ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ಹೆಚ್ಚಳ ನಿರೀಕ್ಷೆ

Last Updated 17 ಮಾರ್ಚ್ 2018, 19:41 IST
ಅಕ್ಷರ ಗಾತ್ರ

ಮುಂಬೈ: ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹವು ಏಪ್ರಿಲ್‌ನಿಂದ ಏರಿಕೆ ಕಾಣಲಿದ್ದು, ಪ್ರತಿ ತಿಂಗಳೂ ₹ 90,000 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ ಎಂದು ಕೇಂದ್ರೀಯ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಇಸಿ) ಹೇಳಿದೆ.

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ₹ 86,703 ಕೋಟಿ ಇತ್ತು. ಅದು ಜನವರಿಯಲ್ಲಿ  ₹ 86,318 ಕೋಟಿಗೆ ಇಳಿಕೆ ಕಂಡಿತ್ತು.

‘ಮುಂದಿನ ಹಣಕಾಸು ವರ್ಷದಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡುಬರಲಿದೆ. ವ್ಯವಸ್ಥೆ ಸುಧಾಸುತ್ತಿದೆ. ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿ ಅವರನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು. ಈ ಕಾರಣಗಳಿಂದ ಜಿಎಸ್‌ಟಿಯಿಂದ ಬರುವ ವರಮಾನ ಹೆಚ್ಚಾಗಲಿದೆ’ ಎಂದು ಸಿಬಿಇಸಿ ಅಧ್ಯಕ್ಷೆ ವನಜಾ ಸರ್ನಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT