರ್ವೀಸ್ ಬಳಕೆ ಮಾಡದಿರುವುದು ಉತ್ತಮ, ಆ್ಯಂಡ್ರಾಯ್ಡ್ ಫೋನ್‍ಗಳಲ್ಲಿ ಪವರ್ ಪರಿಮಾಣವನ್ನು ಸೆಟ್ ಮಾಡುವ ಆಯ್ಕೆಯೂ ಇದೆ. ಬ್ಯಾಟರಿ ಸೇವಿಂಗ್ ಮೋಡ್‍ನಲ್ಲಿ ಲೊಕೇಷನ್ ಸರ್ವೀಸ್ ಬಳಸಿದರೆ ಒಳ್ಳೆಯದು.

ನೋಟಿಫಿಕೇಷನ್‍ಗಳಿಗೆ No ಹೇಳಿ: ಮೆಸೇಜ್‍ಗಳು, ಇನ್ನಿತರ ಆ್ಯಪ್ ನೋಟಿಫಿಕೇಷನ್‍ಗಳನ್ನು ಕಡಿಮೆ ಮಾಡಿ. ಅತ್ಯಗತ್ಯವೆನಿಸಿದ ಇಮೇಲ್ ನೋಟಿಫಿಕೇಷನ್ ಮಾತ್ರ ಎನೇಬಲ್ ಮಾಡಿಟ್ಟರೆ ಸಾಕು.

ಪವರ್ ಸೇವಿಂಗ್ ಮೋಡ್: ಪವರ್ ಸೇವಿಂಗ್ ಮೋಡ್ ಎನೇಬಲ್ ಮಾಡಿದರೆ ಬ್ಯಾಟರಿ ಹೆಚ್ಚು ಖರ್ಚಾಗಲ್ಲ.

ವೈರ್‌ಲೆಸ್ ಚಾರ್ಜಿಂಗ್ ಬೇಡ ವೈರ್‌ಲೆಸ್ ಚಾರ್ಜರ್ ಬಳಸುವುದು ಸುಲಭ ಆಗಿದ್ದರೂ ಫೋನ್ ಬೇಗನೆ ಬಿಸಿಯಾಗುತ್ತದೆ. ಇದು ಬ್ಯಾಟರಿಗೂ ಹಾನಿಯುಂಟು ಮಾಡುತ್ತದೆ.

ಸಾಮಾನ್ಯ ಉಷ್ಣಾಂಶವಿರಲಿ: ಅಧಿಕ ಉಷ್ಣತೆ ಅಥವಾ ಅಧಿಕ ತಂಪು ವಾತಾವರಣ ಲೀಥಿಯಂ ಅಯೋನ್ ಬ್ಯಾಟರಿಗಳಿಗೆ ಒಳ್ಳೆಯದಲ್ಲ, ಹಾಗಾಗಿ ಸಾಮಾನ್ಯ ಉಷ್ಣಾಂಶವಿರುವ ವಾತಾವರಣದಲ್ಲಿರಲಿ ನಿಮ್ಮ ಫೋನ್.

ಬ್ಯಾಟರಿ ಪೂರ್ತಿ ಖಾಲಿಯಾಗಲು ಬಿಡಬೇಡಿ: ನಿಮ್ಮ ಫೋನ್‍ನಲ್ಲಿ ಬ್ಯಾಟರಿ ಪೂರ್ತಿ ಖಾಲಿಯಾಗಲು ಬಿಡಬೇಡಿ. ಬ್ಯಾಟರಿ ಕಡಿಮೆ ಇದೆ ಎಂಬ ನೋಟಿಫಿಕೇಶನ್ ಬಂದ ಕೂಡಲೇ ಫೋನ್ ಚಾರ್ಜ್ ಮಾಡಿ ಇಲ್ಲವೇ ಸ್ವಿಚ್ ಆಫ್ ಮಾಡಿ. ಫೋನ್ ಸ್ವಿಚ್ ಆಫ್ ಮಾಡಿ ಚಾರ್ಜ್‌ಗಿರಿಸಿದರೆ ಬೇಗನೆ ಚಾರ್ಜ್ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT