ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಲೋಕಸಭಾ ಕ್ಷೇತ್ರಕ್ಕೆ 49 ಹಳ್ಳಿ

ಉಭಯ ಶಾಸಕ– ಸಂಸದರ ಕೈಯಲ್ಲಿ ಕಾಳಗಿ ತಾಲ್ಲೂಕು ಚುಕ್ಕಾಣಿ!
Last Updated 19 ಮಾರ್ಚ್ 2018, 11:06 IST
ಅಕ್ಷರ ಗಾತ್ರ

ಕಾಳಗಿ: ಶಿಲ್ಪಕಲೆ ಮತ್ತು ನೀರಿನ ಬುಗ್ಗೆಯಿಂದ ಇತಿಹಾಸ ಪ್ರಸಿದ್ಧ ವಾಗಿರುವ ಕಾಳಗಿ ಪಟ್ಟಣ ಈಚೆಗೆ ಹೊಸ ತಾಲ್ಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ಕಾಳಗಿ ಮೂಲತಃ ಕಲಬುರ್ಗಿ ಜಿಲ್ಲೆಯಲ್ಲಿದ್ದರೂ ತಾಲ್ಲೂಕಿನ ಬಹಳಷ್ಟು ಹಳ್ಳಿಗಳು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ.

ತಾಲ್ಲೂಕಿನ ಕಾಳಗಿ, ಗುಂಡಗುರ್ತಿ, ಕೋಡ್ಲಿ ಮತ್ತು ಐನಾಪುರ ಹೋಬಳಿಯ 61 ಹಳ್ಳಿಗಳ ಪೈಕಿ 12 ಹಳ್ಳಿಗಳು ಮಾತ್ರ ಸ್ವಂತ ಜಿಲ್ಲೆಯಾದ ಕಲಬುರ್ಗಿ ಲೋಕಸಭಾ ಮತಕ್ಷೇತ್ರದಲ್ಲಿವೆ. ಉಳಿದ 49 ಹಳ್ಳಿಗಳು ನೆರೆಯ ಬೀದರ್ ಲೋಕಸಭಾ ಕ್ಷೇತ್ರದ ಕಡೆಗೆ ಮುಖಮಾಡಿವೆ.

ಅಷ್ಟೇ ಅಲ್ಲದೆ, ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದ 49 ಹಳ್ಳಿಗಳು ಚಿಂಚೋಳಿ ಶಾಸಕರ ಮತ್ತು ಕಲಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ 12 ಹಳ್ಳಿಗಳು ಚಿತ್ತಾಪುರ ಶಾಸಕರ ಆಡಳಿತಕ್ಕೆ ಹರಿದುಹಂಚಿ ಹೋಗಿ ಹೊಸ ತಾಲ್ಲೂಕಿನ ಆಡಳಿತಕ್ಕೆ ಇಬ್ಬರು ಶಾಸಕರು ಮತ್ತು ಇಬ್ಬರು ಸಂಸದರು ಬರುವಂತಾಗಿದೆ.

ಈ ತಾಲ್ಲೂಕಿಗೆ ಕಾಳಗಿ ಹೋಬಳಿಯ 26 ಹಳ್ಳಿಗಳು ಪೂರ್ಣ ಪ್ರಮಾಣದಲ್ಲಿ ಸೇರಿಕೊಂಡಿದ್ದರೆ, ಗುಂಡಗುರ್ತಿ ಹೋಬಳಿಯ 31 ಗ್ರಾಮಗಳ ಪೈಕಿ 12 ಊರು ಹೊಸ ತಾಲ್ಲೂಕಿಗೆ ಬಂದಿವೆ. ಅದರಂತೆ ಕೋಡ್ಲಿ ಹೋಬಳಿಯ 32 ಊರುಗಳ ಪೈಕಿ 21 ಊರು ಹಾಗೂ ಐನಾಪುರ ಹೋಬಳಿಯ 30 ಹಳ್ಳಿಗಳ ಪೈಕಿ 2 ಊರು ಕಾಳಗಿ ತಾಲ್ಲೂಕಿನ ಆಡಳಿತಕ್ಕೆ ಸೇರಿಕೊಂಡಿವೆ.

ಹಾಗೆ ಈ ತಾಲ್ಲೂಕಿನಲ್ಲಿ ಕಾಳಗಿ, ತೆಂಗಳಿ, ಅರಣಕಲ್, ಗುಂಡಗುರ್ತಿ, ಕೋಡ್ಲಿ, ಚಿಮ್ಮನಚೋಡ ಮತ್ತು ಸುಲೇಪೇಟ ಸೇರಿದಂತೆ ಒಟ್ಟು 7 ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿ ಹರಡಿಕೊಂಡಿದ್ದು 12 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, 17 ಗ್ರಾಮ ಪಂಚಾಯಿತಿಗಳು ಮತ್ತು 28 ತಾಂಡಾಗಳು ನೆಲೆಯೂರಿವೆ.

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು: ಕಾಳಗಿ, ರಾಜಾಪುರ, ಚಿಂಚೋಳಿ ಎಚ್., ಭೆಡಸೂರ, ಅರಣಕಲ್, ಹೆಬ್ಬಾಳ, ತೆಂಗಳಿ, ಕಲಗುರ್ತಿ, ಕೋಡ್ಲಿ, ರಟಕಲ್, ಮೊಘ, ಪಸ್ತಾಪುರ.

ಗ್ರಾಮ ಪಂಚಾಯಿತಿಗಳು: ಕಾಳಗಿ, ರಾಜಾಪುರ, ಗೋಟೂರ, ಚಿಂಚೋಳಿ ಎಚ್., ಅರಣಕಲ್, ಭೆಡಸೂರ, ಕಂದಗೂಳ, ಹೆಬ್ಬಾಳ, ತೆಂಗಳಿ, ಕೊಡದೂರ, ಕೋರವಾರ, ಕೋಡ್ಲಿ, ರಟಕಲ್, ರುಮ್ಮನಗೂಡ, ಮೊಘ, ಹಲಚೇರಾ, ಪಸ್ತಾಪುರ.

ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಹಳ್ಳಿಗಳು: ಕಾಳಗಿ ಜಿ.ಪಂ ಕ್ಷೇತ್ರ: ಕಾಳಗಿ, ಭರತನೂರ, ರಾಜಾಪುರ, ಮಲಘಾಣ, ಕಣಸೂರ, ಗೋಟೂರ, ಅಶೋಕನಗರ, ಬಣಬಿ, ಚಿಂಚೋಳಿ ಎಚ್., ಸುಗೂರ, ಮಳಗಾ, ಸಾಲಹಳ್ಳಿ, ಡೊಣ್ಣೂರ ಮತ್ತು 11 ತಾಂಡಾಗಳು.

ಅರಣಕಲ್ ಜಿ.ಪಂ ಕ್ಷೇತ್ರ: ಅರಣಕಲ್, ಕಂದಗೂಳ, ಹುಳಗೇರಾ, ರೇವಗ್ಗಿ, ಭೆಡಸೂರ, ಹೆಬ್ಬಾಳ, ಕಮಕನೂರ, ತೊಂಚಿ, ನಿಪ್ಪಾಣಿ, ಸಾವತಖೇಡ, ಹೇರೂರ, ವಟವಟಿ, ಕಲ್ಲಹಿಪ್ಪರ್ಗಾ, ಶೆಳ್ಳಗಿ, ಜೀವನಮಾರಡಗಿ, ಕನ್ನಡಗಿ, ಮಾವಿನಸೂರ ಹಾಗೂ 6 ತಾಂಡಾ.

ತೆಂಗಳಿ ಜಿ.ಪಂ ಕ್ಷೇತ್ರ: ತೆಂಗಳಿ, ಕೊಡ ದೂರ, ಮಂಗಲಗಿ, ಅರಜಂಬಗಾ ಮತ್ತು 2 ತಾಂಡಾ.

ಗುಂಡಗುರ್ತಿ ಜಿ.ಪಂ ಕ್ಷೇತ್ರ: ಕೋರವಾರ, ಕಲಗುರ್ತಿ, ಮುಚಖೇಡ ಮತ್ತು 1 ತಾಂಡಾ.

ಕೋಡ್ಲಿ ಜಿ.ಪಂ ಕ್ಷೇತ್ರ: ಕೋಡ್ಲಿ, ಅಲ್ಲಾಪುರ, ಹಲಚೇರಾ, ಚಿಂತಕೂಟ, ಹೊಸಳ್ಳಿ ಎಚ್., ನಾವದಗಿ, ತೇಗಲತಿಪ್ಪಿ, ವಜ್ಜರಗಾಂವ, ರಟಕಲ್, ಕಂಚನಾಳ, ಹುಲಸಗೂಡ, ಸುಂಠಾಣ, ಮುಕರಂಬಾ, ಮೊಘ, ರುಮ್ಮನಗೂಡ, ಗಾಂಧಿನಗರ, ಸಾಸರಗಾಂವ, ಸೇರಿ, ಕೊರವಿ, ಕುಡ್ಡಳ್ಳಿ ಮತ್ತು 6 ತಾಂಡಾ.

ಸುಲೇಪೇಟ ಜಿ.ಪಂ ಕ್ಷೇತ್ರ: ಪಸ್ತಾಪುರ, ತಾಡಪಳ್ಳಿ, ಗಂಜಗೇರಾ, 2 ತಾಂಡಾ.

ಚಿಮ್ಮನಚೋಡ ಜಿ.ಪಂ ಕ್ಷೇತ್ರ: ಗೊಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT