ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಜ್‌ ಯಾತ್ರೆ ರಿಯಾಯಿತಿ ಹಿಂಪಡೆಯಿರಿ’

ರಾಷ್ಟ್ರೀಯ ಹಿಂದೂ ಆಂದೋಲನದಿಂದ ಪ್ರತಿಭಟನೆ
Last Updated 20 ಮಾರ್ಚ್ 2018, 11:09 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ ಮಾತನಾಡಿ, ಕೇಂದ್ರ ಸರ್ಕಾರವು ಜನವರಿ 16ರಂದು ಹಜ್‌ಯಾತ್ರೆಗಾಗಿ ನೀಡಲಾಗುವ ಅನುದಾನವನ್ನು ನಿಲ್ಲಿಸಿದೆ. ಆದರೂ ಫೆಬ್ರುವರಿ 27ರಂದು ಹಜ್‌ಯಾತ್ರಿಗಳಿಗೆ ವಿಮಾನ ಯಾತ್ರೆಯಲ್ಲಿ ಶೇ 15 ರಿಂದ 45ರಷ್ಟು ರಿಯಾಯತಿ ನೀಡುವುದಾಗಿ ಘೋಷಿಸಿ ಮುಸಲ್ಮಾನರನ್ನು ಸಂತೋಷ ಪಡಿಸಿದೆ. ಒಂದು ಕಡೆ ಸರ್ಕಾರಿ ‘ಏರ್‌ ಇಂಡಿಯಾ’ ನಷ್ಟಕ್ಕೆ ಹೋದ ಕಾರ ಣವನ್ನು ಮುಂದಿಟ್ಟುಕೊಂಡು ಅದನ್ನು ಖಾಸಗೀಕರಣ ಮಾಡುವ ವಿಚಾರ ನಡೆಯುತ್ತಿರುವಾಗ ಮತ್ತೊಂದು ಕಡೆ ಯಿಂದ ಹಜ್ ಯಾತ್ರೆಯ ಹೆಸರಿನಲ್ಲಿ ಕೋಟ್ಯಂತ ರಿಯಾಯಿತಿ ನೀಡಿ, ಈ ಕಂಪನಿಯ ನಷ್ಟವನ್ನು ಭಾರವನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂದು ದೂರಿದರು.

ಹಜ್ ಅನುದಾನವನ್ನು ನಿಲ್ಲಿಸಿ, ಅಷ್ಟೇ ಮೊತ್ತವನ್ನು ವಿಮಾನಯಾ ತ್ರೆಯಲ್ಲಿ ರಿಯಾಯಿತಿ ನೀಡುವುದೆಂದರೆ, ಇದು ಒಂದು ರೀತಿಯಲ್ಲಿ ಹಿಂದೂಗಳ ಕಣ್ಣಿಗೆ ಮಣ್ಣೆರಚಿದಂತೆ. ಒಂದು ಕಡೆ ಸರ್ಕಾರವು ಅಮರನಾಥ ಯಾತ್ರಿಕರ ಸಂಖ್ಯೆಯನ್ನು ಕಡಿಮೆ ಮಾಡಿ ಮತ್ತೊಂದು ಕಡೆ ಹಜ್ ಯಾತ್ರಿಗಳ ಸಂಖ್ಯೆಯನ್ನು 1,75,025 ಕ್ಕೆ ಏರಿಸಿದೆ. ಇದು ಕಳೆದ 70 ವರ್ಷಗಳಲ್ಲಿನ ಅತ್ಯಂತ ಹೆಚ್ಚಿನದಾಗಿದೆ. ಇದೂ ಸಹ ವಿರೋಧಾಭಾಸವೇ ಇದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಹಜ್ ಯಾತ್ರಿಗಳಿಗೆ ವಿಮಾನ ಪ್ರಯಾಣ ದರವನ್ನು ಕಡಿಮೆ ಮಾಡಬೇಕೆಂ ದಿರುವ ವಿಚಾರವನ್ನು ತಕ್ಷಣ ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

ಹೈದರಾಬಾದಿನ ಬಾಲಾಪುರದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ರೋಹಿಂಗ್ಯಗಳಿಗೆ 108 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ನಿರ್ಮಾಣ ಕಾರ್ಯದ ಉದ್ಘಾಟನೆಯು ತೆಲಂ ಗಾಣದ ಉಪಮುಖ್ಯಮಂತ್ರಿ ಮಹ ಮೂದ್ ಅಲಿಯವರ ಹಸ್ತದಲ್ಲಿ ನೆರವೇರಿದೆ. ಇದಕ್ಕೂ ಮೊದಲು ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ವಸತಿ ಕಲ್ಪಿಸಲಾಗಿದೆ. ರೋಹಿಂಗ್ಯಗಳು ಭಯೋತ್ಪಾದನೆಯ ಕಾರ್ಯ ಮಾಡಿದರೆ, ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಹೈದರಾಬಾದ್‌ ಸಹಿತ ಸಂಪೂರ್ಣ ದೇಶದಲ್ಲಿ ರೋಹಿಂಗ್ಯ ಮುಸ ಲ್ಮಾನರಿಗಾಗಿ ವಸತಿ ನಿರ್ಮಿಸುವ ಅನು ಮತಿಯನ್ನು ರದ್ದುಪಡಿಸಿ ಅವರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಮಧುಸೂದನ ಅಯ್ಯರ್‌, ಲೋಕೇಶ ಕುತ್ತಾರ, ಸತೀಶ, ದಯಾನಂದ ವಳಚ್ಚಿಲ್‌, ಮಂಜುನಾಥ ಅಡ್ಯಾರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT