ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ಕಾರ್ಡ್‌ ವಿಳಂಬ ಭಾರತೀಯರ ಆಕ್ರೋಶ

ಬಾಕಿ ಉಳಿದಿರುವ ಪ್ರಕರಣಗಳಿಂದ 3ಲಕ್ಷ ಭಾರತೀಯರಿಗೆ ತೊಂದರೆ
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಪಾರ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ಗ್ರೀನ್‌ ಕಾರ್ಡ್‌ಗಳನ್ನು (ಶಾಶ್ವತವಾಗಿ ನೆಲೆಸುವ ಅವಕಾಶ) ತ್ವರಿತವಾಗಿ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತದ ಸಾವಿರಾರು ವೃತ್ತಿಪರರು ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸಿದ್ದಾರೆ.

ಪ್ರತಿ ದೇಶಕ್ಕೆ ನಿಗದಿಪಡಿಸಿರುವ ಮಿತಿ ತೆಗೆದುಹಾಕಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಉನ್ನತ ಕೌಶಲ ಹೊಂದಿರುವ ಭಾರತೀಯರು ‘ಎಚ್‌–1ಬಿ’ ವೀಸಾ ಆಧಾರದ ಮೇಲೆ ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ಆದರೆ, ಈಗಿರುವ ವಲಸೆ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನೀತಿ ಅನ್ವಯ ಪ್ರತಿ ದೇಶಕ್ಕೆ ಶೇಕಡ 7ರಷ್ಟು ಮಾತ್ರ ಗ್ರೀನ್‌ ಕಾರ್ಡ್‌ ವಿತರಿಸುವ ನಿರ್ಬಂಧ ವಿಧಿಸಲಾಗಿದೆ. ಇದರಿಂದ, ಕೌಶಲ ಹೊಂದಿರುವ ಭಾರತದ ವಲಸೆಗಾರರು 70 ವರ್ಷಗಳವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಭಾರತೀಯರು ತಿಳಿಸಿದ್ದಾರೆ.

ಗ್ರೀನ್‌ ಕಾರ್ಡ್‌ ವಿತರಣೆ ವಿಳಂಬದಿಂದ ಅಮೆರಿಕದಲ್ಲಿರುವ ಭಾರತದ ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ನರ್ಸ್‌ ವೃತ್ತಿಯಲ್ಲಿ ತೊಡಗಿರುವವರ ಮೇಲೆ ತೀವ್ರ ಪರಿಣಾಮ ಬೀರಿದೆ.

ವಲಸೆ ನೀತಿಯಿಂದ ಉಂಟಾಗುತ್ತಿರುವ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಕಳೆದ ವಾರ ಅರ್ಕನ್ಸಾಸ್‌, ಕೆಂಟುಕಿ ಮತ್ತು ಒರೆಗಾನ್‌ನಲ್ಲಿ ‘ಜಿಸಿರಿಫಾರ್ಮ್ಸ್‌’ ಸಂಸ್ಥೆ ರ‍್ಯಾಲಿಗಳನ್ನು ಆಯೋಜಿಸಿತ್ತು. ಇದೇ ರೀತಿಯ ರ‍್ಯಾಲಿಗಳನ್ನು ಅಮೆರಿಕದ ಉಳಿದ ರಾಜ್ಯಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ವಲಸೆ ನೀತಿ ಬಗ್ಗೆ ಅರಿವು ಮೂಡಿಸಲು ‘ಜಿಸಿರಿಫಾರ್ಮ್ಸ್‌’ ಸಂಸ್ಥೆಯನ್ನು ಭಾರತ ಮೂಲದ ಅಮೆರಿಕದವರು ಸ್ಥಾಪಿಸಿದ್ದಾರೆ.

‘ಈಗಿನ ಗ್ರೀನ್‌ಕಾರ್ಡ್‌ ನೀತಿಯ ಸಾಧಕ–ಬಾಧಕಗಳ ಬಗ್ಗೆ ಅಮೆರಿಕದ ಸಾರ್ವಜನಿಕರು ಮತ್ತು ಸಂಸದರಲ್ಲಿ ಅರಿವು ಮೂಡುತ್ತಿದೆ.  ಗ್ರೀನ್‌ಕಾರ್ಡ್‌ ವಿತರಣೆಯಲ್ಲಿ ಆಗುವ ತಾರತಮ್ಯ ಮತ್ತು ಬಾಕಿ ಉಳಿದಿರುವ ವಿಷಯದ ಬಗ್ಗೆ ಈಗ ಅವರು ನಮ್ಮ ಜತೆ ಕೈಜೋಡಿಸುತ್ತಿದ್ದಾರೆ’ ಎಂದು ‘ಜಿಸಿರಿಫಾರ್ಮ್ಸ್‌’ ಸಂಸ್ಥೆ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT