ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಬಳಕೆದಾರರ ಮಾಹಿತಿಗೆ ಕನ್ನ

Last Updated 20 ಮಾರ್ಚ್ 2018, 20:13 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ ಪರ ಪ್ರಚಾರ ಮಾಡುತ್ತಿದ್ದ ಬ್ರಿಟಿಷ್‌ ಕಂಪನಿ ಐದು ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಫೇಸ್‌ಬುಕ್‌ನಲ್ಲಿ ಅಮಾನತ್ತಾಗಿರುವ ‘ಕೇಂಬ್ರಿಜ್‌ ಅನಾಲಿಟಿಕ’ ಖಾತೆಯಿಂದ ಮಾಹಿತಿ ಸೋರಿಕೆಯಾಗಿದೆ. ಈ ಖಾತೆ ಟ್ರಂಪ್‌ ಪರ ಪ್ರಚಾರ ಮಾಡುತ್ತಿದ್ದ ಬ್ರಿಟಿಷ್‌ ಕಂಪನಿಗೆ ಸಂಬಂಧಿಸಿದ್ದು ಎಂದು ಫೇಸ್‌ಬುಕ್‌ ತಿಳಿಸಿದೆ.

ಈ ಪ್ರಕರಣದ ಬಗ್ಗೆ ಚರ್ಚಿಸಲು ಅಮೆರಿಕದ ಕಾಂಗ್ರೆಸ್‌ (ಸಂಸತ್‌) ಮುಂದೆ ಹಾಜರಾಗುವಂತೆ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌, ಗೂಗಲ್‌ ಹಾಗೂ ಟ್ವಿಟರ್‌ ಸಂಸ್ಥೆಯ ಸಿಇಓಗಳಿಗೆ ಸೂಚಿಸಲಾಗಿದೆ.

ಲಂಡನ್‌ ವರದಿ(ಎಪಿ): ಫೇಸ್‌ಬುಕ್‌ ಬಳಕೆದಾರರ ಮಾಹಿತಿ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತರಾದ ಎಲಿಜಬೆತ್ ಡೆನ್ಹಾಮ್ ತಿಳಿಸಿದ್ದಾರೆ.

ಈ ಮಧ್ಯೆ ವಿಚಾರಣೆಗೆ ಹಾಜರಾಗುವಂತೆ ಬ್ರಿಟನ್‌ ಸಂಸತ್ತಿನ ಸದನ ಸಮಿತಿ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌ ಅವರಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT