ಲಿಂಗೈಕ್ಯ ಬಸವಲಿಂಗಯ್ಯ ತಾತನವರ ಆರಾಧನಾ ಮಹೋತ್ಸವದಲ್ಲಿ ರಂಭಾಪುರಿ ಶ್ರೀ ಅಭಿಮತ

ಮಠಗಳ ಸಾಮಾಜಿಕ ಚಿಂತನೆ ಬಡವರಿಗೆ ಬೆಳಕು

‘ಮಠಗಳು ಮಾನವ ಧರ್ಮದ ಏಳಿಗೆಗಾಗಿ ಶ್ರಮಿಸುತ್ತಿದ್ದು, ಇಂದಿನ ಮಠಗಳ ಸಾಮಾಜಿಕ ಚಿಂತನೆಗಳು ಬಡವರ ಬಾಳಿಗೆ ಬೆಳಕನ್ನು ನೀಡುತ್ತಿವೆ’ ಎಂದು ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಿರವಾರ ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಗುರುವಾರ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 9ನೇ ಆರಾಧನೆ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾನ್ವಿಯ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ಉದ್ಘಾಟಿಸಿದರು

ಸಿರವಾರ: ‘ಮಠಗಳು ಮಾನವ ಧರ್ಮದ ಏಳಿಗೆಗಾಗಿ ಶ್ರಮಿಸುತ್ತಿದ್ದು, ಇಂದಿನ ಮಠಗಳ ಸಾಮಾಜಿಕ ಚಿಂತನೆಗಳು ಬಡವರ ಬಾಳಿಗೆ ಬೆಳಕನ್ನು ನೀಡುತ್ತಿವೆ’ ಎಂದು ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಮೀಪಿದ ಬಲ್ಲಟಗಿಯಲ್ಲಿ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 9ನೇ ಆರಾಧನೆ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಒಂದು ಮದುವೆಗಾಗಿ ಬಡವರು ನಾನಾ ರೀತಿಯ ತೊಂದರೆ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಅನೇಕ ಮಠಮಾನ್ಯಗಳು ಸಾಮೂಹಿಕ ವಿವಾಹ ಕಾರ್ಯಗಳು, ಅನ್ನದಾಸೋಹ, ಅಕ್ಷರ ದಾಸೋಹಗಳಂತಹ ಮಹತ್ಕಾರ್ಯಗಳನ್ನು ನಡೆಸಿಕೊಡುತ್ತಿವೆ. ಅದರಲ್ಲಿಯೂ ಸಣ್ಣ ಹಳ್ಳಿಯಲ್ಲಿಯೂ ಸಹ ನೂರಾರೂ ಜೋಡಿಗಳ ಸಾಮೂಹಿಕ ವಿವಾಹಗಳನ್ನು ನಡೆಸಿಕೊಡುತ್ತಿರುವುದು ಸಾಮಾನ್ಯ ವಿಷಯವಲ್ಲ’ ಎಂದು ಹೇಳಿದರು.

‘ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ವಧು-ವರರಿಗೆ ಹತ್ತಾರು ಸ್ವಾಮೀಜಿಗಳು ಮತ್ತು ನೂರಾರು ಮುಖಂಡರ ಆಶೀರ್ವಾದದಿಂದ ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದರು.

ನೀಲಗಲ್ಲು ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಚ್ಚಾಲಿ-ಮಟಮಾರಿ ಸಾವಿರ ದೇವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಜಾಲಹಳ್ಳಿಯ ಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ 101 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Comments
ಈ ವಿಭಾಗದಿಂದ ಇನ್ನಷ್ಟು
ಕಡದರಗಡ್ಡಿ: ಮತದಾನ ಬಹಿಷ್ಕಾರ ಎಚ್ಚರಿಕೆ

ಲಿಂಗಸುಗೂರು
ಕಡದರಗಡ್ಡಿ: ಮತದಾನ ಬಹಿಷ್ಕಾರ ಎಚ್ಚರಿಕೆ

26 Apr, 2018

ಲಿಂಗಸುಗೂರು
ಕೋರ್ಟ್ ಮೊರೆ ಹೋಗಲು ತೀರ್ಮಾನ

‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕೇಂದ್ರದ ಅಧಿಸೂಚನೆ ಇಲ್ಲದೆ ವಡ್ಡರ್‌ ಜಾತಿ ಪ್ರಮಾಣ ಪತ್ರ ಪಡೆದು ಅಕ್ರಮ ಆಸ್ತಿ ರಕ್ಷಣೆಗೆ ತಪ್ಪು ಮಾಹಿತಿ ನೀಡಿ...

26 Apr, 2018

ಮಸ್ಕಿ
ಹಣಕ್ಕಾಗಿ ಬಿಜೆಪಿ ಟಿಕೆಟ್‌ ಮಾರಾಟ

‘ಬಿಜೆಪಿಯಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ಮುಖಂಡರ ಬೆನ್ನಿಗೆ ಚೂರಿ ಹಾಕಿ ಹಣವಂತರಿಗೆ ಬಿ.ಎಸ್‌.ಯಡಿಯೂರಪ್ಪ ಟಿಕೆಟ್ ಮಾರಾಟ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮಹಾದೇವಪ್ಪಗೌಡ ಪೊಲೀಸ್...

26 Apr, 2018
ಜನ ಬದಲಾವಣೆ ಬಯಸಿದ್ದಾರೆ

ರಾಯಚೂರು
ಜನ ಬದಲಾವಣೆ ಬಯಸಿದ್ದಾರೆ

25 Apr, 2018

ಮಾನ್ವಿ
‘ಕ್ಷೇತ್ರದ ಅಭಿವೃದ್ಧಿಗಾಗಿ ಬದಲಾವಣೆ ಮಾಡಿ’

ಮಾನ್ವಿ ‘ಕ್ಷೇತ್ರವನ್ನು 20ವರ್ಷಗಳ ದುರಾಡಳಿತದಿಂದ ಮುಕ್ತವಾಗಿಸಲು ಮತ್ತು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಮತದಾರರು ನಾಯಕತ್ವ ಬದಲಾವಣೆ ಮಾಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ...

25 Apr, 2018