ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಆರ್‌.ಶ್ರೀನಿವಾಸರೆಡ್ಡಿ

ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಗುಂಜೂರು ಆರ್‌.ಶ್ರೀನಿವಾಸರೆಡ್ಡಿ ಹೇಳಿಕೆ
Last Updated 20 ಮಾರ್ಚ್ 2018, 7:17 IST
ಅಕ್ಷರ ಗಾತ್ರ

ಬಾಗೇಪಲ್ಲಿ:  ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿರದೇ, ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಸಮಾಜ ಸೇವಕ ಗುಂಜೂರು ಆರ್‌.ಶ್ರೀನಿವಾಸರೆಡ್ಡಿ ತಿಳಿಸಿದರು.

ಪಟ್ಟಣದ ಹೊರವಲಯದ ಜಡಲಭೈರವೇಶ್ವರ ದೇವಾಲಯದ ಪಕ್ಕದಲ್ಲಿ ಗುಂಜೂರು ಶ್ರೀನಿವಾಸರಡ್ಡಿ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಆಟದ ಸಮಾರೋಪದಲ್ಲಿ ಮಾತನಾಡಿದರು.

‘ನಮ್ಮನ್ನು ಆಳುವ ಸರ್ಕಾರಗಳು ಏನು ಮಾಡುತ್ತಿವೆ. ಯಾವ ಜನಪ್ರತಿನಿಧಿಯನ್ನು ತಾವು ಆರಿಸಿಕೊಂಡಾಗ ಎಂತಹ ಫಲಿತಾಂಶ ಬರಬಹುದು ಎನ್ನುವುದರ ಬಗ್ಗೆ ಗಮನ ಹೊಂದಬೇಕು. ಸಮಾಜ ಸೇವಕರು ಎಂದರೆ ಸಮಾಜದಲ್ಲಿನ ಬಡವರಿಗೆ, ನಿರ್ಗತಿಕರಿಗೆ, ಶೋಷಿತರಿಗೆ ಸೇರಿದಂತೆ ಬಡವರಿಗೆ ಸಹಾಯ ಮಾಡುವವರಾಗಿರುತ್ತಾರೆ. ನಾನು ಸಹ ಸಮಾಜ ಸೇವಕರಂತೆ ದುಡಿದ ಹಣವನ್ನು ಕ್ಷೇತ್ರದಲ್ಲಿನ ಬಡವರಿಗೆ ವಿವಿಧ ರೂಪಗಳಲ್ಲಿ ಸಹಾಯ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಕ್ರೀಡೆಗಳಲ್ಲಿ ಸೋಲು ಗೆಲುವು ಇರುತ್ತದೆ. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕ್ರೀಡೆಗಳು ಶಾಂತಿ ಮತ್ತು ಪ್ರೇಮ ಸಂಕೇತಗಳಾಗಬೇಕಾಗಿದೆ. ಯುವಕರು ಸಹ ಬರೀ ಕ್ರೀಡೆಗಳಿಗೆ ತಮ್ಮ ಆಲೋಚನೆ ಸೀಮಿತಗೊಳಿಸದೆ ನಮ್ಮ ಪರಿಸರ, ನಮ್ಮ ಊರು, ನಮ್ಮ ಕ್ಷೇತ್ರ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ ಎಂದರು.

ಪಟ್ಟಣದ ಹೊರವಲಯದ ಜಡಲಭೈರವೇಶ್ವರ ದೇವಾಲಯದ ಪಕ್ಕದಲ್ಲಿ 4 ದಿನಗಳ ಕಾಲ ಬಾಗೇಪಲ್ಲಿ ಕ್ಷೇತ್ರ ಮಟ್ಟದ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. 80ಕ್ಕೂ ಹೆಚ್ಚಿನ ತಂಡಗಳು
ಭಾಗವಹಿಸಿದ್ದವು.

ಗುಂಜೂರು ಶ್ರೀನಿವಾಸರೆಡ್ಡಿ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾ ರಿಗಳಾದ ಪೋತೇಪಲ್ಲಿ ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಹೆಚ್.ಎನ್.ಜಯರಾ ಮರೆಡ್ಡಿ, ರಾಮಚಂದ್ರಪ್ಪ   ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT