ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಕಲಿಸಿದ ಮಹಿಳೆ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಹುಶಃ ನಾನು ಆಗ ಐದನೇ ತರಗತಿಯಲ್ಲಿದ್ದೆ. ನಾನು ನನ್ನ ಗೆಳತಿ ಹೊರಗೆ ಸುತ್ತಾಡಲು ಹೋಗಿದ್ವಿ. ಹಾಗೆಯೇ ಬರಬೇಕಾದರೆ ದಾರಿ ಮಧ್ಯೆ ಚಿಪ್ಸ್‌ ಕೊಂಡು ತಿನ್ನುತ್ತಾ ಬಂದೆವು.

ನನ್ನ ಚಿಪ್ಸ್‌ ಖಾಲಿ ಆಯ್ತು, ತಕ್ಷಣವೇ ಪ್ಯಾಕೆಟನ್ನು ಮುದುರಿ ಎಸೆದೆ. ಅದು ಒಬ್ಬರ ಮನೆ ಮುಂದೆ ಬಿತ್ತು. ಆ ಮನೆಯ ಮಹಿಳೆ ನನಗೆ ಬೈಯಲು ಶುರು ಮಾಡಿಕೊಂಡರು. ಅಲ್ಲಿ ಇದ್ದವರೆಲ್ಲ ನನ್ನನ್ನೇ ದಿಟ್ಟಿಸಿದರು. ಆಗ ದುಃಖವಾಯ್ತು. ಆದರೆ ಅದು ನನ್ನಿಂದಾದ ತಪ್ಪು. ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಆಗಲೇ ನಿರ್ಧರಿಸಿದೆ. ಅಂದಿನಿಂದ ಇಂದಿನವರೆಗೂ ದಾರಿಯಲ್ಲಿ ಕಸ ಹಾಕಿಲ್ಲ. ನನ್ನ ಜೊತೆಗಿರುವವರಿಗೂ ಎಲ್ಲೆಂದರಲ್ಲಿ ಕಸ ಹಾಕದಂತೆ ತಿಳಿಸುತ್ತೇನೆ.

ಹೊರಗಡೆ ಹೋದಾಗ ನಾನು ತಿಂದ ತಿಂಡಿ ಪ್ಯಾಕೆಟ್‌, ಹಣ್ಣಿನ ಸಿಪ್ಪೆಗಳನ್ನು ರಸ್ತೆಯಲ್ಲಿರುವ ಕಸದ ಬುಟ್ಟಿಗೆ ಹಾಕುತ್ತೇನೆ. ಇಲ್ಲದಿದ್ದರೆ ಬ್ಯಾಗಿನಲ್ಲಿ ಹಾಕಿಕೊಂಡು ಮನೆಗೆ ಬಂದಾಗ ಕಸದ ಬುಟ್ಟಿಗೆ ಹಾಕುತ್ತೇನೆ.
–ಎಂ. ಎನ್. ಯಶಸ್ವಿನಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT