ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕಜ್ ಅಡ್ವಾಣಿ ಶುಭಾರಂಭ

Last Updated 19 ಮಾರ್ಚ್ 2018, 20:39 IST
ಅಕ್ಷರ ಗಾತ್ರ

ಯಂಗೂನ್‌: ಭಾರತದ ಪಂಕಜ್ ಅಡ್ವಾಣಿ ಸೋಮವಾರ ಇಲ್ಲಿ ಆರಂಭವಾದ 17ನೇ ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪಂಕಜ್‌ 4–0ರಲ್ಲಿ ಸಿಂಗಪುರದ ಯೊಟೆಕ್‌ ಶಿನ್ ಅವರನ್ನು ಮಣಿಸಿದರು.

ವೃತ್ತಿಜೀವನದಲ್ಲಿ ಪಂಕಜ್ 19 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಇಲ್ಲಿ ಮೂರು ಗೇಮ್‌ಗಳಲ್ಲಿ ಸತತವಾಗಿ ಅವರು 100ಪಾಯಿಂಟ್ಸ್ ಕಲೆಹಾಕಿದರು. ಎದುರಾಳಿಗೆ ಒಂದೂ ಗೇಮ್‌ ಗೆಲ್ಲುವ ಅವಕಾಶ ನೀಡಲಿಲ್ಲ.

ಭಾರತದ ಭರವಸೆಯ ಸ್ಪರ್ಧಿ ರೂಪೇಶ್‌ ಷಾ ಕೂಡ ಇಂಡೊನೇಷ್ಯಾದ ಮರ್ಲಾಂಡೊ ಶೀಹೊಬಿಂಗ್ ಎದುರು ಗೆದ್ದಿದ್ದಾರೆ.

ಮಹಿಳೆಯರ ಸ್ನೂಕರ್ ವಿಭಾಗದಲ್ಲಿ ಭಾರತದ ವಿದ್ಯಾ ಪಿಳ್ಳೈ ಮತ್ತು ಅಮೀ ಕಮಾನಿ ಕೂಡ ಮ್ಯಾನ್ಮಾರ್‌ ಆಟಗಾರ್ತಿಯರ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT