ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಬದ್ಧತೆ ಅನುಕರಣೀಯ

ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ-ದಲ್ಲಿ ಪಾಡುರಂಗ ಹೇಳಿಕೆ
Last Updated 17 ಮಾರ್ಚ್ 2018, 10:12 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಮಹಿಳೆಯರಲ್ಲಿ ಯಾವುದೇ ಕೆಲಸ ಮಾಡುವ ಸಾಮರ್ಥ್ಯ, ಬದ್ಧತೆಯಿದ್ದು ಅದನ್ನು ಅರಿಯಬೇಕು ಎಂದು ಜೇಸಿ ರಾಷ್ಟ್ರೀಯ ತರಬೇತುದಾರ ಪಾಡುರಂಗ ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಜೇಸಿ ಸಂಸ್ಥೆಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಹಿಳೆಯರು ಸಾಕಷ್ಟು ಬಲಿಷ್ಠರಾಗಿದ್ದಾರೆ. ಕೃಷಿಯಲ್ಲೂ ಮಹಿಳೆಯರು ಶ್ರಮವಹಿಸಿ ಕೆಲಸ ಮಾಡುವವರು ಇದ್ದಾರೆ. ವ್ಯಕ್ತಿ ಮಾಡದಿರುವ ಕೆಲಸವನ್ನು ವ್ಯಕ್ತಿತ್ವ ಮಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಪಿ.ನಾಗರಾಜ್, ‘ಯಾವುದೇ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರಿಗೆ ಗೌರವಿಸುವುದು, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಮಹಿಳಾ ದಿನಾಚರಣೆ ಉದ್ದೇಶವಾಗಿದೆ. ಶೈಕ್ಷಣಿಕ ವಿಚಾರಗಳಿಗೆ ಶಿಕ್ಷಕರಿಗೆ ಹಲವು ತರಬೇತಿ ನೀಡಲಾಗುತ್ತದೆ. ಆದರೆ, ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಶಿಕ್ಷಕಿ ಶಿಲ್ಪಾ ಕುಮಾರಿ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಮಾಜವು ಮುಂದುವರೆಯಲೂ ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇಸಿ ಅಧ್ಯಕ್ಷ ಪೂರ್ಣೇಶ್, ‘ಮಹಿಳೆಯರಿಗೆ ಗೌರವಿಸುವುದರ ಮೂಲಕ ಉನ್ನತ ಸ್ಥಾನ ಒದಗಿಸಲು ಶ್ರಮಿಸಬೇಕು. ಶಿಕ್ಷಕರು ತರಬೇತುದಾರರಾಗಿದ್ದರೂ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ’ ಎಂದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಮಥಾಯಿ, ಶಿಕ್ಷಣ ಸಂಯೋಜಕ ರಾಜಕುಮಾರ್, ಜೇಸಿ ಕಾರ್ಯದರ್ಶಿ ಜಲೀಲ್‌ಸಾಬ್, ಉಪಾಧ್ಯಕ್ಷ ಅಪೂರ್ವ ರಾಘು, ಶಿಲ್ಪಶ್ರೀ, ಲೋಹಿತ್‌ಕುಮಾರ್, ಅರುಣ ಪಾಲ್ಗೊಂಡಿದ್ದರು.

*
ಮಹಿಳೆಯರ ಸಮಸ್ಯೆಗಳ ನಿವಾರಣೆಗೆ ಕಾನೂನಿಗಿಂತಲೂ ಜನರ ಮನೋಭಾವ ಬದಲಾವಣೆ ಆಗುವುದು ಮುಖ್ಯವಾಗಿದೆ.
-ಪಿ.ನಾಗರಾಜ್, ಕ್ಷೇತ್ರಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT